75,000 ರೂ. ವರೆಗಿನ ಬೆಳೆ ಸಾಲ ಸಂಪೂರ್ಣ ಮನ್ನಾ – ರೈತರಿಗೆ ಬಿಗ್ ಗಿಫ್ಟ್ ಕೊಟ್ಟ CM ವಿಜಯ್

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ತಮಿಳುನಾಡಿನ ರೈತರಿಗೆ ಬಂಪರ್ ಕೊಡುಗೆ ಘೋಷಿಸಿದ್ದಾರೆ.
ವಿವಿಧ ಸಹಕಾರಿ ಬ್ಯಾಂಕುಗಳಿಂದ ಪಡೆದಿರುವ 75 ಸಾವಿರ ರೂಪಾಯಿವರೆಗಿನ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಪ್ರಕಟಿಸಿದ್ದಾರೆ.
75,000 ರೂ. ವರೆಗಿನ ಬೆಳೆ ಸಾಲ ಸಂಪೂರ್ಣ ಮನ್ನಾ
ಸರ್ಕಾರದ ಪರಿಷ್ಕೃತ ಯೋಜನೆಯ ಪ್ರಕಾರ, 75 ಸಾವಿರ ರೂಪಾಯಿವರೆಗಿನ ಬೆಳೆ ಸಾಲ ಹೊಂದಿರುವ ರೈತರಿಗೆ ಸಂಪೂರ್ಣ ಸಾಲ ಮನ್ನಾ ಸೌಲಭ್ಯ ದೊರೆಯಲಿದೆ. 75 ಸಾವಿರ ರೂಪಾಯಿಗಿಂತ ಹೆಚ್ಚಿನ ಸಾಲ ಹೊಂದಿರುವ ರೈತರಿಗೆ 35 ಸಾವಿರ ರೂಪಾಯಿವರೆಗಿನ ಸಾಲ ಮನ್ನಾ ಸೌಲಭ್ಯ ನೀಡಲಾಗುತ್ತದೆ.

ಸರ್ಕಾರಕ್ಕೆ 5,932.23 ಕೋಟಿ ರೂ. ಹೊರೆ
ಪರಿಷ್ಕೃತ ಯೋಜನೆಯ ಪ್ರಕಾರ, 2025 ರ ಮೇ 1 ರಿಂದ 2026 ರ ಫೆ.28 ರ ನಡುವೆ ಸಹಕಾರಿ ಬ್ಯಾಂಕುಗಳಿಂದ 75,000 ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಆಗಲಿದೆ.
ರಾಜ್ಯಾದ್ಯಂತ ಸುಮಾರು 14.43 ಲಕ್ಷಕ್ಕೂ ಹೆಚ್ಚು ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ. ಆದ್ರೆ ಈ ಕ್ರಮದಿಂದ ಸರ್ಕಾರಕ್ಕೆ 5,932.23 ಕೋಟಿ ರೂ. ಹೊರೆಯಾಗಲಿದೆ.
ಇದನ್ನು ಓದಿ : CM Vijay ನಿಂದ ಕೊಲ್ಲೂರು ಮೂಕಾಂಬಿಕೆಗೆ 1.6 ಕೆಜಿ ಬೆಳ್ಳಿ ಖಡ್ಗ ಕಾಣಿಕೆ..!
ಯಾರಿಗೆ ಪ್ರಯೋಜನ?
• 8.33 ಲಕ್ಷ ಸಣ್ಣ ರೈತರು
• 5.16 ಲಕ್ಷ ಮಧ್ಯಮ ರೈತರು
• 93,548 ಬೃಹತ್ ರೈತರು

ಯೋಜನೆಯ ಫಲಾನುಭವಿಗಳಲ್ಲಿ 8.33 ಲಕ್ಷ ಸಣ್ಣ ರೈತರು, 5.16 ಲಕ್ಷ ಮಧ್ಯಮ ರೈತರು ಹಾಗೂ 93 ಸಾವಿರಕ್ಕೂ ಹೆಚ್ಚು ಬೃಹತ್ ರೈತರು ಸೇರಿದ್ದಾರೆ. ರಾಜ್ಯದ ಬಹುತೇಕ ಕೃಷಿಕ ಕುಟುಂಬಗಳಿಗೆ ಈ ಯೋಜನೆ ನೆರವಾಗಲಿದೆ. ಒಟ್ಟು ಫಲಾನುಭವಿಗಳ ಪೈಕಿ 6.22 ಲಕ್ಷಕ್ಕೂ ಹೆಚ್ಚು ರೈತರು 75 ಸಾವಿರ ರೂಪಾಯಿವರೆಗಿನ ಸಂಪೂರ್ಣ ಸಾಲ ಮನ್ನಾ ಸೌಲಭ್ಯ ಪಡೆಯಲಿದ್ದಾರೆ. ಉಳಿದ 8.21 ಲಕ್ಷ ರೈತರಿಗೆ ತಲಾ 35 ಸಾವಿರ ರೂಪಾಯಿವರೆಗಿನ ಸಾಲ ಮನ್ನಾ ಸಿಗಲಿದೆ.
ರೈತರಿಗೆ ಬಂಪರ್ ಗಿಫ್ಟ್ ಕೊಟ್ಟ CM ವಿಜಯ್
ಇದು ಮುಖ್ಯಮಂತ್ರಿ ವಿಜಯ್ ಸರ್ಕಾರ ಇದುವರೆಗೆ ಘೋಷಿಸಿರುವ ಅತಿದೊಡ್ಡ ರೈತ ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ರೈತರ ಆರ್ಥಿಕ ಸ್ಥಿತಿ ಸುಧಾರಣೆ ಹಾಗೂ ಕೃಷಿ ವಲಯಕ್ಕೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ.
ಈ ಯೋಜನೆಯಡಿ ಸಹಕಾರಿ ಬ್ಯಾಂಕುಗಳಿಗೆ ಪಾವತಿಸಬೇಕಾದ ಮೊತ್ತವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳಿಗೆ ಅನುಗುಣವಾಗಿ 45 ರಿಂದ 60 ದಿನಗಳೊಳಗೆ ಇತ್ಯರ್ಥಪಡಿಸುವ ಸಾಧ್ಯತೆ ಇದೆ ಎಂದು ಸರ್ಕಾರ ತಿಳಿಸಿದೆ.

ಇದನ್ನು ನೋಡಿ : ಪೌತಿ ಖಾತೆಯಲ್ಲಿ ಮತ್ತೊಂದು ದಾಖಲೆಗೆ ತುಮಕೂರು ಸಜ್ಜು- ಅಧಿಕಾರಿಗಳಿಗೆ ಡಿಸಿ ಖಡಕ್ ವಾರ್ನಿಂಗ್




