Prajwal Revanna ಬ್ಯಾರಕ್ನಲ್ಲಿ ಮೊಬೈಲ್ ಪತ್ತೆ – ಜೈಲು ಸಹಾಯಕ ಸೂಪರಿಂಟೆಂಡೆಂಟ್ ಸಸ್ಪೆಂಡ್!

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಂಗಳವಾರ ಸಿಸಿಬಿ ಪೊಲೀಸರು ನಡೆಸಿದ ದಿಢೀರ್ ಶೋಧ ಕಾರ್ಯಾಚರಣೆಯಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ನಲ್ಲಿ ಆಂಡ್ರಾಯ್ಡ್ ಮೊಬೈಲ್ ಫೋನ್ ಪತ್ತೆಯಾಗಿದೆ. ಅಧಿಕಾರಿಗಳು ಮೊಬೈಲ್ನ್ನು ಜಪ್ತಿ ಮಾಡಿದ್ದು, ಘಟನೆಗೆ ಸಂಬಂಧಿಸಿದಂತೆ ಜೈಲು ಸಿಬ್ಬಂದಿಯ ಕರ್ತವ್ಯ ಲೋಪದ ಬಗ್ಗೆಯೂ ತನಿಖೆ ಆರಂಭಿಸಲಾಗಿದೆ.
ಐದು ಗಂಟೆಗಳ ಕಾಲ ಸತತ ಶೋಧ
ಜೈಲಿನ ಹೈ-ಸೆಕ್ಯುರಿಟಿ ವಿಭಾಗದಲ್ಲಿರುವ ಪ್ರಭಾವಿ ಕೈದಿಗಳು ಹಾಗೂ ಇತರ ವಿಚಾರಣಾಧೀನ ಕೈದಿಗಳ ಬ್ಯಾರಕ್ಗಳ ಮೇಲೆ ಸಿಸಿಬಿಯ ವಿಶೇಷ ತಂಡ ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾಲ ಸತತ ಶೋಧ ನಡೆಸಿತು. ಈ ವೇಳೆ Prajwal Revanna ಅವರ ಬ್ಯಾರಕ್ನಲ್ಲಿ ಮೊಬೈಲ್ ಪತ್ತೆಯಾಗಿದೆ.

ಘಟನೆಯ ಕುರಿತು ಸಮಗ್ರ ತನಿಖೆಗೆ ಆದೇಶ
ಈ ಗಂಭೀರ ಭದ್ರತಾ ವೈಫಲ್ಯ ಹಾಗೂ ಕರ್ತವ್ಯ ಲೋಪವನ್ನು ಮನಗಂಡು ದಕ್ಷಿಣ ವಲಯದ ಡಿಐಜಿ ನೀಡಿದ ವರದಿಯ ಆಧಾರದ ಮೇಲೆ ಜೈಲಿನ ಸಹಾಯಕ ಸೂಪರಿಂಟೆಂಡೆಂಟ್ ಈರಣ್ಣ ರಂಗಾಪುರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಇದರ ಜೊತೆಗೆ, ಬೆಂಗಳೂರು ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ಇಡೀ ಘಟನೆಯ ಕುರಿತು ಸಮಗ್ರ ತನಿಖೆಗೆ ಆದೇಶಿಸಲಾಗಿದೆ ಎಂದು ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಇದನ್ನು ಓದಿ : ಅತ್ಯಾಚಾರ ಪ್ರಕರಣದಲ್ಲಿ Prajwal Revanna ಗೆ ಮತ್ತೊಂದು ಶಾಕ್ ..!!
ಯಾವುದೇ ನಿಷೇಧಿತ ವಸ್ತುಗಳು ಕಂಡುಬಂದಿರಲಿಲ್ಲ
ಇದಕ್ಕೂ ಮೊದಲು ಆಗಸ್ಟ್ 6ರಂದು ಜೈಲು ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ನಲ್ಲಿ ತಪಾಸಣೆ ನಡೆಸಿದ್ದರು. ಆಗ ಯಾವುದೇ ನಿಷೇಧಿತ ವಸ್ತುಗಳು ಪತ್ತೆಯಾಗಿರಲಿಲ್ಲ.
ಆದರೆ, ಆಗಸ್ಟ್ 11ರಂದು ಸಿಸಿಬಿಯ ವಿಶೇಷ ತಂಡ ನಡೆಸಿದ ಶೋಧದಲ್ಲಿ ಮೊಬೈಲ್ ಪತ್ತೆಯಾಗಿರುವುದು ಜೈಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮೊಬೈಲ್ ಜೈಲಿನೊಳಗೆ ತಂದಿದ್ದು ಯಾರು?
ಜೈಲಿನ ಅತಿ ಸೂಕ್ಷ್ಮ ಹಾಗೂ ಭದ್ರತಾ ವಿಭಾಗದಲ್ಲಿರುವ ಬ್ಯಾರಕ್ಗೆ ಮೊಬೈಲ್ ಫೋನ್ ಹೇಗೆ ತಲುಪಿತು ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಮೊಬೈಲ್ನ್ನು ಯಾರು ಒಳಗೆ ತಂದರು.
ಇದರಲ್ಲಿ ಜೈಲು ಸಿಬ್ಬಂದಿ ಅಥವಾ ಇತರರ ಪಾತ್ರವಿದೆಯೇ ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧ FIR
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ನೀಡಿದ್ದು, ಎಫ್ಐಆರ್ ದಾಖಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಅಷ್ಟೇ ಅಲ್ಲದೆ, ಜೈಲಿನ ಅತಿ ಸೂಕ್ಷ್ಮ ಹಾಗೂ ಭದ್ರತಾ ವಿಭಾಗದೊಳಗೆ ಮೊಬೈಲ್ ತಲುಪಿದ್ದು ಹೇಗೆ ಮತ್ತು ಇದರ ಹಿಂದೆ ಯಾರ್ಯಾರ ಪಾತ್ರವಿದೆ ಎಂಬುದರ ಕುರಿತು ವಿಸ್ತೃತ ತನಿಖೆ ಮುಂದುವರಿದಿದೆ.

ಇದನ್ನು ನೋಡಿ : ತುಮಕೂರಿಗರಿಗೆ ಬೀದಿನಾಯಿ ಕಾಟ-ರಸ್ತೆಗಿಳಿದ್ರೆ ನಾಯಿಗಳ ಅಟ್ಯಾಕ್ ಭೀತಿ.!




