ಇನ್ಮುಂದೆ ಎಲ್ಲಾ ಸಿರಪ್ಗಳ ಖರೀದಿಗೂ ವೈದ್ಯರ ಚೀಟಿ ಕಡ್ಡಾಯ – Medicine ಮಾರಾಟ ನಿಯಮ ಕಠಿಣಗೊಳಿಸಿದ ಆರೋಗ್ಯ ಇಲಾಖೆ

ಇನ್ಮುಂದೆ ಮೆಡಿಕಲ್ ಶಾಪ್ಗೆ ಹೋಗಿ ವೈದ್ಯರ ಚೀಟಿ ಇಲ್ಲದೇ ಸಿರಪ್ ಖರೀದಿಸುವಂತಿಲ್ಲ. ಕೆಮ್ಮಿನ ಸಿರಪ್ ಸೇರಿದಂತೆ ಯಾವುದೇ ರೀತಿಯ ಸಿರಪ್ ಖರೀದಿಸಬೇಕಾದ್ರು ವೈದ್ಯರ ಪ್ರಿಸ್ಕ್ರಿಪ್ಷನ್ ಕಡ್ಡಾಯಗೊಳಿಸಿ ಎಂದು ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಔಷಧಗಳ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ವೈದ್ಯರು ನೀಡಿದ ಪ್ರಿಸ್ಕ್ರಿಪ್ಷನ್ ತೋರಿಸಿದ್ರೆ ಮಾತ್ರ Medicine
ದೇಶಾದ್ಯಂತ ಔಷಧಗಳ ಮಾರಾಟದ ಮೇಲೆ ಮತ್ತಷ್ಟು ಕಟ್ಟುನಿಟ್ಟಿನ ನಿಯಂತ್ರಣ ತರಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದ್ದು, ಇನ್ಮುಂದೆ ಯಾವುದೇ ಸಿರಪ್ ಆಧಾರಿತ ಔಷಧವನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೇ ಮೆಡಿಕಲ್ ಶಾಪ್ಗಳಲ್ಲಿ ಮಾರಾಟ ಮಾಡುವಂತಿಲ್ಲ. ಇದುವರೆಗೆ ಅನೇಕ ಕೆಮ್ಮಿನ ಸಿರಪ್ ಸೇರಿದಂತೆ ಹಲವು ಔಷಧಿಗಳನ್ನು ಜನರು ನೇರವಾಗಿ ಔಷಧ ಅಂಗಡಿಗಳಿಂದ ಖರೀದಿಸುತ್ತಿದ್ದರು. ಆದ್ರೆ ಇನ್ಮುಂದೆ ವೈದ್ಯರು ನೀಡಿದ ಪ್ರಿಸ್ಕ್ರಿಪ್ಷನ್ ತೋರಿಸಿದ್ರೆ ಮಾತ್ರ ಔಷಧ ಮಾರಾಟ ಮಾಡಲು ಅವಕಾಶ ಇರಲಿದೆ.
ಇದನ್ನು ಓದಿ : ರಾಜ್ಯದ Govt ಆಸ್ಪತ್ರೆಗಳಲ್ಲಿ ಔಷಧಿ ಕೊರತೆ.!

ಔಷಧ ಮಾರಾಟ ನಿಯಮ ಕಠಿಣಗೊಳಿಸಿದ ಆರೋಗ್ಯ ಇಲಾಖೆ
ಇನ್ನು ಈ ಸಂಬಂಧ ಕೇಂದ್ರ ಸರ್ಕಾರ 1945ರ Medicine ನಿಯಮಗಳಲ್ಲಿ ತಿದ್ದುಪಡಿ ಮಾಡಿದ್ದು, ವೇಳಾಪಟ್ಟಿ-ಕೆ ಅಡಿಯಲ್ಲಿ ವಿನಾಯಿತಿ ಹೊಂದಿದ್ದ ಔಷಧಿಗಳ ಪಟ್ಟಿಯಿಂದ “ಸಿರಪ್” ಎಂಬ ಪದವನ್ನು ತೆಗೆದುಹಾಕಲಾಗಿದೆ. ಇದರಿಂದ ಸಿರಪ್ ಆಧಾರಿತ ಔಷಧಿಗಳ ಮಾರಾಟದ ಮೇಲೆ ನಿಯಂತ್ರಣ ಮತ್ತಷ್ಟು ಬಿಗಿಯಾಗಲಿದೆ. ಔಷಧಗಳ ದುರ್ಬಳಕೆ, ಅತಿಯಾದ ಬಳಕೆ ಹಾಗೂ ಸುರಕ್ಷತಾ ಸಮಸ್ಯೆಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

ಇದನ್ನು ನೋಡಿ : ಯೂರಿಯಾದಲ್ಲಿ ಕಲ್ಲುಗಳು ಪತ್ತೆ – ಮಳಿಗೆಗೆ ಮುತ್ತಿಗೆ ಹಾಕಿ ರೈತರ ಆಕ್ರೋಶ..!




