ICC ODI Ranking : ಏಕದಿನದಲ್ಲಿ ಪ್ರಿನ್ಸ್ ಶುಭ್ಮನ್ ಗಿಲ್ಗೆ ನಂ.1 ಕಿರೀಟ

ICC ODI Ranking : ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ಇದೀಗ ಏಕದಿನ ಬ್ಯಾಟ್ಸ್ಮನ್ಗಳ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೇರಿದ್ದಾರೆ. ಕಳೆದ ವಾರ ಕೇವಲ ಒಂದು ಅಂಕದ ಅಂತರದಿಂದ ಅಗ್ರಸ್ಥಾನ ತಪ್ಪಿಸಿಕೊಂಡಿದ್ದ ಗಿಲ್, ಈ ವಾರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಅಗ್ರಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಗಿಲ್ ಭರ್ಜರಿ ಫಾರ್ಮ್
ಕಳೆದ ನಾಲ್ಕು ಏಕದಿನ ಇನ್ನಿಂಗ್ಸ್ಗಳಲ್ಲಿ ಶುಭ್ಮನ್ ಗಿಲ್ ಎರಡು ಅರ್ಧಶತಕ ಹಾಗೂ ಒಂದು ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಗಿಲ್ ಒಟ್ಟು 188 ರನ್ ಗಳಿಸಿ ಗಮನ ಸೆಳೆದಿದ್ದರು.
ಈ ವರ್ಷ ಏಕದಿನ ಕ್ರಿಕೆಟ್ನಲ್ಲಿ ಗಿಲ್:
- 142ರ ಸರಾಸರಿಯಲ್ಲಿ 426 ರನ್
- 116.71 ಸ್ಟ್ರೈಕ್ ರೇಟ್
ಗಳಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇನ್ನು ಏಕದಿನ ವೃತ್ತಿಜೀವನದಲ್ಲಿ ಗಿಲ್ 60.33ರ ಸರಾಸರಿಯಲ್ಲಿ 3,379 ರನ್ಗಳನ್ನು ಕಲೆಹಾಕಿದ್ದಾರೆ.

7 ಅಂಕಗಳ ಮುನ್ನಡೆಯೊಂದಿಗೆ ನಂಬರ್ 1
ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಶುಭ್ಮನ್ ಗಿಲ್ 801 ರೇಟಿಂಗ್ ಪಾಯಿಂಟ್ಗಳೊಂದಿಗೆ ಮೊದಲ ಸ್ಥಾನಕ್ಕೇರಿದ್ದಾರೆ. ಇದುವರೆಗೆ ಅಗ್ರಸ್ಥಾನದಲ್ಲಿದ್ದ ನ್ಯೂಜಿಲೆಂಡ್ನ ಡ್ಯಾರಿಲ್ ಮಿಚೆಲ್ 794 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಇಬ್ಬರ ನಡುವೆ ಕೇವಲ 7 ಅಂಕಗಳ ಅಂತರವಿದೆ.
ಇದನ್ನು ಓದಿ : ಇಂಗ್ಲೆಂಡ್ನಲ್ಲಿ ವಿರಾಟ್ ಕೊಹ್ಲಿಯ ದಾಖಲೆ ಮುರಿದ ಶುಭಮನ್ ಗಿಲ್
ಕೊಹ್ಲಿ, ರೋಹಿತ್ ಟಾಪ್-4ರಲ್ಲಿ
ಭಾರತದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
- ವಿರಾಟ್ ಕೊಹ್ಲಿ – 767 ರೇಟಿಂಗ್ ಪಾಯಿಂಟ್ಗಳೊಂದಿಗೆ 3ನೇ ಸ್ಥಾನ
- ರೋಹಿತ್ ಶರ್ಮಾ – 758 ರೇಟಿಂಗ್ ಪಾಯಿಂಟ್ಗಳೊಂದಿಗೆ 4ನೇ ಸ್ಥಾನ
ಇನ್ನು ಅಫ್ಘಾನಿಸ್ತಾನದ ಇಬ್ರಾಹಿಂ ಜದ್ರಾನ್ 712 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಬಾಬರ್ ಆಝಂ 689 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ನ ಜೋ ರೂಟ್ 674 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್ ಶ್ರೇಯಾಂಕದಲ್ಲೂ ಭಾರತೀಯರ ಸ್ಥಾನ
ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದ ಟಾಪ್-10 ಪಟ್ಟಿಯಲ್ಲಿ ಇಬ್ಬರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ.
- ಶುಭ್ಮನ್ ಗಿಲ್ – 7ನೇ ಸ್ಥಾನ (743 ರೇಟಿಂಗ್ ಪಾಯಿಂಟ್)
- ಯಶಸ್ವಿ ಜೈಸ್ವಾಲ್ – 9ನೇ ಸ್ಥಾನ (733 ರೇಟಿಂಗ್ ಪಾಯಿಂಟ್)
ಇದನ್ನು ನೋಡಿ : TAMIL NADUಗೆ ನೀರು ಹರಿಸಲು ಆದೇಶ – ನಮಗೆ ನೀರು ಇಲ್ಲ ಅಂದ್ರು ಕೊಡ್ಬೇಕಾ?





