ಕಾಮನ್ವೆಲ್ತ್ ಗೇಮ್ಸ್; ಮೈಸೂರಿನ ಪ್ಯಾರಾ ಅಥ್ಲೀಟ್ ಶಿಲ್ಪಾರನ್ನು ಗೌರವಿಸಿದ HDK

2026ರ ಕಾಮನ್ವೆಲ್ತ್ ಕ್ರೀಡಾಕೂಟದ (CWG 2026) ಮಹಿಳೆಯರ ಶಾಟ್ಪುಟ್ F-57 ವಿಭಾಗದಲ್ಲಿ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಪ್ಯಾರಾ ಅಥ್ಲೀಟ್ ಹಾಗೂ ಹೆಮ್ಮೆಯ ಕನ್ನಡತಿ ಶಿಲ್ಪಾ ಕೆ. ಶೈಲಾ ಅವರನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ಬುಧವಾರ ಸನ್ಮಾನಿಸಿ ಅಭಿನಂದಿಸಿದರು.
ಪದಕ ಗೆದ್ದಿರುವುದು ಹೆಮ್ಮೆಯ ಸಂಗತಿ
ಶಿಲ್ಪಾ ಹಾಗೂ ಅವರ ಇಬ್ಬರು ತರಬೇತುದಾರರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಗೌರವಿಸಿದ HDK , ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು. ಈ ವೇಳೆ ಶಿಲ್ಪಾ ಅವರ ಹಿನ್ನೆಲೆ, ಕ್ರೀಡಾ ಪಯಣ, ಇದುವರೆಗಿನ ಸಾಧನೆ ಹಾಗೂ ಕುಟುಂಬದ ಕುರಿತು ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನು ಓದಿ : Gilli ಗೆ ರಾಜಕೀಯ ನಾಯಕರ ಬೆಂಬಲ -ಸಿದ್ದು,DKಶಿ,HDK ಅಭಿನಂದನೆ..!

ಯುವ ಪೀಳಿಗೆಗೆ ನೀವು ಆದರ್ಶ
“ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ನಿಮ್ಮ ಸಾಧನೆ ಪ್ರೇರಣಾದಾಯಕ ಹಾಗೂ ಐತಿಹಾಸಿಕವಾಗಿದೆ. ನೀವು ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕೆ.ಆರ್.ನಗರ ತಾಲೂಕಿನವರು ಎಂಬುದು ಮತ್ತಷ್ಟು ಹೆಮ್ಮೆಯ ವಿಷಯ. ಯುವ ಪೀಳಿಗೆಗೆ ನೀವು ಆದರ್ಶವಾಗಿದ್ದೀರಿ,” ಎಂದು ಕುಮಾರಸ್ವಾಮಿ ಹೇಳಿದರು.
ಈ ವೇಳೆ ಶಿಲ್ಪಾ ಅವರ ತರಬೇತುದಾರರಾದ ಸತ್ಯನಾರಾಯಣ ಹಾಗೂ ಪುಷ್ಪಾ ನಿರಂಜನ್ ಪ್ರಸಾದ್ ಅವರನ್ನೂ ಸಚಿವರು ಸನ್ಮಾನಿಸಿ, ಅವರ ಸೇವೆಯನ್ನು ಶ್ಲಾಘಿಸಿದರು.

ಇದನ್ನು ನೋಡಿ : ಮಳೆಗಾಗಿ ಕತ್ತೆಗಳ ಅದ್ಧೂರಿ ಮದುವೆ – ಶಾಸ್ತ್ರೋಕ್ತ ಮದುವೆ ಬಳಿಕ ಮೆರವಣಿಗೆ




