Bangalore : ಕಾಂಪೌಂಡ್ ಗೋಡೆ ಕುಸಿದು 17 ವರ್ಷದ ಬಾಲ ಕಾರ್ಮಿಕ ಸಾವು.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಕಾಂಪೌಡ್ ಕುಸಿತ ದುರಂತ ಸಂಭವಿಸಿದೆ. ಇನ್ನು ಈ ದುರಂತದಲ್ಲಿ ಅಪ್ರಾಪ್ತ ಬಾಲಕನೋರ್ವ ಸಾವನ್ನಪ್ಪಿದ್ದು, ಇಬ್ಬರು ಕೂಲಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪ್ರಾಪ್ತ ಬಾಲಕ ದಾರುಣ ಸಾವು
ಹೌದು.. Bangalore ಚಿಕ್ಕ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಂಪೌಂಡ್ ನಿರ್ಮಾಣ ಕಾಮಗಾರಿ ವೇಳೆ ನಡೆದ ದುರ್ಘಟನೆಯಲ್ಲಿ 17 ವರ್ಷದ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ. ಮೃತ ಯುವಕನನ್ನು ರಾಯಚೂರು ಮೂಲದ ಭೀರೇಶ್ (17) ಎಂದು ಗುರುತಿಸಲಾಗಿದೆ.
ಇದನ್ನು ಓದಿ : ಧಾರಾಕಾರ ಮಳೆಗೆ ಗೋಡೆ ಕುಸಿತ | ಮಳೆಗೆ ದುರಂತ ಅಂತ್ಯಕಂಡ ಬಾಲಕಿ

ಕಟ್ಟಡ ಕಟ್ಟುವಾಗ ಹಾಲೋಬ್ಲಾಕ್ ಬಿದ್ದು ದುರಂತ
ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಭೀರೇಶ್, ನಿನ್ನೆ ಮಧ್ಯಾಹ್ನ ಸೀನಪ್ಪ ಲೇಔಟ್ನ ನಾಲ್ಕನೇ ಕ್ರಾಸ್ನಲ್ಲಿ ಹಳೆಯ ಕಟ್ಟಡದ ಕಾಂಪೌಂಡ್ ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆ ಹಾಲೋಬ್ಲಾಕ್ ಹಾಗೂ ಗೋಡೆ ಏಕಾಏಕಿ ಕುಸಿದ ಪರಿಣಾಮ ಅವಶೇಷಗಳಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ಈ ಘಟನೆಯಲ್ಲಿ ದೂಳಪ್ಪ ಸೇರಿದಂತೆ ಇಬ್ಬರು ಕಾರ್ಮಿಕರಿಗೂ ಕೂಡ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಾಣಸವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನು ನೋಡಿ : KSRTC Ticket Price Hike fIx. – ಬೆಲೆ ಏರಿಕೆ ಸುಳಿವು ನೀಡಿದ S R SRINIVAS
ಅಕ್ರಮ ಅಪಾರ್ಟ್ಮೆಂಟ್ ನಿರ್ಮಾಣ
ಇನ್ನು ಶಾಸಕ ರಘು ಅವರ ಬಾಮೈದ ಮಾಜಿ ಉಪಮೇಯರ್ ದಯಾನಂದ ಅವರಿಗೆ ಸೇರಿದ್ದ ಅಪಾರ್ಟ್ಮೆಂಟ್ ಇದಾಗಿದ್ದು, ಅಕ್ರಮವಾಗಿ ಅಪಾರ್ಟ್ಮೆಂಟ್ ನಿರ್ಮಾಣ ಮಾಡಿದ್ದಾರೆ ಎಂದು ಸ್ಥಳೀಯ ಸಾಮಾಜಿಕ ಹೋರಾಟಗಾರ ಜಯರಾಮ್ ಗಂಭೀರ ಆರೋಪ ಮಾಡಿದ್ದಾರೆ.

