
MURDER : ಕೇವಲ ಎರಡೂವರೆ ಲಕ್ಷಕ್ಕೆ ಸ್ನೇಹಿತನನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ಕುಚಿಕು ಗೆಳೆಯ!
ಹಣದ ವ್ಯವಹಾರಕ್ಕೆ ಸಂಬಂಧಿಸಿದ ಮನಸ್ತಾಪವೊಂದು ಸ್ನೇಹಿತನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ನಡೆದಿದೆ. ಕೇವಲ ಎರಡೂವರೆ ಲಕ್ಷ ರೂಪಾಯಿ ಹಣದ ವಿಚಾರವಾಗಿ ಕುಚಿಕು ಗೆಳೆಯನನ್ನೇ ಕೊಲೆ ಮಾಡಿದ್ದಾನೆ.
ಸ್ನೇಹಿತನನ್ನೇ ಕೊಂದ ಕುಚಿಕು ಗೆಳೆಯ
62 ವರ್ಷದ ದ್ಯಾವಪ್ಪ ಘೋಜನೂರು ಕೊಲೆಯಾದ ವ್ಯಕ್ತಿಯಾಗಿದ್ದಾರೆ. ಅಕ್ಟೋಬರ್ 8ರಿಂದ ನಾಪತ್ತೆಯಾಗಿದ್ದ ದ್ಯಾವಪ್ಪ ಘೋಜನೂರು ಅವರ ಮೃತದೇಹ 11 ದಿನಗಳ ಬಳಿಕ ಪತ್ತೆಯಾಗಿದೆ. ಪ್ರಕರಣದಲ್ಲಿ ಸ್ನೇಹಿತ ಶರಣಪ್ಪ ನರಗುಂದನ ಮೇಲೆ ಕೊಲೆ ಆರೋಪ ಕೇಳಿಬಂದಿದ್ದು, ಪೊಲೀಸರ ವಿಚಾರಣೆಯಲ್ಲಿ ಸತ್ಯ ಹೊರಬಂದಿದೆ.
READ THIS : ಬಸ್ ನಿಲ್ದಾಣದಲ್ಲಿ ವ್ಯಕ್ತಿಯ ಶವ ಪತ್ತೆ! ಕೊಲೆ ಎಂದು ಆರೋಪ!

ಆಗಿದ್ದೇನು?
ರೈತರ ಬೆಳೆಗಳನ್ನ ಖರೀದಿ ಮಾಡೋದು ವ್ಯವಹಾರ ನಡೆಸುತ್ತಿದ್ದರು. ಕೊಲೆಗಾರ ಶರಣಪ್ಪನ ಹೆಸರಿನಲ್ಲಿ ಬಾಂಡ್ ಮಾಡಿಸಿ ಲಕ್ಷಾಂತರ ರೂಪಾಯಿ ವ್ಯವಹಾರ ಮಾಡಿದ್ದರು. ಎರಡೂವರೆ ಲಕ್ಷ ಹಣಕ್ಕೋಸ್ಕರ ಶರಣಪ್ಪ ನರಗುಂದ ದ್ಯಾವಪ್ಪನನ್ನು MURDER ಮಾಡಿದ್ದಾನೆ.
MURDER – ಕಾಲುವೆಯ ಪೈಪ್ನಲ್ಲಿ ಮೃತದೇಹ ಪತ್ತೆ!
ಇನ್ನು ಅಕ್ಟೋಬರ್ 8ರಂದು ಮನೆಯಿಂದ ಹೊರಟಿದ್ದ ದ್ಯಾವಪ್ಪ ಮತ್ತೆ ವಾಪಸ್ ಬಂದಿರಲಿಲ್ಲ. ಕುಟುಂಬಸ್ಥರು ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಹುಡುಕಾಟದ ವೇಳೆ ಅಕ್ಟೋಬರ್ 19ರಂದು ಕಾಲುವೆಯ ಪೈಪ್ನಲ್ಲಿ ದ್ಯಾವಪ್ಪ ಅವರ ಮೃತದೇಹ ಪತ್ತೆಯಾಗಿದೆ.
ಮತ್ತೊಂದೆಡೆ ದ್ಯಾವಪ್ಪ ಅವರ ಸಾವಿನ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಸ್ನೇಹಿತ ಶರಣಪ್ಪನ ಮೇಲೆ ಅನುಮಾನ ಬಂದಿದ್ದು, ವಿಚಾರಣೆಗೆ ನಡೆಸಿದಾಗ ಸತ್ಯ ಹೊರಬಂದಿದೆ.

MUST WATCH : VIJAYENDRA, NIRANI ಜೊತೆ ಮಾತು – ಶಾಸಕ YATHNAL ಹೇಳಿದ್ದೇನು ಗೊತ್ತಾ..?




