ರೈಲ್ವೆ ಪ್ರಯಾಣಿಕರೇ ಗಮನಿಸಿ – Waiting List ನಿಯಮಗಳಲ್ಲಿ ಮಹತ್ವದ ಬದಲಾವಣೆ, ಇಂದಿನಿಂದಲೇ ಜಾರಿ.

ರೈಲುಗಳಲ್ಲಿ ಹೆಚ್ಚುತ್ತಿರುವ ಜನದಟ್ಟಣೆ ಮತ್ತು ಪ್ರಯಾಣಿಕರ ಅಸೌಕರ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾರತೀಯ ರೈಲ್ವೆ ಮಂಡಳಿಯು ಮಹತ್ವದ ನಿರ್ಧಾರ ಕೈಗೊಂಡಿದೆ.
ಜೂನ್ 1, 2026 ರಿಂದ ಜಾರಿಗೆ ಬರುವಂತೆ ಸ್ಲೀಪರ್ ಹಾಗೂ ಎಸಿ ಕೋಚ್ಗಳ Waiting List ಟಿಕೆಟ್ ವಿತರಣೆಗೆ ಕಟ್ಟುನಿಟ್ಟಿನ ಮಿತಿಗಳನ್ನು ವಿಧಿಸಲಾಗಿದೆ.
ವೈಟಿಂಗ್ ಲಿಸ್ಟ್ ನಿಯಮಗಳಲ್ಲಿ ಬದಲಾವಣೆ
ಇತ್ತೀಚಿನ ದಿನಗಳಲ್ಲಿ ರೈಲುಗಳ ಗ್ಯಾಲರಿ, ಬಾಗಿಲು ಮತ್ತು ಶೌಚಾಲಯದ ಬಳಿ ಪ್ರಯಾಣಿಕರು ನಿಂತು ಪ್ರಯಾಣಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಸಾರ್ವಜನಿಕ ಅಸಮಾಧಾನ ಹೆಚ್ಚಾಗಿತ್ತು.
ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆಗಾಗಿ ಈ ಕ್ರಮ ಕೈಗೊಂಡಿದೆ.

ಹೊಸ ನಿಯಮಗಳ ಪ್ರಮುಖ ಅಂಶಗಳು
ಸ್ಲೀಪರ್ ಕೋಚ್ಗಳು:
ಸ್ಲೀಪರ್ ತರಗತಿಯಲ್ಲಿ ಒಟ್ಟು ಆಸನ ಸಾಮರ್ಥ್ಯದ ಗರಿಷ್ಠ ಶೇ.30 ರಷ್ಟು ಮಾತ್ರ ವೈಟಿಂಗ್ ಲಿಸ್ಟ್ ಟಿಕೆಟ್ಗಳನ್ನು ನೀಡಲಾಗುತ್ತದೆ. ಇದರಿಂದ ಕೋಚ್ ಸಾಮರ್ಥ್ಯಕ್ಕೆ ಅನುಗುಣವಾಗಿ ಸರಾಸರಿ 150 ರಿಂದ 200 ಟಿಕೆಟ್ಗಳಷ್ಟೇ ಕಾಯುವಿಕೆ ಪಟ್ಟಿಯಲ್ಲಿ ಇರಲಿದೆ.
ಎಸಿ ಕೋಚ್ಗಳು:
ಎಸಿ ಬೋಗಿಗಳಲ್ಲಿ ಈಗಿರುವ ಸ್ಥಿರ 300 ಟಿಕೆಟ್ ಮಿತಿಯ ಬದಲಿಗೆ, ಇನ್ನು ಮುಂದೆ ಒಟ್ಟು ಆಸನ ಸಾಮರ್ಥ್ಯದ ಶೇ.60 ರಷ್ಟು ಮಾತ್ರ ವೈಟಿಂಗ್ ಲಿಸ್ಟ್ ಟಿಕೆಟ್ ನೀಡಲಾಗುತ್ತದೆ.
ಇದನ್ನು ಓದಿ : ಶಿವಭಕ್ತರಿಗೆ ಗುಡ್ನ್ಯೂಸ್ – ಒಂದೇ ಪ್ರವಾಸದಲ್ಲಿ ‘ಸಪ್ತ ಜ್ಯೋತಿರ್ಲಿಂಗ’ ದರ್ಶನ ಭಾಗ್ಯ!

ಈ ಕ್ರಮದ ಉದ್ದೇಶ ಏನು?
ಹಿಂದಿನ ದಿನಗಳಲ್ಲಿ ಸ್ಲೀಪರ್ ಕ್ಲಾಸ್ನಲ್ಲಿ ವೈಟಿಂಗ್ ಲಿಸ್ಟ್ ಸಂಖ್ಯೆ 600–700 ವರೆಗೆ ಏರಿಕೆ ಕಂಡಿದ್ದು, 3AC ಕೋಚ್ಗಳಲ್ಲಿ 400ಕ್ಕೂ ಹೆಚ್ಚು ಪ್ರಯಾಣಿಕರು ಕಾಯುವಿಕೆ ಪಟ್ಟಿಯಲ್ಲಿ ಇರುತ್ತಿದ್ದರು.
ಇದರಿಂದ ದೃಢೀಕೃತ ಟಿಕೆಟ್ ಹೊಂದಿದ ಪ್ರಯಾಣಿಕರಿಗೂ ತೊಂದರೆ ಉಂಟಾಗುತ್ತಿತ್ತು.
ನೂಕುನುಗ್ಗಲು ಗಣನೀಯವಾಗಿ ಕಡಿಮೆ
ಬದಲಾದ ಈ ನಿಯಮಗಳಿಂದಾಗಿ ಮುಂಬರುವ ದಿನಗಳಲ್ಲಿ ಕನ್ಫರ್ಮ್ ಟಿಕೆಟ್ ಪಡೆದ ಪ್ರಯಾಣಿಕರ ಪ್ರಯಾಣ ಹೆಚ್ಚು ಸುಖಕರ ಮತ್ತು ಸುರಕ್ಷಿತವಾಗಲಿದ್ದು, ಕೊನೆಯ ಕ್ಷಣದ ಗೊಂದಲಗಳು ಹಾಗೂ ಕೋಚ್ಗಳ ಒಳಗಿನ ಅತಿಯಾದ ನೂಕುನುಗ್ಗಲು ಗಣನೀಯವಾಗಿ ಕಡಿಮೆಯಾಗಲಿದೆ.

ಇದನ್ನು ನೋಡಿ : COMMERCIAL CYLINDER ದರ ಮತ್ತೆ ಏರಿಕೆ – HOTEL ಊಟ ಮತ್ತಷ್ಟು ದುಬಾರಿಯಾಗುತ್ತಾ.?




