Bengaluru : ಶಾಲೆಗಳಿಗೆ ಫುಡ್ ಡೆಲಿವರಿ ಬ್ಯಾನ್!

ಬೆಂಗಳೂರು ನಗರದ ಹಲವು ಪ್ರತಿಷ್ಠಿತ ಖಾಸಗಿ ಶಾಲೆಗಳು ಮಹತ್ವದ ನಿರ್ಧಾರ ಕೈಗೊಂಡಿವೆ. ಶಾಲಾ ಆವರಣದೊಳಗೆ ಸ್ವಿಗ್ಗಿ, ಜೊಮ್ಯಾಟೊ ಸೇರಿದಂತೆ ಆನ್ಲೈನ್ ಫುಡ್ ಡೆಲಿವರಿ ಸೇವೆಗಳ ಮೂಲಕ ಆಹಾರ ತರಿಸಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಯಾಕೆ ಈ ಕ್ರಮ
ವಿದ್ಯಾರ್ಥಿಗಳ ಆರೋಗ್ಯ, ಭದ್ರತೆ ಹಾಗೂ ಶಾಲಾ ಶಿಸ್ತು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಬನಶಂಕರಿಯಲ್ಲಿರುವ ಶಾಲೆಯೊಂದು ಈ ಕುರಿತು ಸುತ್ತೋಲೆ ಹೊರಡಿಸಿದ ಬೆನ್ನಲ್ಲೇ ನಗರದ ಹಲವು ಪ್ರಮುಖ ಶಾಲೆಗಳು ಕೂಡ ಇದೇ ನಿಯಮ ಜಾರಿಗೊಳಿಸಿವೆ.

ಫುಡ್ ಆ್ಯಪ್ಗಳಿಗೆ ಯಾಕೆ ಬ್ರೇಕ್
ಶಾಲಾ ಆಡಳಿತ ಮಂಡಳಿಗಳ ಪ್ರಕಾರ, ಹೊರಗಿನಿಂದ ತರಿಸುವ ಜಂಕ್ ಫುಡ್ಗಳಲ್ಲಿ ಹೆಚ್ಚುವರಿ ಎಣ್ಣೆ, ಉಪ್ಪು ಹಾಗೂ ಪ್ರಿಸರ್ವೇಟಿವ್ಗಳ ಪ್ರಮಾಣ ಹೆಚ್ಚಿರುತ್ತದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಇನ್ನು ಕೆಲ ವಿದ್ಯಾರ್ಥಿಗಳು ಮನೆ ಆಹಾರ ಸೇವಿಸುತ್ತಿರುವಾಗ, ಇತರರು ಪಿಜ್ಜಾ, ಬರ್ಗರ್ ಸೇರಿದಂತೆ ದುಬಾರಿ ಆಹಾರಗಳನ್ನು ಆರ್ಡರ್ ಮಾಡುವುದರಿಂದ ಮಕ್ಕಳಲ್ಲಿ ಅನಗತ್ಯ ಆಕರ್ಷಣೆ ಹಾಗೂ ತಾರತಮ್ಯ ಭಾವನೆ ಮೂಡಬಹುದು ಎನ್ನುವುದು ಶಾಲೆಗಳ ಅಭಿಪ್ರಾಯವಾಗಿದೆ.
ಇದನ್ನು ಓದಿ : ಭಾರತದಲ್ಲಿ Telegram ಮೇಲಿನ ನಿಷೇಧ ತೆರವು..!!

Bengaluru – ಆನ್ಲೈನ್ ಫುಡ್ ಡೆಲಿವರಿಗೆ ಸಂಪೂರ್ಣ ಬ್ರೇಕ್
ಇತ್ತೀಚಿನ ದಿನಗಳಲ್ಲಿ ಅನೇಕ ಪೋಷಕರು ಮಕ್ಕಳಿಗೆ ಸ್ವಿಗ್ಗಿ ಹಾಗೂ ಜೊಮ್ಯಾಟೊ ಮೂಲಕ ಆಹಾರ ಕಳುಹಿಸುವುದನ್ನು ರೂಢಿಸಿಕೊಂಡಿದ್ದರು. ಕೆಲ ವಿದ್ಯಾರ್ಥಿಗಳಿಗೆ ದಿನಕ್ಕೆ ಎರಡು-ಮೂರು ಬಾರಿ ಆನ್ಲೈನ್ ಮೂಲಕ ಆಹಾರ ಸರಬರಾಜು ಆಗುತ್ತಿತ್ತು ಎನ್ನಲಾಗಿದೆ.
ಮಕ್ಕಳು ಆರೋಗ್ಯಕರ ಮನೆ ಆಹಾರ ಸೇವಿಸುವ ಅಭ್ಯಾಸ ಬೆಳೆಸುವ ಉದ್ದೇಶದಿಂದಲೇ ಶಾಲೆಗಳು ಈ ನಿರ್ಧಾರ ಕೈಗೊಂಡಿವೆ. ಈ ಮೂಲಕ ಶಾಲಾ ಆವರಣದಲ್ಲಿ ಆನ್ಲೈನ್ ಫುಡ್ ಡೆಲಿವರಿಗೆ ಸಂಪೂರ್ಣ ಬ್ರೇಕ್ ಬಿದ್ದಂತಾಗಿದೆ.

ಇದನ್ನು ನೋಡಿ : ಸರ್ಕಾರಿ ನೌಕರರಿಗೆ ಬಿಗ್ ಶಾಕ್ – ನೌಕರರ ಕುಟುಂಬಗಳಿಗೆ ಇಲ್ವಾ ಗ್ಯಾರಂಟಿ.!?




