ತಮಿಳುನಾಡು CM Vijay ಉಡುಪಿಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಸಂಕಲ್ಪ ಪೂಜೆ ಸಲ್ಲಿಸಿದರು.

ತಮಿಳುನಾಡು CM Vijay ಅವರು ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ದೇವಸ್ಥಾನಕ್ಕೆ ಆಗಮಿಸಿದ ಅವರನ್ನು ಆಡಳಿತ ಮಂಡಳಿಯ ಟ್ರಸ್ಟಿಗಳು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಮಂತ್ರಘೋಷದ ನಡುವೆ ಅರ್ಚಕ ವೃಂದವು ಅವರನ್ನು ದೇವಸ್ಥಾನದೊಳಗೆ ಬರಮಾಡಿಕೊಂಡಿತು.
MUST READ : Vachanananda Swamiji ವಿರುದ್ಧ 410 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ..!!

ದೇವಸ್ಥಾನದ ಸಂಪ್ರದಾಯವನ್ನು ಗೌರವಿಸಿ ಸಾಂಪ್ರದಾಯಿಕ ಶಲ್ಯ ಧರಿಸಿ ಆಗಮಿಸಿದ ಸಿಎಂ ವಿಜಯ್, ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ನಡೆದ ವಿಶೇಷ ಸಂಕಲ್ಪ ಪೂಜೆಯಲ್ಲಿ ಭಾಗವಹಿಸಿದರು. ಈ ವೇಳೆ ಅವರು ಮೂಕಾಂಬಿಕಾ ದೇವಿಗೆ ರೇಷ್ಮೆ ಸೀರೆ ಹಾಗೂ ಫಲ-ತಾಂಬೂಲ ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಸಂಕಲ್ಪ ಪೂಜೆಯ ಬಳಿಕ ದೇವಿಗೆ ದೀಪಾರಾಧನೆ ನೆರವೇರಿಸಲಾಯಿತು. ಪೂಜೆಯ ಅಂಗವಾಗಿ ಅರ್ಚಕರು ಸಿಎಂ ವಿಜಯ್ ಅವರಿಗೆ ರಕ್ಷಾ ದಾರ ಕಟ್ಟಿದ್ದು, ದೇವಿಯ ಆಶೀರ್ವಾದ ಪಡೆದ ನಂತರ ಅವರು ದೇವಸ್ಥಾನದಿಂದ ನಿರ್ಗಮಿಸಿದರು.

ಇದೇ ವೇಳೆ ತಮ್ಮ ನೆಚ್ಚಿನ ನಟ ಹಾಗೂ ಮುಖ್ಯಮಂತ್ರಿಯನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ದೇವಸ್ಥಾನದ ಬಳಿ ಜಮಾಯಿಸಿದ್ದರು. ಅಭಿಮಾನಿಗಳ ದಟ್ಟಣೆಯಿಂದಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
MUST WATCH : ಶಾಸಕ ಷಡಕ್ಷರಿ ಆರೋಗ್ಯದಲ್ಲಿ ಚೇತರಿಕೆ ಇಂದು ಅಥವಾ ನಾಳೆ ಡಿಸ್ಚಾರ್ಜ್ ಸಾಧ್ಯತೆ




