ಬೆಂಗಳೂರಲ್ಲಿ ಹಲವು RTO ಕಚೇರಿ ಸ್ಪೋಟಿಸುವುದಾಗಿ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ.

ಬೆಂಗಳೂರಿನಲ್ಲಿ ಹಲವು RTO ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶ ಬಂದಿದೆ ಬೆಂಗಳೂರಿನ ಆರ್ಟಿಓ ಕಚೇರಿಗಳನ್ನು ಸ್ಪೋಟಿಸುವುದಾಗಿ ಇಮೇಲ್ ಮೂಲಕ ಕಿಡಿಗೇಡಿಗಳು ಬೆದರಿಕೆ ಸಂದೇಶ ಕಳುಹಿಸಿದ್ದಾನೆ.
ಆರ್ಟಿಓ ಕಚೇರಿ ಸ್ಪೋಟಿಸುವುದಾಗಿ ಬಾಂಬ್ ಬೆದರಿಕೆ
ಕಸ್ತೂರಿ ನಗರ, ಜ್ಞಾನಭಾರತಿ, ತಲಘಟ್ಟಪುರ ಹಾಗೂ ಎಚ್ಎಸ್ಆರ್ ಲೇಔಟ್ ಸೇರಿದಂತೆ ನಗರದ ಹಲವು ಆರ್ಟಿಓ ಕಚೇರಿಗಳಿಗೆ ಈ ಬೆದರಿಕೆ ಇಮೇಲ್ ಕಳುಹಿಸಲಾಗಿದೆ. ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಅಧಿಕಾರಿಗಳಿಗೆ ಇಮೇಲ್ ತಲುಪಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ : ಖ್ಯಾತ ತಮಿಳು ನಟನ ಮನೆಗೆ Bomb Threat

ಯಾವ RTO ಕಚೇರಿಗಳಲ್ಲೂ ಬಾಂಬ್ ಪತ್ತೆಯಾಗಿಲ್ಲ
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಸಂಬಂಧಿತ ಆರ್ಟಿಓ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಚೇರಿ ಆವರಣ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ತಪಾಸಣೆ ಕೈಗೊಳ್ಳಲಾಗಿದೆ.
ಆದರೆ ಪರಿಶೀಲನೆ ವೇಳೆ ಯಾವುದೇ ಆರ್ಟಿಓ ಕಚೇರಿಯಲ್ಲೂ ಸ್ಫೋಟಕ ವಸ್ತುಗಳು ಅಥವಾ ಬಾಂಬ್ ಪತ್ತೆಯಾಗಿಲ್ಲ. ಹೀಗಾಗಿ ಇದು ಸುಳ್ಳು ಬೆದರಿಕೆ ಇಮೇಲ್ ಆಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನು ನೋಡಿ : ಕೋರ್ಟ್ನಲ್ಲಿ ಯಾವುದಾದ್ರು ಕೇಸ್ ಇದ್ಯಾ..? – ಕೇಸ್ ಇತ್ಯರ್ಥಕ್ಕೆ ಏನ್ ಮಾಡ್ಬೇಕು ಗೊತ್ತಾ?




