ಒಂದೇ ಪ್ರವಾಸದಲ್ಲಿ 7 ಜ್ಯೋತಿರ್ಲಿಂಗಗಳ ದರ್ಶನ ಮಾಡುವ ಅವಕಾಶ..! ಮಿಸ್ ಮಾಡ್ಕೋಬೇಡಿ

ಶಿವಭಕ್ತರಿಗಾಗಿ ಭಾರತೀಯ ರೈಲ್ವೆ ಸೌಲಭ್ಯ ಮತ್ತು ಪ್ರವಾಸೋದ್ಯಮ ನಿಗಮ (IRCTC) ವಿಶೇಷ ಆಧ್ಯಾತ್ಮಿಕ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದೆ. “ಸಪ್ತ ಜ್ಯೋತಿರ್ಲಿಂಗ ದರ್ಶನ ಯಾತ್ರೆ” ಹೆಸರಿನ ಈ ವಿಶೇಷ ಪ್ರವಾಸದ ಮೂಲಕ ಭಕ್ತರು ದೇಶದ ಏಳು ಪ್ರಮುಖ ಜ್ಯೋತಿರ್ಲಿಂಗಗಳ ಜೊತೆಗೆ ಹಲವು ಪ್ರಸಿದ್ಧ ಪುಣ್ಯಕ್ಷೇತ್ರಗಳನ್ನು ಒಂದೇ ಯಾತ್ರೆಯಲ್ಲಿ ದರ್ಶಿಸುವ ಅವಕಾಶ ಪಡೆಯಲಿದ್ದಾರೆ.
ಶಿವಭಕ್ತರಿಗೆ ಐಆರ್ಸಿಟಿಸಿ ಬಂಪರ್ ಕೊಡುಗೆ
ಜೂನ್ 16ರಂದು ಸಿಕಂದರಾಬಾದ್ನಿಂದ ಆರಂಭವಾಗಲಿರುವ ಈ ಯಾತ್ರೆ, ‘ಭಾರತ್ ಗೌರವ್ ಪ್ರವಾಸಿ ರೈಲು’ ಮೂಲಕ ನಡೆಯಲಿದ್ದು, ಒಟ್ಟು 10 ರಾತ್ರಿ ಮತ್ತು 11 ದಿನಗಳ ಕಾಲ ಸಾಗಲಿದೆ. ತೆಲಂಗಾಣ ಹಾಗೂ ಆಂಧ್ರಪ್ರದೇಶದ ಯಾತ್ರಿಕರ ಅನುಕೂಲಕ್ಕಾಗಿ ಸಿಕಂದರಾಬಾದ್, ಕಾಮರೆಡ್ಡಿ ಮತ್ತು ನಿಜಾಮಾಬಾದ್ ಜಂಕ್ಷನ್ಗಳಲ್ಲಿ ರೈಲು ಹತ್ತುವ ಸೌಲಭ್ಯ ಕಲ್ಪಿಸಲಾಗಿದೆ.
ಯಾವೆಲ್ಲ ಪುಣ್ಯಕ್ಷೇತ್ರಗಳ ದರ್ಶನ?
ಈ ಪ್ರವಾಸದಲ್ಲಿ ಮಧ್ಯಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳ ಪ್ರಮುಖ ಜ್ಯೋತಿರ್ಲಿಂಗ ದೇವಾಲಯಗಳನ್ನು ಒಳಗೊಂಡಿದೆ.
ಮಧ್ಯಪ್ರದೇಶ
- ಮಹಾಕಾಳೇಶ್ವರ ಜ್ಯೋತಿರ್ಲಿಂಗ
- ಓಂಕಾರೇಶ್ವರ ಜ್ಯೋತಿರ್ಲಿಂಗ
ಗುಜರಾತ್
- ದ್ವಾರಕಾಧೀಶ ದೇವಾಲಯ
- ನಾಗೇಶ್ವರ ಜ್ಯೋತಿರ್ಲಿಂಗ (ದ್ವಾರಕಾ ಹತ್ತಿರ)
- ಪ್ರಸಿದ್ಧ ಸೋಮನಾಥ ಜ್ಯೋತಿರ್ಲಿಂಗ
ಮಹಾರಾಷ್ಟ್ರ
- ಭೀಮಾಶಂಕರ ಜ್ಯೋತಿರ್ಲಿಂಗ
- ತ್ರಯಂಬಕೇಶ್ವರ ಜ್ಯೋತಿರ್ಲಿಂಗ (ನಾಸಿಕ್)
- ಘೃಷ್ಣೇಶ್ವರ ಜ್ಯೋತಿರ್ಲಿಂಗ (ಛತ್ರಪತಿ ಶಂಭಾಜಿನಗರ)

