
ಕನ್ನಡ ರಾಜ್ಯೋತ್ಸವಕ್ಕೆ ಕನ್ನಡಿಗರಿಗೆ HMT ಯಿಂದ ವಿಶೇಷ ಉಡುಗೊರೆ!
ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಈ ಬಾರಿ ಹೆಚ್ಎಂಟಿ ಸಂಸ್ಥೆ ಕನ್ನಡಿಗರಿಗೆ ವಿಶೇಷ ಉಡುಗೊರೆ ನೀಡಿದೆ. ಕನ್ನಡಿಗರ ಹೆಮ್ಮೆಯ HMT ಸಂಸ್ಥೆಯಿಂದ ಇದೀಗ ಕನ್ನಡಿಗರಿಗಾಗಿಯೇ ವಿಶೇಷ ವಾಚ್ ಪರಿಚಯಿಸಲಾಗಿದೆ.
READ THIS : ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಿಖಿಲ್ ಟ್ವೀಟ್.!

ಕನ್ನಡಿಗರಿಗೆ ಸಿಗುತ್ತೆ HMT ಕನ್ನಡಿಗ ವಾಚ್
‘ಕನ್ನಡಿಗ’ ಹೆಸರಿನ ಈ ವಾಚ್ ಅನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಮರ್ಪಿಸಿದ್ದಾರೆ. ರಾಜ್ಯೋತ್ಸವದ ದಿನವೇ ಕನ್ನಡಿಗರಿಗೆ ಈ ವಿಶೇಷ ಕೊಡುಗೆ ನೀಡುವ ಮೂಲಕ ಹೆಚ್ಎಂಟಿ ಸಂಸ್ಥೆ ಗಮನ ಸೆಳೆದಿದೆ. ಇನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೆಚ್ಎಂಟಿ ಮೈದಾನದಲ್ಲಿ ಈ ವಿಶೇಷ ಗಡಿಯಾರಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಹೆಚ್ಎಂಟಿ ಕೈಗಡಿಯಾರಗಳಿಗೆ ಭಾರಿ ಬೇಡಿಕೆ
ಇನ್ನು ಹಿಂದೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಹೆಚ್ಎಂಟಿ ಕೈಗಡಿಯಾರಗಳಿಗೆ ಭಾರಿ ಬೇಡಿಕೆಯುಂಟಾಗಿತ್ತು. ಹೆಚ್ಎಂಟಿ ಮಾರಾಟ ಮಳಿಗೆಗಳ ಮುಂದೆ ಖರೀದಿಸಲು ಜನರು ಕಿಲೋಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ರು.
MUST WATCH : 71ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ… ತುಮಕೂರಲ್ಲಿ ಕೃಷ್ಣಬೈರೇಗೌಡರಿಂದ ಧ್ವಜಾರೋಹಣ





