ರಿಯಾಲಿಟಿ ಶೋ ಪ್ರೇಕ್ಷಕರ ನೆಚ್ಚಿನ ಕಾರ್ಯಕ್ರಮ ‘ Bigg Boss ಕನ್ನಡ ಸೀಸನ್ 13 ’ ರ ಆರಂಭಕ್ಕೆ ದಿನಗಣನೆ ಶುರುವಾಗಿದೆ.

ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 13ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಸೆಲೆಬ್ರಿಟಿಗಳ ಜೊತೆಗೆ ಜನಸಾಮಾನ್ಯರಿಗೂ Bigg Boss ಮನೆ ಪ್ರವೇಶಿಸುವ ಅವಕಾಶ ನೀಡಲಾಗಿದ್ದು, ಆಡಿಷನ್ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.
ಸಾಮಾನ್ಯ ಜನರಿಗೂ ಬಿಗ್ ಬಾಸ್ಗೆ ಪ್ರವೇಶ
ರಿಯಾಲಿಟಿ ಶೋಗಳ ಪೈಕಿ ಅತ್ಯಂತ ಜನಪ್ರಿಯ ಕಾರ್ಯಕ್ರಮವಾದ ಬಿಗ್ ಬಾಸ್ ಕನ್ನಡ ಸೀಸನ್ 13 ಈ ಬಾರಿ ಹಲವು ವಿಶೇಷತೆಗಳೊಂದಿಗೆ ಬರಲು ಸಜ್ಜಾಗಿದೆ. ಪ್ರತಿ ಬಾರಿಯಂತೆ ಸೆಲೆಬ್ರಿಟಿಗಳಷ್ಟೇ ಅಲ್ಲದೆ, ಸಾಮಾನ್ಯ ಜನರಿಗೂ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಯಾಗಿ ಪ್ರವೇಶಿಸುವ ಅವಕಾಶ ಕಲ್ಪಿಸಲಾಗಿದೆ.
ಜೂನ್.21ರೊಳಗೆ ಈ ಕೆಲಸ ಮಾಡಿ!
ಬಿಗ್ ಬಾಸ್ ಮನೆಗೆ ಹೋಗುವ ಕನಸು ಹೊಂದಿರುವ ಸಾರ್ವಜನಿಕರಿಗೆ ವಾಹಿನಿಯು ಮಹತ್ವದ ಅವಕಾಶ ನೀಡಿದ್ದು, ಆಡಿಷನ್ಗೆ ವಿಡಿಯೊ ಸಲ್ಲಿಸಲು ಜೂನ್ 21 ಕೊನೆಯ ದಿನಾಂಕ ಎಂದು ಘೋಷಿಸಿದೆ. ಆಸಕ್ತರು ತಮ್ಮ ಸ್ವ-ಪರಿಚಯದೊಂದಿಗೆ “ನಾವು ಏಕೆ ಬಿಗ್ ಬಾಸ್ ಮನೆಯಲ್ಲಿರಬೇಕು?” ಎಂಬ ಪ್ರಶ್ನೆಗೆ ಉತ್ತರಿಸುವ ವಿಡಿಯೊವನ್ನು ಸಿದ್ಧಪಡಿಸಿ ಸಲ್ಲಿಸಬೇಕಾಗಿದೆ.
ಅಪ್ಲಿಕೇಶನ್ ಸಲ್ಲಿಸುವುದು ಹೇಗೆ?
- ಸ್ವ-ಪರಿಚಯ ವಿಡಿಯೊ
- “ನಾನು ಏಕೆ ಬಿಗ್ ಬಾಸ್ ಮನೆಯಲ್ಲಿರಬೇಕು?” ಎಂಬ ಉತ್ತರ
- ಜೂನ್ 21ರೊಳಗೆ ಸಲ್ಲಿಕೆ
ಇದನ್ನು ಓದಿ : Bigg Boss ಮುಗಿದ್ರೂ ಕಮ್ಮಿಯಾಗಿಲ್ಲ ಗಿಲ್ಲಿ ಕ್ರೇಜ್

ಸ್ಪರ್ಧಿಗಳು ತಮ್ಮ ವಿಡಿಯೊವನ್ನು ಅಧಿಕೃತ ಆಡಿಷನ್ ವೆಬ್ಸೈಟ್ ಮೂಲಕವೇ ಅಪ್ಲೋಡ್ ಮಾಡಬೇಕು. ಸೋಶಿಯಲ್ ಮಿಡಿಯಾಗಳಲ್ಲಿ ಟ್ಯಾಗ್ ಮಾಡುವುದರಿಂದ ಅಥವಾ ಪೋಸ್ಟ್ ಹಂಚಿಕೊಳ್ಳುವುದರಿಂದ ಅರ್ಜಿ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಬಿಗ್ ಬಾಸ್ ಕರೆ
ಈಗಾಗಲೇ ಆಡಿಷನ್ ಪ್ರಚಾರದ ವಿಡಿಯೊವನ್ನು ಹಂಚಿಕೊಂಡಿರುವ ಬಿಗ್ ಬಾಸ್, “ಸಾಮಾನ್ಯ ಬದುಕಿನಿಂದ ಅಸಾಮಾನ್ಯ ಗುರಿಯತ್ತ ಹೆಜ್ಜೆ ಇಡಿ, ಬಿಗ್ ಬಾಸ್ ಆಡಿಷನ್ನಲ್ಲಿ ಭಾಗವಹಿಸಿ” ಎಂದು ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿದೆ.
ನಿಮಗೂ Bigg Boss ಮನೆಗೆ ಹೋಗೋ ಕನಸಿದ್ದರೆ ಜೂನ್.21ರೊಳಗೆ ಈ ಕೆಲಸ ಮಾಡಿ!
ವೆಬ್ಸೈಟ್ನಲ್ಲಿ ಅಪ್ಲೋಡ್ ಆಗುವ ಸಾವಿರಾರು ಅರ್ಜಿಗಳ ಪೈಕಿ ಅತ್ಯುತ್ತಮವಾಗಿ ತಮ್ಮ ವ್ಯಕ್ತಿತ್ವ ಮತ್ತು ಪ್ರತಿಭೆಯನ್ನು ಪ್ರದರ್ಶಿಸುವ ಅಭ್ಯರ್ಥಿಗಳನ್ನು ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ ಕರೆಯಲಾಗುತ್ತದೆ.
ನಿಮಗೂ ಬಿಗ್ ಬಾಸ್ ಮನೆಗೆ ಹೋಗುವ ಕನಸಿದ್ದರೆ, ತಡಮಾಡಬೇಡಿ. ಜೂನ್ 21ರ ಒಳಗಾಗಿ ನಿಮ್ಮ ವಿಡಿಯೊವನ್ನು ಅಪ್ಲೋಡ್ ಮಾಡಿ ಅದೃಷ್ಟ ಪರೀಕ್ಷಿಸಿಕೊಳ್ಳಿ.

ಇದನ್ನು ನೋಡಿ : ತುಮಕೂರಿನಲ್ಲಿ ಮೋಡ ಕವಿದ ವಾತಾವರಣ – ವರುಣ ದೇವ ಜಿಲ್ಲೆ ಮೇಲೆ ಕೃಪೆ ತೋರ್ತಾನಾ?




