Drugs Seize : ಬೆಂಗಳೂರಿನಲ್ಲಿ CCB ಭರ್ಜರಿ ಕಾರ್ಯಾಚರಣೆ – ವಿದೇಶದಿಂದ ಬಂದ ₹3 ಕೋಟಿ ಮೌಲ್ಯದ Hydro Ganja ವಶ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿದೇಶದಿಂದ ಪಾರ್ಸೆಲ್ ಮೂಲಕ ಕಳುಹಿಸಲಾಗುತ್ತಿದ್ದ ಕೋಟಿ ಕೋಟಿ ಮೌಲ್ಯದ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಸ್ನಾಕ್ಸ್ ಬಾಕ್ಸ್ಗಳೊಳಗೆ ಅಡಗಿಸಿಟ್ಟಿದ್ದ ಗಾಂಜಾ
ಖಚಿತ ಮಾಹಿತಿ ಮೇರೆಗೆ ಫಾರಿನ್ ಪೋಸ್ಟ್ ಆಫೀಸ್ನಲ್ಲಿ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಅನುಮಾನಾಸ್ಪದ ಪಾರ್ಸೆಲ್ಗಳನ್ನು ಪರಿಶೀಲಿಸಿದ ವೇಳೆ ಸ್ನಾಕ್ಸ್ ಬಾಕ್ಸ್ಗಳೊಳಗೆ ಅಡಗಿಸಿಟ್ಟಿದ್ದ ಹೈಡ್ರೋ ಗಾಂಜಾ ಪತ್ತೆಯಾಗಿದೆ.
ಇದನ್ನು ಓದಿ : ಬೆಂಗಳೂರು Airport ನಲ್ಲಿ ಕೋಟಿ ಕೋಟಿ ಮೌಲ್ಯದ ಗಾಂಜಾ ವಶ

ಹೈಡ್ರೋ ಗಾಂಜಾ ವಶ
ಪ್ರಾಥಮಿಕ ತನಿಖೆ ಪ್ರಕಾರ, ಅಮೆರಿಕಾ (US) ಹಾಗೂ ಥೈಲ್ಯಾಂಡ್ನಿಂದ Drugs ಅನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು ಎನ್ನಲಾಗಿದ್ದು ಕಾರ್ಯಾಚರಣೆ ವೇಳೆ ಸುಮಾರು 3 ಕೋಟಿ ರೂಪಾಯಿ ಮೌಲ್ಯದ 3 ಕೆಜಿ 312 ಗ್ರಾಂ Hydro Ganja ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಡ್ರಗ್ಸ್ ಜಾಲದ ಹಿಂದಿರುವ ಆರೋಪಿಗಳ ಕುರಿತು ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಪ್ರಕರಣ ಸಂಬಂಧ ಮತ್ತಷ್ಟು ತನಿಖೆ ಮುಂದುವರಿದಿದೆ.

ಇದನ್ನು ನೋಡಿ : 3 ವರ್ಷದಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿಲ್ಲ – ತುಮಕೂರಿನ ಉದ್ಯೋಗಾಕಾಂಕ್ಷಿಗಳ ಆಕ್ರೋಶ




