2ನೇ ದಿನ Devil ಕಲೆಕ್ಷನ್ ಎಷ್ಟು? ದರ್ಶನ್ ಅಬ್ಬರ ಹೇಗಿದೆ?

ದರ್ಶನ್ ಅಭಿಮಾನಿಗಳು ‘ಡೆವಿಲ್’ (The Devil Movie) ಸಿನಿಮಾವನ್ನು ಗೆಲ್ಲಿಸುವುದಕ್ಕೆ ಪಣ ತೊಟ್ಟು ನಿಂತಿದ್ದಾರೆ. ಅವರೇ ಮುಂದೆ ನಿಂತು ಥಿಯೇಟರ್ಗಳ ಮುಂದೆ ಸೆಲೆಬ್ರೆಷನ್ ಮಾಡುತ್ತಿದ್ದಾರೆ.
ಡೆವಿಲ್ First Day ಕಲೆಕ್ಷನ್ ಎಷ್ಟು?
ಚಿತ್ರತಂಡ ನೀಡಿರುವ ಅಂಕಿ-ಅಂಶಗಳ ಪ್ರಕಾರ, Devil ಮೊದಲ ದಿನವೇ ₹13.8 ಕೋಟಿ ಗಳಿಕೆ ಮಾಡಿದೆ. ಆದರೆ ಎರಡನೇ ದಿನ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಲು ಸಾಧ್ಯವಾಗಿಲ್ಲ. ಎರಡನೇ ದಿನ ವೀಕ್ಡೇ ಆಗಿರುವುದರಿಂದ ಜನರ ಥಿಯೇಟರ್ ಹಾಜರಾತಿ ಕಡಿಮೆಯಾಗಿದೆ ಎನ್ನಲಾಗಿದೆ.

ಎರಡನೇ ದಿನವೂ ಕೋಟಿಗಳಲ್ಲಿ ಗಳಿಸಿದ ಡೆವಿಲ್
ವರದಿಗಳ ಪ್ರಕಾರ, ಡೆವಿಲ್ ಸಿನಿಮಾ ಎರಡನೇ ದಿನ ಸುಮಾರು ₹3.5 ಕೋಟಿ ಗಳಿಕೆ ಮಾಡಿದ್ದು, ಎರಡು ದಿನಗಳ ಒಟ್ಟು ಕಲೆಕ್ಷನ್ ₹17 ಕೋಟಿ ತಲುಪಿದೆ. ಇನ್ನು ಕರ್ನಾಟಕದ ವಿತರಕರ ಮಾಹಿತಿ ಪ್ರಕಾರ, ಎರಡನೇ ದಿನ ಮಾತ್ರವೇ ‘ಡೆವಿಲ್’ ಸಿನಿಮಾ ₹5 ರಿಂದ ₹5.5 ಕೋಟಿ ವರೆಗೆ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಇದನ್ನು ಓದಿ : Tumakuru|ಸೆರಾಕೇರ್ ಕಂಪನಿಯಲ್ಲಿ ಕೆಲಸ ಮಾಡಲು ಬೇಕಾಗಿದ್ದಾರೆ
ಉತ್ತಮ ಪ್ರದರ್ಶನ
ಈ ನಡುವೆ, Week End ನಲ್ಲಿ ಸಿನಿಮಾ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ ಎಂದು ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಶನಿವಾರ ಮತ್ತು ಭಾನುವಾರ ಕುಟುಂಬದ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್ಗೆ ಬರಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಕಾಟೇರ ದಾಖಲೆಯನ್ನು ಡೆವಿಲ್ ಮುರಿಯಲು ಕಷ್ಟ
ಇನ್ನು ಈ ಹಿಂದೆ ಬಿಡುಗಡೆಯಾದ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ದಾಖಲೆಗಳನ್ನು ನಿರ್ಮಿಸಿತ್ತು. ಆ ದಾಖಲೆಯನ್ನು ‘ಡೆವಿಲ್’ ಮುರಿಯುವುದು ಕಷ್ಟವಾಗಬಹುದು ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಆದರೆ ಮುಂದಿನ ದಿನಗಳಲ್ಲಿ ಸಿನಿಮಾ ಯಾವ ಮಟ್ಟದ Collection ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನು ನೋಡಿ : ‘ಧುರಂಧರ್’ ಚಿತ್ರವನ್ನು ಹಾಡಿ ಹೊಗಳಿದ ಅಲ್ಲು ಅರ್ಜುನ್




