Bank ಅಕೌಂಟ್ ನಲ್ಲಿ ಬ್ಯಾಲೆನ್ಸ್ ಇಲ್ವಾ? ಡೋಂಟ್ ವರಿ, UPI ಮೂಲಕವೇ ಸಿಗಲಿದೆ 45 ದಿನಗಳ ಬಡ್ಡಿ ರಹಿತ ಸಾಲ!

ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿದ್ದರೂ ಯುಪಿಐ ಮೂಲಕ ತುರ್ತು ಪಾವತಿಗಳನ್ನು ಮಾಡುವ ಅವಕಾಶವನ್ನು ಒದಗಿಸುವ ನೂತನ ಸೇವೆಯನ್ನು ಡಿಜಿಟಲ್ ಪಾವತಿ ಸಂಸ್ಥೆ BharatPe ಪರಿಚಯಿಸಿದೆ. Yes Bank ಸಹಯೋಗದಲ್ಲಿ ‘ಭಾರತ್ಪೇ ಫ್ಲೆಕ್ಸ್’ ಹೆಸರಿನ ಈ ಸೇವೆ ಗ್ರಾಹಕರಿಗೆ ‘ಈಗ ಪಾವತಿಸಿ, ನಂತರ ತೀರಿಸಿ’ ಮಾದರಿಯ ಸೌಲಭ್ಯ ಒದಗಿಸಲಿದೆ.
ಏನಿದು ಭಾರತ್ಪೇ ಫ್ಲೆಕ್ಸ್?
ಸಾಮಾನ್ಯವಾಗಿ ಯುಪಿಐ ಮೂಲಕ ಹಣ ಪಾವತಿಸಿದಾಗ ಮೊತ್ತ ನೇರವಾಗಿ Bank ಖಾತೆಯಿಂದ ಕಡಿತಗೊಳ್ಳುತ್ತದೆ. ಆದರೆ ಭಾರತ್ಪೇ ಫ್ಲೆಕ್ಸ್ ಯುಪಿಐ ಆಧಾರಿತ ಕ್ರೆಡಿಟ್ ಲೈನ್ ಆಗಿದ್ದು, ಖಾತೆಯಲ್ಲಿ ಹಣ ಇಲ್ಲದಿದ್ದರೂ ಮಂಜೂರಾದ ಸಾಲ ಮಿತಿಯ ಮೂಲಕ ಪಾವತಿ ಮಾಡಲು ಅವಕಾಶ ನೀಡುತ್ತದೆ.
ಈ ಸೌಲಭ್ಯವನ್ನು ಅಂಗಡಿಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿಸಲು, ಆನ್ಲೈನ್ ಶಾಪಿಂಗ್, ವಿದ್ಯುತ್ ಬಿಲ್ ಪಾವತಿ, ಮೊಬೈಲ್ ರೀಚಾರ್ಜ್ ಹಾಗೂ ಇಂಧನ ಖರೀದಿಗೆ ಬಳಸಬಹುದಾಗಿದೆ.
ಇದನ್ನು ಓದಿ : ಕರ್ನಾಟಕದ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ – ಇಂದು ಭಾರೀ ಮಳೆ ಸಾಧ್ಯತೆ..!!

ಪ್ರಮುಖ ವೈಶಿಷ್ಟ್ಯಗಳು
- 45 ದಿನಗಳವರೆಗೆ ಬಡ್ಡಿ ರಹಿತ ಅವಧಿ: ಬಳಸಿದ ಮೊತ್ತವನ್ನು 45 ದಿನಗಳೊಳಗೆ ಮರುಪಾವತಿಸಿದರೆ ಯಾವುದೇ ಬಡ್ಡಿ ವಿಧಿಸಲಾಗುವುದಿಲ್ಲ.
- ಇಎಂಐ ಸೌಲಭ್ಯ: ಸಂಪೂರ್ಣ ಮೊತ್ತವನ್ನು ಒಮ್ಮೆಲೇ ಪಾವತಿಸಲು ಸಾಧ್ಯವಾಗದಿದ್ದರೆ, ಸುಲಭ ಕಂತುಗಳಾಗಿ (EMI) ಪರಿವರ್ತಿಸಬಹುದು.
- 3 ನಿಮಿಷಗಳಲ್ಲಿ ಅನುಮೋದನೆ: ಸಂಪೂರ್ಣ ಡಿಜಿಟಲ್ ಕೆವೈಸಿ ಮೂಲಕ ಅರ್ಹ ಗ್ರಾಹಕರಿಗೆ ಕೆಲವೇ ನಿಮಿಷಗಳಲ್ಲಿ ಕ್ರೆಡಿಟ್ ಮಿತಿ ಮಂಜೂರಾಗಲಿದೆ.
- ಸ್ಮಾರ್ಟ್ ಟ್ರ್ಯಾಕಿಂಗ್: ಸಾಲದ ಬಳಕೆ, ಮರುಪಾವತಿ ಹಾಗೂ ಇಎಂಐ ವಿವರಗಳನ್ನು ಆ್ಯಪ್ನಲ್ಲೇ ಪರಿಶೀಲಿಸಬಹುದು.
- ರಿವಾರ್ಡ್ಸ್: ಪ್ರತಿ ವಹಿವಾಟಿನ ಮೇಲೂ ವಿಶೇಷ ಬಹುಮಾನಗಳ ಸೌಲಭ್ಯ ಲಭ್ಯವಿದೆ.
ಸೇವೆ ಪಡೆಯುವುದು ಹೇಗೆ?
ಭಾರತ್ಪೇ ಆ್ಯಪ್ನಲ್ಲಿ ‘BharatPe Flex’ ಆಯ್ಕೆ ಮಾಡಿಕೊಂಡು ಡಿಜಿಟಲ್ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಬಳಿಕ ಮಂಜೂರಾದ ಕ್ರೆಡಿಟ್ ಲಿಮಿಟ್ ಅನ್ನು ಯುಪಿಐಗೆ ಲಿಂಕ್ ಮಾಡಿ ಹೊಸ ಯುಪಿಐ ಪಿನ್ ಸೆಟ್ ಮಾಡಿದರೆ, ಯಾವುದೇ ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡಬಹುದು.