ಇದನ್ನು ಓದಿ : ಶಬರಿಮಲೆಗೆ ತೆರಳುವ ಭಕ್ತರಿಗಾಗಿ ನೈಋತ್ಯ ರೈಲ್ವೆಯಿಂದ 14 ವಿಶೇಷ ರೈಲುಗಳು
ಯಾತ್ರೆಯ ವೇಳಾಪಟ್ಟಿ
ಯಾತ್ರಿಕರು ಸಿಕಂದರಾಬಾದ್ನಿಂದ ಹೊರಟು ಮೊದಲು ಉಜ್ಜಯಿನಿ ತಲುಪಿ ಮಹಾಕಾಳೇಶ್ವರ ಮತ್ತು ಓಂಕಾರೇಶ್ವರ ಜ್ಯೋತಿರ್ಲಿಂಗಗಳ ದರ್ಶನ ಪಡೆಯಲಿದ್ದಾರೆ. ನಂತರ ಗುಜರಾತ್ನಲ್ಲಿ ದ್ವಾರಕಾಧೀಶ, ನಾಗೇಶ್ವರ ಹಾಗೂ ಸೋಮನಾಥ ಕ್ಷೇತ್ರಗಳ ದರ್ಶನ ಮಾಡಲಿದ್ದಾರೆ. ಕೊನೆಯ ಹಂತದಲ್ಲಿ ಮಹಾರಾಷ್ಟ್ರದ ಭೀಮಾಶಂಕರ, ತ್ರ್ಯಂಬಕೇಶ್ವರ ಮತ್ತು ಘೃಷ್ಣೇಶ್ವರ ಜ್ಯೋತಿರ್ಲಿಂಗಗಳ ದರ್ಶನದೊಂದಿಗೆ ಯಾತ್ರೆ ಪೂರ್ಣಗೊಳ್ಳಲಿದೆ.
ಟಿಕೆಟ್ ದರ ಎಷ್ಟು?
ಎಕಾನಮಿ ಕ್ಲಾಸ್ (ಸ್ಲೀಪರ್)
- ವಯಸ್ಕರಿಗೆ: ₹17,600
- 5 ರಿಂದ 11 ವರ್ಷದ ಮಕ್ಕಳಿಗೆ: ₹16,300
ಸ್ಟ್ಯಾಂಡರ್ಡ್ ಕ್ಲಾಸ್ (3AC)
- ವಯಸ್ಕರಿಗೆ: ₹26,700
- ಮಕ್ಕಳಿಗೆ: ₹25,200
ಕಂಫರ್ಟ್ ಕ್ಲಾಸ್ (2AC)
- ವಯಸ್ಕರಿಗೆ: ₹34,600
- ಮಕ್ಕಳಿಗೆ: ₹32,800

ಪ್ಯಾಕೇಜ್ನಲ್ಲಿ ಏನೆಲ್ಲ ಸೌಲಭ್ಯ?
IRCTC ಯಾತ್ರಿಕರಿಗಾಗಿ ಹಲವು ವಿಶೇಷ ಸೌಲಭ್ಯಗಳನ್ನು ಒದಗಿಸಿದೆ.
- ಪ್ರತಿದಿನ ಬೆಳಗಿನ ಚಹಾ, ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಸಸ್ಯಾಹಾರಿ ಊಟ
- ಹೋಟೆಲ್ ವಾಸ್ತವ್ಯದ ವ್ಯವಸ್ಥೆ
- ಸ್ಥಳೀಯ ಸಾರಿಗೆ ಸೌಲಭ್ಯ
- ಪ್ರಯಾಣ ವಿಮೆ ಹಾಗೂ ಭದ್ರತಾ ವ್ಯವಸ್ಥೆ
- ಅನುಭವಿ ಟೂರ್ ಮ್ಯಾನೇಜರ್ಗಳ ಮಾರ್ಗದರ್ಶನ
ಶಿವಭಕ್ತರಿಗೆ ಏಳು ಜ್ಯೋತಿರ್ಲಿಂಗಗಳ ದರ್ಶನವನ್ನು ಒಂದೇ ಯಾತ್ರೆಯಲ್ಲಿ ಮಾಡಲು ಈ ಪ್ಯಾಕೇಜ್ ಅಪರೂಪದ ಅವಕಾಶವಾಗಿದ್ದು, ಆಧ್ಯಾತ್ಮಿಕ ಪ್ರವಾಸ ಕೈಗೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
ಇದನ್ನು ನೋಡಿ : ಸಿಎಂ ಆದ ತಂದೆ ಡಿಕೆಶಿಗೆ ಮಗಳ ಅಭಿನಂದನೆ ಭಾವನಾತ್ಮಕ ಪೋಸ್ಟ್ ಮಾಡಿದ ಐಶ್ಞರ್ಯ ಹೆಗ್ಡೆ




