7 ಭರ್ಜರಿ ದಾಖಲೆಗಳನ್ನು ಬದಿಗಿಟ್ಟು ನಿವೃತ್ತಿ ಘೋಷಿಸಿದ Kane Williamson !

ನ್ಯೂಝಿಲೆಂಡ್ ಕ್ರಿಕೆಟ್ನ ದಿಗ್ಗಜ ಬ್ಯಾಟರ್ ಹಾಗೂ ಮಾಜಿ ನಾಯಕ ಕೇನ್ ವಿಲಿಯಮ್ಸನ್ ( Kane Williamson ) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ಈ ನಿವೃತ್ತಿಯೊಂದಿಗೆ ವಿಲಿಯಮ್ಸನ್ ಹಲವು ದಾಖಲೆಗಳನ್ನು ಅತ್ಯಂತ ಕಡಿಮೆ ಅಂತರದಲ್ಲಿ ಮಿಸ್ ಮಾಡಿಕೊಂಡಿದ್ದಾರೆ. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಕ್ರಿಕೆಟ್ಗೆ ಕಿವೀಸ್ ದಿಗ್ಗಜ ಕೇನ್ ವಿಲಿಯಮ್ಸನ್ ಗುಡ್ಬೈ
ಸುಮಾರು ಒಂದೂವರೆ ದಶಕಗಳ ಕಾಲ ನ್ಯೂಝಿಲೆಂಡ್ ಕ್ರಿಕೆಟ್ಗೆ ಸೇವೆ ಸಲ್ಲಿಸಿದ ಕೇನ್ ವಿಲಿಯಮ್ಸನ್, ಜೂನ್ 12, 2026 ರಂದು ಅಧಿಕೃತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು.
ಇದನ್ನು ಓದಿ : ಕೇನ್ ವಿಲಿಯಮ್ಸನ್ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಣೆ

Kane Williamson ನ 7 ಭರ್ಜರಿ ದಾಖಲೆಗಳು
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 20 ಸಾವಿರ ರನ್ಗಳ ಸಾಧನೆ ಮಾಡಲು ಕೇನ್ ವಿಲಿಯಮ್ಸನ್ಗೆ ಕೇವಲ 654 ರನ್ಗಳ ಅವಶ್ಯಕತೆ ಇತ್ತು. ಆದರೆ ಅವರು 19 ಸಾವಿರ 346 ರನ್ಗಳೊಂದಿಗೆ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನ ಅಂತ್ಯಗೊಳಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ನ್ಯೂಝಿಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿರುವ ವಿಲಿಯಮ್ಸನ್, 10 ಸಾವಿರ ರನ್ಗಳ ಮೈಲಿಗಲ್ಲು ತಲುಪಲು ಕೇವಲ 485 ರನ್ಗಳ ಕೊರತೆಯಿತ್ತು.
ಅವರು 9 ಸಾವಿರ 515 ರನ್ಗಳೊಂದಿಗೆ ಟೆಸ್ಟ್ ಕರಿಯರ್ಗೆ ತೆರೆ ಎಳೆದಿದ್ದಾರೆ

ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 48 ಶತಕಗಳನ್ನು ಸಿಡಿಸಿರುವ ಕೇನ್, 50 ಶತಕಗಳ ಅಪರೂಪದ ಸಾಧನೆ ಮಾಡಲು ಕೇವಲ ಎರಡು ಶತಕಗಳ ದೂರದಲ್ಲಿದ್ದರು. ಆದರೆ ಆ ಮೈಲಿಗಲ್ಲು ತಲುಪುವ ಮುನ್ನವೇ ನಿವೃತ್ತಿ ಘೋಷಿಸಿದ್ದಾರ
378 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ವಿಲಿಯಮ್ಸನ್, 400 ಪಂದ್ಯಗಳ ಸಾಧನೆ ಮಾಡಲು ಇನ್ನೂ 22 ಪಂದ್ಯಗಳು ಬೇಕಾಗಿತ್ತು.
ಅದೇ ರೀತಿ ಏಕದಿನ ಕ್ರಿಕೆಟ್ನಲ್ಲಿ 47 ಅರ್ಧಶತಕಗಳನ್ನು ಬಾರಿಸಿರುವ ಅವರು, 50 ಅರ್ಧಶತಕಗಳ ದಾಖಲೆಯಿಂದ ಕೇವಲ ಮೂರು ಇನ್ನಿಂಗ್ಸ್ ದೂರದಲ್ಲಿದ್ದರು.

ಸ್ಲಿಪ್ ಫೀಲ್ಡಿಂಗ್ನಲ್ಲಿ ಸುರಕ್ಷಿತ ಕೈಗಳೆಂದೇ ಖ್ಯಾತಿ ಪಡೆದಿದ್ದ ಕೇನ್ ವಿಲಿಯಮ್ಸನ್, ಟೆಸ್ಟ್ ಕ್ರಿಕೆಟ್ನಲ್ಲಿ 100 ಕ್ಯಾಚ್ಗಳ ದಾಖಲೆಗೆ ಕೇವಲ ನಾಲ್ಕು ಕ್ಯಾಚ್ಗಳ ಕೊರತೆಯಿತ್ತು. ಅವರು 96 ಕ್ಯಾಚ್ಗಳೊಂದಿಗೆ ತಮ್ಮ ಟೆಸ್ಟ್ ಪಯಣ ಮುಗಿಸಿದ್ದಾರೆ.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 93 ಪಂದ್ಯಗಳನ್ನು ಆಡಿರುವ ಕೇನ್, 100 ಪಂದ್ಯಗಳ ಮೈಲಿಗಲ್ಲು ತಲುಪಲು ಇನ್ನೂ ಏಳು ಪಂದ್ಯಗಳ ಅಗತ್ಯವಿತ್ತು.
ಆದರೆ ಆ ದಾಖಲೆಯನ್ನೂ ಅರ್ಧದಲ್ಲೇ ಬಿಟ್ಟು ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇದಾಗ್ಯೂ ಈ ದಾಖಲೆಯನ್ನು ಬದಿಗಿಟ್ಟು ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕೆರಿಯರ್ ಅಂತ್ಯಗೊಳಿಸಿದ್ದಾರೆ.

ಇದನ್ನು ನೋಡಿ : ಶ್.. ಬೆಂಗಳೂರಿನಲ್ಲಿ ಮತ್ತೆ ಚಿರತೆ ಕಾಟ – ತಡರಾತ್ರಿ ನಾಯಿಯನ್ನು ಹೊತ್ತೊಯ್ದ ಚಿರತೆ




