ತಮಿಳುನಾಡು CM Vijay ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ 1.6 ಕೆಜಿ ತೂಕದ ಬೆಳ್ಳಿ ಖಡ್ಗ, ರೇಷ್ಮೆ ಸೀರೆ ಹಾಗೂ ಫಲ-ತಾಂಬೂಲ ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ CM Vijay ಅವರು ದೇವಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ದೇವಿಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನು ಕಾಣಿಕೆಯಾಗಿ ಅರ್ಪಿಸುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.

ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಬಾಬು ಹೆಗಡೆ ಅವರ ಮಾಹಿತಿ ಪ್ರಕಾರ, ಸಿಎಂ ವಿಜಯ್ ಅವರು ಶಕ್ತಿ ದೇವಿಗೆ ರೇಷ್ಮೆ ಸೀರೆ, ಫಲ-ತಾಂಬೂಲ ಸಮರ್ಪಿಸಿ ಸುಮಾರು ಅರ್ಧ ಗಂಟೆಗಳ ಕಾಲ ಪ್ರಾರ್ಥನೆ ಸಲ್ಲಿಸಿದರು. ಬಳಿಕ ವಿಶೇಷ ಕಾಣಿಕೆಯಾಗಿ ಬೆಳ್ಳಿ ಖಡ್ಗವನ್ನು ದೇವಿಗೆ ಅರ್ಪಿಸಿದರು. ಈ ಕಾಣಿಕೆ ಭಕ್ತರ ಗಮನ ಸೆಳೆಯಿತು.

ದೇವಸ್ಥಾನಕ್ಕೆ ಆಗಮಿಸಿದ ಸಿಎಂ ವಿಜಯ್ ಅವರನ್ನು ಆಡಳಿತ ಮಂಡಳಿಯ ಟ್ರಸ್ಟಿಗಳು ಹೂಗುಚ್ಛ ನೀಡಿ ಸ್ವಾಗತಿಸಿದರು. ಮಂತ್ರಘೋಷದ ನಡುವೆ ಅರ್ಚಕ ವೃಂದ ದೇವಸ್ಥಾನದೊಳಗೆ ಬರಮಾಡಿಕೊಂಡಿತು. ಸಾಂಪ್ರದಾಯಿಕ ಶಲ್ಯ ಧರಿಸಿ ಆಗಮಿಸಿದ ಅವರು ದೇವಸ್ಥಾನದ ಶಿಷ್ಟಾಚಾರವನ್ನು ಪಾಲಿಸಿದರು.
MUST READ : Vachanananda Swamiji ವಿರುದ್ಧ 410 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ..!!

ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ಸಿಎಂ ವಿಜಯ್ ದೇವಿಯ ದರ್ಶನ ಪಡೆದರು. ದೇವಸ್ಥಾನದ ನಿಯಮಾನುಸಾರ ನಡೆದ ಪೂಜೆ ಮತ್ತು ದೀಪಾರಾಧನೆಯಲ್ಲಿ ಭಾಗವಹಿಸಿದ ಅವರಿಗೆ ಅರ್ಚಕರು ರಕ್ಷಾ ದಾರ ಕಟ್ಟಿದರು. ಬಳಿಕ ದೇವಿಯ ಆಶೀರ್ವಾದ ಪಡೆದು ದೇವಸ್ಥಾನದಿಂದ ನಿರ್ಗಮಿಸಿದರು.

ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಾರ, ಸಿಎಂ ವಿಜಯ್ ಅವರಿಗಾಗಿ ಯಾವುದೇ ವಿಶೇಷ ಪೂಜೆ ಅಥವಾ ಪ್ರತ್ಯೇಕ ಸಂಕಲ್ಪ ನಡೆಸಲಾಗಿಲ್ಲ. ದೇವಾಲಯದಲ್ಲಿ ಪ್ರತಿನಿತ್ಯ ನಡೆಯುವ ಪೂಜಾ ವಿಧಿವಿಧಾನಗಳಲ್ಲಿಯೇ ಅವರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.
MUST WATCH : ಶಾಸಕ ಷಡಕ್ಷರಿ ಆರೋಗ್ಯದಲ್ಲಿ ಚೇತರಿಕೆ ಇಂದು ಅಥವಾ ನಾಳೆ ಡಿಸ್ಚಾರ್ಜ್ ಸಾಧ್ಯತೆ




