
ಕೇಂದ್ರ ಸರ್ಕಾರದಿಂದ GST ಹಂಚಿಕೆ ಬಿಡುಗಡೆ – ರಾಜ್ಯಗಳಿಗೆ ಕೇಂದ್ರದಿಂದ 1.09 ಲಕ್ಷ ಕೋಟಿ ರೂ. ಗಿಫ್ಟ್!
ರಾಜ್ಯಗಳ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ಬಲ ತುಂಬಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ದೇಶದ ಎಲ್ಲಾ ರಾಜ್ಯಗಳಿಗೆ ಒಟ್ಟು 1 ಲಕ್ಷದ 9 ಸಾವಿರದ 19 ಕೋಟಿ ರೂಪಾಯಿ ತೆರಿಗೆ ಪಾಲನ್ನು ಬಿಡುಗಡೆ ಮಾಡಿದೆ.
ಕರ್ನಾಟಕಕ್ಕೆ ಕೇಂದ್ರದಿಂದ 4,504 ಕೋಟಿ ರೂ. ಅನುದಾನ!
ಈ ಪೈಕಿ ಕರ್ನಾಟಕದ ಪಾಲಿಗೆ 4 ಸಾವಿರದ 504 ಕೋಟಿ ರೂಪಾಯಿ ಸಿಕ್ಕಿದೆ. ವಿಶೇಷ ಅಂದ್ರೆ, ರಾಜ್ಯಗಳಿಗೆ ಪ್ರತಿ ತಿಂಗಳು ನಿಯಮಿತವಾಗಿ ನೀಡುವ ತೆರಿಗೆ ಪಾಲಿನ ಜೊತೆಗೆ ಈ ಹೆಚ್ಚುವರಿ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ಎರಡನೇ ಹೆಚ್ಚುವರಿ ಕಂತು ಇದಾಗಿದ್ದು, ಕಳೆದ ಆಗಸ್ಟ್ನಲ್ಲೂ ಕೇಂದ್ರ ಸರ್ಕಾರ 1.09 ಲಕ್ಷ ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು.
READ THIS : ಜನಗಣತಿ-2027ಕ್ಕೆ ರಾಜ್ಯ ಸರ್ಕಾರ ಸಿದ್ಧತೆ – ₹134.14 ಕೋಟಿ ಅನುದಾನ ಬಿಡುಗಡೆ

GST ಹಂಚಿಕೆ – ಅಭಿವೃದ್ಧಿ ಕಾಮಗಾರಿಗಳಿಗೆ ಆರ್ಥಿಕ ಬಲ ತುಂಬಲು ಕ್ರಮ!
ರಾಜ್ಯಗಳ ಕಲ್ಯಾಣ ಯೋಜನೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಹಣಕಾಸಿನ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಈ ಮೊತ್ತವನ್ನು ಮುಂಚಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಇನ್ನು ತೆರಿಗೆ ಹಂಚಿಕೆಯಲ್ಲಿ ಉತ್ತರ ಪ್ರದೇಶಕ್ಕೆ ಅತಿ ಹೆಚ್ಚು 19 ಸಾವಿರದ 208 ಕೋಟಿ ರೂಪಾಯಿ ಸಿಕ್ಕಿದ್ದರೆ, ಕರ್ನಾಟಕಕ್ಕೆ 4 ಸಾವಿರದ 504 ಕೋಟಿ ರೂಪಾಯಿ ಹಂಚಿಕೆಯಾಗಿದೆ. ಬಿಹಾರ ರಾಜ್ಯಕ್ಕೆ 10 ಸಾವಿರದ 845 ಕೋಟಿ ರೂಪಾಯಿ ಬಿಡುಗಡೆಯಾಗಿದೆ.

MUST WATCH : 15 ವರ್ಷದ ಹೋರಾಟಕ್ಕೆ ಕೊನೆಗೂ ಜಯ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಮುಂದು




