ದರ್ಶನ್ ನಟನೆಯ Devil ಸಿನಿಮಾ ಡಿಸೆಂಬರ್ 11ರಂದು ತೆರೆಕಂಡು ಎಷ್ಟು ಗಳಿಕೆ ಮಾಡಿದೆ?

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಈ ವಾರ ಎರಡು ದೊಡ್ಡ ಚಾಲೆಂಜ್ಗಳು ಎದುರಾಗುತ್ತಾ ಇವೆ. ಅದುವೇ ಮಾರ್ಕ್ ಹಾಗೂ ‘45’ ಸಿನಿಮಾಗಳು. ಎರಡೂ ಭಿನ್ನ ಜಾನರ್ ಚಿತ್ರಗಳು. ಎರಡೂ ಚಿತ್ರಕ್ಕೆ ಅದರದ್ದೇ ಆದ ಆಡಿಯನ್ಸ್ ಇದ್ದಾರೆ. ಈ ಎರಡೂ ಸಿನಿಮಾಗಳು ಡೆವಿಲ್ ಕಲೆಕ್ಷನ್ಗೆ ಸಾಕಷ್ಟು ಹೊಡೆತ ಕೊಡೋ ಎಲ್ಲಾ ಸಾಧ್ಯತೆ ಇದೆ. ಈಗೇ ತಗ್ಗಿರೋ Collection, ನಂತರ ಪಾತಾಳ ಕಾಣಲಿದೆ.

33.26 ಕೋಟಿ ಕಲೆಕ್ಷನ್
Devil ಸಿನಿಮಾ ಡಿಸೆಂಬರ್ 11ರಂದು ತೆರೆಕಂಡಿತ್ತು. ದರ್ಶನ್ ಅವರಿಂದ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಮೊದಲ ದಿನ ಈ ಸಿನಿಮಾ 10 ಕೋಟಿ ರೂಪಾಯಿ ಗಳಿಸುವ ಮೂಲಕ ಭರ್ಜರಿ ಆರಂಭ ಕಂಡರೂ, ನಂತರದ ದಿನಗಳಲ್ಲಿ ಕಲೆಕ್ಷನ್ ಕ್ರಮೇಣ ಇಳಿಮುಖವಾಯಿತು. ಪ್ರಸ್ತುತ ಚಿತ್ರವು ಸುಮಾರು 33.26 ಕೋಟಿ ರೂಪಾಯಿ (ಗ್ರಾಸ್ ಕಲೆಕ್ಷನ್) ಗಳಿಸಿದೆ.

ಏರಿಕೆ ಕಾಣುವುದು ಕಷ್ಟ
ಇನ್ನು ಈ ಚಿತ್ರದ ನಿರ್ಮಾಣ ವೆಚ್ಚ ಸುಮಾರು 45 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, TV ಹಾಗೂ OTT ಹಕ್ಕುಗಳ ಮಾರಾಟವನ್ನು ಸೇರಿಸಿಕೊಂಡರೂ ನಿರ್ಮಾಪಕರಿಗೆ ದೊಡ್ಡ ಮಟ್ಟದ ಲಾಭ ಸಿಗುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಮುಂದಿನ ದಿನಗಳಲ್ಲಿ ಚಿತ್ರದ Lifetime Collection ಗಮನಾರ್ಹವಾಗಿ ಏರಿಕೆ ಕಾಣುವುದು ಕಷ್ಟ ಎನ್ನಲಾಗುತ್ತಿದೆ.
ಇದನ್ನು ಓದಿ : Dina Bhavishya|ದಿನ ಭವಿಷ್ಯ 24 ಡಿಸೆಂಬರ್ 2025

ಪ್ರಚಾರಕ್ಕೆ ತೊಂದರೆ
ಈ ನಡುವೆ ದರ್ಶನ್ ಅವರು ಸದ್ಯ ಜೈಲಿನಲ್ಲಿ ಇರುವುದರಿಂದ ಚಿತ್ರದ ಪ್ರಚಾರಕ್ಕೆ ತೊಂದರೆಯಾಗಿತ್ತು. ಈ ಹೊತ್ತಿನಲ್ಲಿ ಅಭಿಮಾನಿಗಳೇ ಪ್ರಚಾರದ ಜವಾಬ್ದಾರಿಯನ್ನು ವಹಿಸಿಕೊಂಡು, ಒಂದು ಹಂತದವರೆಗೆ ಸಿನಿಮಾವನ್ನು ಬೆಂಬಲಿಸಿದರು. ಆದರೆ ಇದೀಗ ‘ಮಾರ್ಕ್’ ಹಾಗೂ ‘45’ ಸಿನಿಮಾಗಳ ಬಿಡುಗಡೆಯಿಂದ ಡೆವಿಲ್ ಚಿತ್ರಕ್ಕೆ ಕಠಿಣ ಸ್ಪರ್ಧೆ ಎದುರಾಗುವ ಎಲ್ಲ ಸಾಧ್ಯತೆಗಳೂ ಕಾಣಿಸುತ್ತಿವೆ.

ಇದನ್ನು ನೋಡಿ : JOB SCAM BY LOVERS | ಕೆಲಸ ಕೊಡಿಸುವುದಾಗಿ ಹಣ ಪಡೆದು ಪಂಗನಾಮ ಹಾಕಿದ LOVERS




