ನಟ ದರ್ಶನ್ ಗೆ ಬಿಗ್ ಶಾಕ್ : A14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿ ಅರ್ಜಿಯನ್ನು ಅಂಗೀಕರಿಸಿದ ಕೋರ್ಟ್!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಕಾನೂನು ಬೆಳವಣಿಗೆಯಾಗಿದೆ. ಪ್ರಕರಣದ A14 ಆರೋಪಿಯಾಗಿರುವ ಪ್ರದೋಷ್ ಎಸ್. ರಾವ್ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 59ನೇ ಸಿಸಿಹೆಚ್ (ವಿಶೇಷ) ನ್ಯಾಯಾಲಯವು ಅಂಗೀಕರಿಸಿ, ಅವರನ್ನು ಮಾಫಿ ಸಾಕ್ಷಿ ಆಗಿ ಪರಿಗಣಿಸಲು ಅನುಮತಿ ನೀಡಿದೆ.
Darshan ಗೆ ಮತ್ತೆ ಸಂಕಷ್ಟ!
ಈ ಬೆಳವಣಿಗೆಯಿಂದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಸೇರಿದಂತೆ ಇತರ ಆರೋಪಿಗಳಿಗೆ ಕಾನೂನು ಸಂಕಷ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಸತ್ಯಾಂಶಗಳನ್ನು ಸಂಪೂರ್ಣ ಬಹಿರಂಗಪಡಿಸಲು ಸೂಚನೆ
ಪ್ರದೋಷ್ ಅವರಿಗೆ ನ್ಯಾಯಾಲಯವು ಹಲವು ಷರತ್ತುಗಳನ್ನು ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಗಮನಕ್ಕೆ ಬಂದಿರುವ ಎಲ್ಲಾ ಸತ್ಯಾಂಶಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ನ್ಯಾಯಾಲಯದ ಮುಂದೆ ಸಂಪೂರ್ಣವಾಗಿ ಬಹಿರಂಗಪಡಿಸಬೇಕು ಎಂದು ಸೂಚಿಸಲಾಗಿದೆ.
ಪ್ರದೋಷ್ ನೀಡುವ ಹೇಳಿಕೆಗಳು ಸತ್ಯವಾಗಿದ್ದು, ಪ್ರಕರಣದ ಸಂಪೂರ್ಣ ವಾಸ್ತವಾಂಶಗಳನ್ನು ಬಹಿರಂಗಪಡಿಸಿದಲ್ಲಿ ಮಾತ್ರ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ, ಪ್ರಕರಣದಿಂದ ಮುಕ್ತಿ ನೀಡುವ ಮುಂದಿನ ಪ್ರಕ್ರಿಯೆ ನಡೆಯಲಿದೆ. ಈ ಕುರಿತ ನ್ಯಾಯಾಲಯದ ಆದೇಶದ ಪ್ರತಿಯನ್ನು ಜೈಲು ಅಧಿಕಾರಿಗಳ ಮೂಲಕ ಪ್ರದೋಷ್ ಅವರಿಗೆ ರವಾನಿಸಲಾಗಿದೆ.
READ THIS : Darshan ಗೆ ಸಂಕಷ್ಟ – ಮಾಫಿ ಸಾಕ್ಷಿ ಆಗಲು ಎ-14 ಪ್ರದೋಷ್ ಅರ್ಜಿ

ವಿಚಾರಣೆ ಮುಗಿಯುವವರೆಗೆ ಜೈಲಿನಲ್ಲೇ A14 ಆರೋಪಿ ಪ್ರದೋಷ್
ಮಾಫಿ ಸಾಕ್ಷಿಯಾಗಲು ನ್ಯಾಯಾಲಯ ಅನುಮತಿ ನೀಡಿದರೂ, ಪ್ರಕರಣದ ಸಂಪೂರ್ಣ ವಿಚಾರಣೆ ಮುಗಿಯುವವರೆಗೆ ಪ್ರದೋಷ್ ಜೈಲಿನಲ್ಲಿಯೇ ಇರಬೇಕಾಗುತ್ತದೆ. ಇನ್ನು ನ್ಯಾಯಾಲಯ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದರೆ ಅಥವಾ ಉದ್ದೇಶಪೂರ್ವಕವಾಗಿ ಸುಳ್ಳು ಸಾಕ್ಷ್ಯ ನೀಡಿದರೆ, ಅವರ ವಿರುದ್ಧ ಸುಳ್ಳು ಸಾಕ್ಷ್ಯ ನೀಡಿದ ಆರೋಪದಡಿ ಪ್ರತ್ಯೇಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಪ್ರದೋಷ್ ಅವರ ಈ ನಿರ್ಧಾರವು ನಟ ದರ್ಶನ್ ಮತ್ತು ಇತರ ಆರೋಪಿಗಳ ವಿರುದ್ಧದ ಪ್ರಾಸಿಕ್ಯೂಷನ್ ತನಿಖೆಗೆ ದೊಡ್ಡ ಬಲ ತಂದಿದೆ.

MUST WATCH : AMBULANCEನಿಂದ ESCAPE ಆದವ ಸಾ* – NELAMANGALAದ ಕೆರೆಯಲ್ಲಿ ಶ*ವಾಗಿ ಪತ್ತೆ




