ICC Women’s T20 World Cup : ಪಾಕಿಸ್ತಾನವನ್ನು 64 ರನ್ಗಳಿಂದ ಮಣಿಸಿದ ಭಾರತ.

ICC Women’s T20 World Cup : ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 64 ರನ್ಗಳಿಂದ ಮಣಿಸಿ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಸ್ಮೃತಿ ಮಂಧಾನ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ದೀಪ್ತಿ ಶರ್ಮಾ ಅವರ ಮಾರಕ ಬೌಲಿಂಗ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆರಂಭದಲ್ಲೇ ಶಫಾಲಿ ವರ್ಮಾ 6 ರನ್ ಹಾಗೂ ಜೆಮಿಮಾ ರೋಡ್ರಿಗ್ಸ್ 1 ರನ್ಗೆ ಔಟಾಗಿ ಸಂಕಷ್ಟಕ್ಕೆ ಸಿಲುಕಿತು.
ಆದರೆ ಮೂರನೇ ವಿಕೆಟ್ಗೆ ಜೊತೆಯಾದ ಸ್ಮೃತಿ ಮಂಧಾನ ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ ಜೋಡಿ ಅಮೂಲ್ಯ 91 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾಯಿತು.

ಸ್ಮೃತಿ ಮಂಧಾನ ಸಿಡಿಲಬ್ಬರ
ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಸ್ಮೃತಿ ಮಂಧಾನ 44 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 68 ರನ್ ಸಿಡಿಸಿದರು. ಹರ್ಮನ್ಪ್ರೀತ್ ಕೌರ್ 36 ರನ್ಗಳ ಕೊಡುಗೆ ನೀಡಿದರು.
ಇದನ್ನು ಓದಿ : Women’s T20 World Cup ಭಾರತದ ಪಂದ್ಯಗಳು, ತಂಡಗಳು ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ..!!

ರಿಚಾ-ದೀಪ್ತಿ ಸ್ಪೋಟಕ ಆಟ
ಕೊನೆಯ ಹಂತದಲ್ಲಿ ರಿಚಾ ಘೋಷ್ ಮತ್ತು ದೀಪ್ತಿ ಶರ್ಮಾ ಜೋಡಿ ಕೇವಲ 21 ಎಸೆತಗಳಲ್ಲಿ 45 ರನ್ ಕಲೆಹಾಕಿತು. ರಿಚಾ ಘೋಷ್ 17 ಎಸೆತಗಳಲ್ಲಿ 34 ರನ್ ಸಿಡಿಸಿ ಭಾರತದ ಮೊತ್ತವನ್ನು 170 ರನ್ಗಳಿಗೆ ತಲುಪಿಸಿದರು.
171 ರನ್ ಗುರಿ ಬೆನ್ನಟ್ಟಿದ ಪಾಕ್
171 ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ಒಂದು ಹಂತದಲ್ಲಿ 53 ರನ್ಗೆ ಕೇವಲ ಒಂದು ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು.
ಆದರೆ ದೀಪ್ತಿ ಶರ್ಮಾ ಅವರ ಸ್ಪಿನ್ ದಾಳಿಗೆ ಪಾಕ್ ಬ್ಯಾಟರ್ಗಳು ಉತ್ತರ ಕಂಡುಕೊಳ್ಳಲಿಲ್ಲ.

5 ಕಿತ್ತ ದೀಪ್ತಿ ಶರ್ಮಾ
ಅದ್ಭುತ ಬೌಲಿಂಗ್ ಪ್ರದರ್ಶಿಸಿದ ದೀಪ್ತಿ ಶರ್ಮಾ 4 ಓವರ್ಗಳಲ್ಲಿ ಕೇವಲ 10 ರನ್ ನೀಡಿ 5 ಪ್ರಮುಖ ವಿಕೆಟ್ ಕಬಳಿಸಿದರು. ಜೊತೆಗೆ ಪಾಕ್ ಪರ ಹೋರಾಟ ನಡೆಸುತ್ತಿದ್ದ ಮುನೀಬಾ ಅಲಿ ಅವರನ್ನು ರನೌಟ್ ಮಾಡುವ ಮೂಲಕ ಗೆಲುವಿನ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದರು.
ದೀಪ್ತಿಗೆ ಉತ್ತಮ ಸಾಥ್ ನೀಡಿದ ಶ್ರೀ ಚರಣಿ 3 ವಿಕೆಟ್ ಪಡೆದುಕೊಂಡರೆ, ಶಫಾಲಿ ವರ್ಮಾ ಒಂದು ವಿಕೆಟ್ ಕಬಳಿಸಿದರು.
ಪರಿಣಾಮ ಪಾಕಿಸ್ತಾನ ತಂಡ 106 ರನ್ಗಳಿಗೆ ಆಲೌಟ್ ಆಗಿ 64 ರನ್ಗಳ ಸೋಲು ಅನುಭವಿಸಿತು.
ಇದನ್ನು ನೋಡಿ : ಜಮೀರ್ ಅಭಿಮಾನಿಗಳಿಂದ ಪಾದಯಾತ್ರೆ ಸಚಿವ ಸ್ಥಾನಕ್ಕಾಗಿ ಬೆಂಗಳೂರಿಗೆ ನಡಿಗೆ





