Bengaluru : ಇಂದು ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ

Bengaluru : ಹಲವು ದಿನಗಳಿಂದ ನಡೆದಿರುವ ತೀವ್ರ ರಾಜಕೀಯ ಹಗ್ಗಜಗ್ಗಾಟ ಹಾಗೂ ಸಮಾಲೋಚನೆಗಳ ನಂತರ, ಕೊನೆಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟಕ್ಕೆ ನೂತನ ಸಚಿವರನ್ನು ಸೇರ್ಪಡೆಗೊಳಿಸಲು ಮುಹೂರ್ತ ನಿಗದಿಯಾಗಿದೆ.
ಆಕಾಂಕ್ಷಿಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭ
ಇಂದು ಸಂಜೆ 4 ಗಂಟೆಗೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಸಿದ್ಧತೆಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಕಚೇರಿಯಿಂದ ರಾಜಭವನಕ್ಕೆ ಈಗಾಗಲೇ ಮಾಹಿತಿ ರವಾನಿಸಲಾಗಿದೆ. ಇದರಿಂದಾಗಿ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ.
ಇದನ್ನು ಓದಿ : ಡಿಕೆಶಿ ಸಂಪುಟ ಪಟ್ಟಿ ಫೈನಲ್? ಯಾರ್ಯಾರಿಗೆ ಸಚಿವ ಸ್ಥಾನ?

ಇಂದು ನೂತನ ಸಚಿವರಾಗಿ 20 ಮಂದಿ ಪ್ರಮಾಣವಚನ
ಎಐಸಿಸಿ ಉನ್ನತ ಮೂಲಗಳ ಪ್ರಕಾರ, ಈ ಬಾರಿ ಸಂಪುಟದಲ್ಲಿ ಹಿರಿಯ ಹಾಗೂ ಅನುಭವಿ ನಾಯಕರಿಗೆ ಆದ್ಯತೆ ನೀಡಲಾಗಿದ್ದು, ಲಕ್ಷ್ಮಣ ಸವದಿ, ಶಿವರಾಜ್ ತಂಗಡಗಿ, ಬಿ. ಜಮೀರ್ ಅಹ್ಮದ್ ಖಾನ್, ಎನ್. ಚೆಲುವರಾಯಸ್ವಾಮಿ, ಎಸ್.ಎಸ್. ಮಲ್ಲಿಕಾರ್ಜುನ, ಬಿ. ನಾಗೇಂದ್ರ, ಸಂತೋಷ್ ಲಾಡ್ ಹಾಗೂ ಮಧು ಬಂಗಾರಪ್ಪ ಅವರ ಹೆಸರುಗಳು ಸಚಿವ ಸ್ಥಾನಕ್ಕೆ ಪ್ರಮುಖವಾಗಿ ಕೇಳಿಬರುತ್ತಿವೆ.
ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ
ಕಾಂಗ್ರೆಸ್ ಹೈಕಮಾಂಡ್ ಜತೆಗಿನ ದೀರ್ಘ ಚರ್ಚೆಯ ಬಳಿಕ ಪ್ರಾದೇಶಿಕ ಹಾಗೂ ಜಾತಿ ಸಮತೋಲನವನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎನ್ನಲಾಗಿದೆ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ನಂತರ ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ನಡೆಯಲಿದ್ದು, ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ.

ಇದನ್ನು ನೋಡಿ : ಪುಟ್ಪಾತ್ ಒತ್ತುವರಿ ವಿರುದ್ಧ ಪಾಲಿಕೆ ಸಮರ – ಒಟ್ಟು 115.56 ಕಿ.ಮೀ. ಒತ್ತುವರಿ ತೆರವು




