ಹರಿಹರ ಪೀಠದ Vachanananda Swamiji ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಜಾಮೀನು ರದ್ದತಿ ಅರ್ಜಿಯ ಆದೇಶವನ್ನು ದಾವಣಗೆರೆ ವಿಶೇಷ ನ್ಯಾಯಾಲಯ ಜೂನ್ 30ಕ್ಕೆ ಮುಂದೂಡಿದೆ.

ಹರಿಹರ ಪೀಠದ Vachanananda Swamiji ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸ್ವಾಮೀಜಿಗೆ ನೀಡಲಾಗಿರುವ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಸಲ್ಲಿಕೆಯಾಗಿದ್ದ ಅರ್ಜಿಯ ಆದೇಶವನ್ನು ದಾವಣಗೆರೆಯ ವಿಶೇಷ ಪೋಕ್ಸೋ ನ್ಯಾಯಾಲಯ ಜೂನ್ 30ಕ್ಕೆ ಮುಂದೂಡಿದೆ.
ಜಾಮೀನು ರದ್ದತಿಗೆ ಪೊಲೀಸರ ಅರ್ಜಿ
ವಚನಾನಂದ ಸ್ವಾಮೀಜಿ ಪಡೆದಿರುವ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸುವಂತೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ವಿಶೇಷ ಪೋಕ್ಸೋ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಜೂನ್ 11ರಂದು ನಡೆದಿತ್ತು.
MUST READ : Guru Pushya Mahayoga : ಈ 6 ರಾಶಿಗಳಿಗೆ ಅದೃಷ್ಟ, ಧನಲಾಭ ಮತ್ತು ಯಶಸ್ಸಿನ ಸುರಿಮಳೆ..!!

ಜೂನ್ 23ರಂದು ಹೈಕೋರ್ಟ್ನಲ್ಲಿ ವಿಚಾರಣೆ
ಸ್ವಾಮೀಜಿ ಪರ ವಕೀಲ ಎಸ್.ವಿ. ಪಾಟೀಲ್ ಅವರ ಮಾಹಿತಿ ಪ್ರಕಾರ, ಜೂನ್ 23ರಂದು ಹೈಕೋರ್ಟ್ನಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಹೈಕೋರ್ಟ್ ಆದೇಶದ ಬಳಿಕ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯ ಜೂನ್ 30ರಂದು ತನ್ನ ತೀರ್ಪು ಪ್ರಕಟಿಸಲಿದೆ.

ಆದೇಶ ಮುಂದೂಡಿಕೆಗೆ ಕಾರಣವೇನು?
ಸಂತ್ರಸ್ತ ಬಾಲಕನ ತಾಯಿ ಈಗಾಗಲೇ ಜೂನ್ 6ರಂದು ವಚನಾನಂದ ಸ್ವಾಮೀಜಿಗೆ ನೀಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರವನ್ನು ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯದ ಗಮನಕ್ಕೆ ತರದ ಹಿನ್ನೆಲೆಯಲ್ಲಿ ಆದೇಶವನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.

ಹೈಕೋರ್ಟ್ಗೆ ಸ್ವಾಮೀಜಿ ಹಾಜರು
ಜೂನ್ 23ರಂದು ನಡೆಯಲಿರುವ ವಿಚಾರಣೆಗೆ ವಚನಾನಂದ ಸ್ವಾಮೀಜಿ ತಮ್ಮ ವಕೀಲರೊಂದಿಗೆ ಖುದ್ದಾಗಿ ಹೈಕೋರ್ಟ್ಗೆ ಹಾಜರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
MUST WATCH : ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು – HIGHWAY ತಡೆದು ಅನ್ನದಾತರ ಆಕ್ರೋಶ.! | CHIKKABALLAPURA NEWS |




