
RATE HIKE : ಇಂದಿನಿಂದ ರಾಜ್ಯಾದ್ಯಂತ ಹಾಲು, ಮೊಸರು ದುಬಾರಿ
ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ರಾಜ್ಯದ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ನಿತ್ಯದ ಬಳಕೆಯ ಹಾಲು ಮತ್ತು ಮೊಸರಿನ ದರ ಇಂದಿನಿಂದ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಹೆಚ್ಚುವರಿ ಹೊರೆ ಬಿದ್ದಿದೆ.
READ THIS : ರಾಜ್ಯದ ಜನರಿಗೆ KMF ಸಿಹಿಸುದ್ದಿ- 10 ರೂಪಾಯಿಗೆ ಸಿಗಲಿದೆ ನಂದಿನಿ ಹಾಲು..!

ಹಾಲಿನ ದರದಲ್ಲಿ ಬರೋಬ್ಬರಿ 8 ರೂಪಾಯಿ
ಒಂದು ಲೀಟರ್ ಹಾಲಿನ ದರದಲ್ಲಿ ಬರೋಬ್ಬರಿ 8 ರೂಪಾಯಿ ಹೆಚ್ಚಳವಾಗಿದ್ದರೆ, 54 ರೂಪಾಯಿ ಇದ್ದ ಒಂದು ಲೀಟರ್ ಮೊಸರಿನ ಬೆಲೆ ಇದೀಗ 68 ರೂಪಾಯಿಗೆ ಏರಿಕೆಯಾಗಿದೆ. ಪ್ರತಿದಿನ ಹಾಲು ಖರೀದಿಸುವ ಗ್ರಾಹಕರು ಇನ್ಮುಂದೆ ಹೆಚ್ಚುವರಿ ಹಣ ತೆರಬೇಕಾಗಿದೆ. ಇನ್ನೊಂದೆಡೆ, ಹಾಲಿನ ದರ ಹೆಚ್ಚಳದಿಂದ ರೈತರಿಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆಯಿದೆ.

ಹೈನುಗಾರಿಕೆಗೆ ಉತ್ತೇಜನ
ಹಾಲು ಉತ್ಪಾದಕರಿಗೆ ಉತ್ತಮ ಬೆಲೆ ಸಿಗುವ ಮೂಲಕ ಹೈನುಗಾರಿಕೆಗೆ ಉತ್ತೇಜನ ಸಿಗಲಿದೆ. ಒಟ್ಟಿನಲ್ಲಿ, ಕನ್ನಡ ರಾಜ್ಯೋತ್ಸವದ ದಿನವೇ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದರೆ, ಹೈನುಗಾರರಿಗೆ ಮಾತ್ರ ಖುಷಿಕೊಟ್ಟಿದೆ.
MUST WATCH : ಕೇಂದ್ರದಿಂದ ರಾಜ್ಯಗಳಿಗೆ ಬಂಫರ್ ಗಿಫ್ಟ್ – ಕರ್ನಾಟಕದ ಪಾಲು ಎಷ್ಟು ಗೊತ್ತಾ..?