ಸಂಸ್ಥೆಗಳ ಪ್ರತಿಕ್ರಿಯೆ
ಇನ್ನು ಈ ಭಾರತ್ಪೇ ಸಿಇಒ ನಳೀನ್ ನೇಗಿ ಮಾತನಾಡಿ, “ಯುಪಿಐ ಭಾರತದ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿ ತಂದಿದೆ. ಗ್ರಾಹಕರಿಗೆ ಹೆಚ್ಚಿನ ಹಣಕಾಸು ಸ್ವಾತಂತ್ರ್ಯ ನೀಡುವ ಉದ್ದೇಶದಿಂದ ಯುಪಿಐ ಜೊತೆಗೆ ಕ್ರೆಡಿಟ್ ಸೌಲಭ್ಯವನ್ನು ಜೋಡಿಸಿ ಭಾರತ್ಪೇ ಫ್ಲೆಕ್ಸ್ ಪರಿಚಯಿಸುತ್ತಿದ್ದೇವೆ” ಎಂದು ಹೇಳಿದರು.
ಯೆಸ್ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ವಿಭಾಗದ ಮುಖ್ಯಸ್ಥ ಅನಿಲ್ ಸಿಂಗ್, “ಡಿಜಿಟಲ್ ಪಾವತಿ ಮತ್ತು ಕ್ರೆಡಿಟ್ ವ್ಯವಸ್ಥೆಯನ್ನು ಒಟ್ಟುಗೂಡಿಸಿ ಗ್ರಾಹಕರಿಗೆ ಉತ್ತಮ ಅನುಭವ ನೀಡಲು ಭಾರತ್ಪೇ ಜೊತೆ ಕೈಜೋಡಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಭಾರತ್ ಪೇ ಹಿನ್ನಲೆ :
2018ರಲ್ಲಿ ಆರಂಭವಾದ ‘ಭಾರತ್ಪೇ’, ಭಾರತದ ಮೊದಲ ‘ಝೀರೋ ಎಂಡಿಆರ್’ ಕ್ಯೂಆರ್ ಕೋಡ್ ಪರಿಚಯಿಸಿದ ಹೆಗ್ಗಳಿಕೆ ಹೊಂದಿದೆ. ಪ್ರಸ್ತುತ ದೇಶದ 450ಕ್ಕೂ ಹೆಚ್ಚು ನಗರಗಳಲ್ಲಿ 1.7 ಕೋಟಿಗೂ ಅಧಿಕ ವ್ಯಾಪಾರಿಗಳನ್ನು ಹೊಂದಿರುವ ಈ ಸಂಸ್ಥೆ, ಪ್ರತಿ ತಿಂಗಳು 45 ಕೋಟಿಗೂ ಹೆಚ್ಚು ಯುಪಿಐ ವಹಿವಾಟುಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ

ಇದನ್ನು ನೋಡಿ : DKS ಪಟ್ಟಾಭಿಷೇಕಕ್ಕೆ ಭರ್ಜರಿ ತಯಾರಿ – ಫ್ಲೆಕ್ಸ್, ಬ್ಯಾನರ್ ಕಟ್ಟುವವರಿಗೆ ಹೈಕೋರ್ಟ್ ಶಾಕ್




