ಬೆಂಗಳೂರು Metro ಟಿಕೆಟ್ ದರ ಏರಿಕೆ ಪ್ರಸ್ತಾಪಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಬಿಎಂಆರ್ಸಿಎಲ್ ಬೋರ್ಡ್ ಸಭೆಯಲ್ಲಿ ದರ ಹೆಚ್ಚಳ ಬೇಡ ಎಂಬ ನಿರ್ಧಾರ ಕೈಗೊಳ್ಳಲಾಗಿದೆ.

ಬೆಲೆ ಏರಿಕೆಯ ನಡುವೆಯೂ ಬೆಂಗಳೂರಿನ Metro ಪ್ರಯಾಣಿಕರಿಗೆ ಸದ್ಯಕ್ಕೆ ಟಿಕೆಟ್ ದರ ಏರಿಕೆಯ ಬಿಸಿ ತಟ್ಟುವುದಿಲ್ಲ.
ನಮ್ಮ ಮೆಟ್ರೋ ದರ ಮತ್ತೊಮ್ಮೆ ಹೆಚ್ಚಳವಾಗಬಹುದು ಎಂಬ ಚರ್ಚೆ ನಡೆಯುತ್ತಿದ್ದ ವೇಳೆ, ಬಿಎಂಆರ್ಸಿಎಲ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.
ಬೋರ್ಡ್ ಸಭೆಯಲ್ಲಿ ಏನಾಯಿತು?
ಏಪ್ರಿಲ್ 23ರಂದು ನಡೆದ ಬೋರ್ಡ್ ಸಭೆಯಲ್ಲಿ ಬಿಎಂಆರ್ಸಿಎಲ್ ಟಿಕೆಟ್ ದರ ಏರಿಕೆ ಕುರಿತು ಪ್ರಸ್ತಾಪ ಮಂಡಿಸಿತ್ತು.
ಆದರೆ ಸಭೆಯಲ್ಲಿ ಭಾಗಿಯಾಗಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಸದ್ಯಕ್ಕೆ ದರ ಏರಿಕೆ ಬೇಡ ಎಂದು ಸೂಚನೆ ನೀಡಿದ್ದಾರೆ.
ಹೀಗಾಗಿ ಮುಂದಿನ ಬೋರ್ಡ್ ಸಭೆಯಲ್ಲಿ ಮತ್ತೆ ಈ ವಿಚಾರ ಚರ್ಚೆಗೆ ಬರಬಹುದು ಎಂದು ತಿಳಿದುಬಂದಿದೆ.
MUST READ : ಸಾರಿಗೆ ನೌಕರರಿಗೆ KSRTC ವಾರ್ನಿಂಗ್ – ಕೆಲಸ ಮಾಡದಿದ್ರೆ ವೇತನ ಇಲ್ಲ..!!

ಸಾರ್ವಜನಿಕ ವಿರೋಧದ ಪರಿಣಾಮ
ಇದಕ್ಕೂ ಮೊದಲು ಫೆಬ್ರವರಿ 9ರಿಂದ ಅನ್ವಯವಾಗುವಂತೆ 5 ರೂ. ಟಿಕೆಟ್ ದರ ಏರಿಕೆ ಮಾಡಲು ಬಿಎಂಆರ್ಸಿಎಲ್ ಮುಂದಾಗಿತ್ತು.
ಆದರೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ನಿರ್ಧಾರವನ್ನು ಹಿಂದಕ್ಕೆ ಪಡೆಯಲಾಗಿತ್ತು.
ಈಗ ಮತ್ತೊಮ್ಮೆ ದರ ಏರಿಕೆ ಚರ್ಚೆ ಆರಂಭವಾದರೂ, ಬೋರ್ಡ್ ಸಭೆಯಲ್ಲಿ ಸದ್ಯಕ್ಕೆ ದರ ಹೆಚ್ಚಳ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ.
ಇದರಿಂದ ದಿನನಿತ್ಯ ಮೆಟ್ರೋ ಪ್ರಯಾಣ ಮಾಡುವ ಸಾವಿರಾರು ಪ್ರಯಾಣಿಕರಿಗೆ ಕೊಂಚ ನಿರಾಳ ಸಿಕ್ಕಂತಾಗಿದೆ.

ಮುಂದಿನ ಸಭೆಯಲ್ಲಿ ಮತ್ತೆ ಚರ್ಚೆ ಸಾಧ್ಯತೆ
ಮೆಟ್ರೋ ದರ ಏರಿಕೆ ಕುರಿತ ಅಂತಿಮ ನಿರ್ಧಾರ ಮುಂದಿನ ಬೋರ್ಡ್ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ.
ಆದರೆ ಈಗಿನ ಪರಿಸ್ಥಿತಿಯಲ್ಲಿ ಪ್ರಯಾಣಿಕರ ಮೇಲೆ ಹೆಚ್ಚುವರಿ ಹೊರೆ ಬೀಳುವುದಿಲ್ಲ.
MUST WATCH : High-Risk Pregnancy to Advanced Newborn & NICU Care | Aditi Multi-Specialty Hospital Tumakuru




