
ಯೂಟ್ಯೂಬರ್ ಮಧು ಗೌಡ ಪತಿ ವಿರುದ್ಧ ಹಿಟ್ & ರನ್ ಆರೋಪ – FIR ದಾಖಲು, ಕಾರು ಸೀಜ್!
ಯೂಟ್ಯೂಬರ್ ಮಧು ಗೌಡ ಅವರ ಪತಿ ನಿಖಿಲ್ ರವೀಂದ್ರ ವಿರುದ್ಧ ಹಿಟ್ ಅಂಡ್ ರನ್ ಆರೋಪ ಕೇಳಿಬಂದಿದೆ. ಮೈಸೂರಿನಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಕಾರಿನಿಂದ ಡಿಕ್ಕಿ ಹೊಡೆದು, ಗಾಯಾಳುವಿನ ನೆರವಿಗೆ ನಿಲ್ಲದೆ ಸ್ಥಳದಿಂದ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿ.ವಿ.ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಬೈಕ್ಗೆ ಡಿಕ್ಕಿ ಹೊಡೆದು ಕಾರಿನಲ್ಲಿ ಎಸ್ಕೇಪ್..?
ಮೈಸೂರಿನ ವಿ.ವಿ.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಧು ಗೌಡ ಅವರ ಪತಿ ನಿಖಿಲ್ ರವೀಂದ್ರ ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಅದೇ ರಸ್ತೆಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ಅಭಿಷೇಕ್ ಅವರಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಅಭಿಷೇಕ್ ಅವರ ಕೈ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದ್ದು, ಮೂಳೆ ಮುರಿತವಾಗಿದೆ ಎಂದು ತಿಳಿದುಬಂದಿದೆ.
READ THIS : ಮಗನ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ದೊಡ್ಡ ಗಿಫ್ಟ್ ಕೊಟ್ಟ ದಾಸ

ಗಾಯಾಳುವಿನ ನೆರವಿಗೆ ನಿಲ್ಲದೆ ಪರಾರಿ?
ಇನ್ನು ಗಾಯಗೊಂಡ ಅಭಿಷೇಕ್ ಅವರು ತಮ್ಮ 9 ತಿಂಗಳ ಮಗುವಿನ ನಾಮಕರಣ ಕಾರ್ಯಕ್ರಮದ ಸಿದ್ಧತೆಯಲ್ಲಿದ್ದರು ಎಂದು ತಿಳಿದುಬಂದಿದೆ. ಆದರೆ ಅಪಘಾತದಿಂದಾಗಿ ಕುಟುಂಬದ ಸಂಭ್ರಮದ ಸಿದ್ಧತೆಯ ನಡುವೆ ಸಂಕಷ್ಟ ಎದುರಾಗಿದೆ.
ನಿಖಿಲ್ ವಿರುದ್ಧ FIR – ಕಾರು ಸೀಜ್!
ಇನ್ನು ಅಪಘಾತ ಸಂಭವಿಸಿದ ಬಳಿಕ ಕಾರು ನಿಲ್ಲಿಸದೆ, ಗಾಯಾಳುವಿನ ಯೋಗಕ್ಷೇಮವನ್ನೂ ವಿಚಾರಿಸದೆ ನಿಖಿಲ್ ಸ್ಥಳದಿಂದ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ವಿ.ವಿ.ಪುರಂ ಸಂಚಾರಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಅಪಘಾತಕ್ಕೆ ಸಂಬಂಧಿಸಿದ ಕಾರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

MUST WATCH : ದೈವಿಕ ಶಕ್ತಿ VS ದುಷ್ಟಶಕ್ತಿ ರುಧಿರ್ವನ ರಿಲೀಸ್ ಡೇಟ್ ಫಿಕ್ಸ್




