Bengaluru | ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಯುವತಿಯರ ಶವ ಪತ್ತೆ!

Bengaluru ಉತ್ತರ ವಿಭಾಗದ ಯಲಹಂಕದಲ್ಲಿ ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಯುವತಿಯರ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮೃತರು ನೇಪಾಳ ಮೂಲದವರಾಗಿದ್ದು, ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ನೇಪಾಳ ಮೂಲದ ಯುವತಿಯರು
ಯಲಹಂಕದ ಜಕ್ಕೂರು ಸಮೀಪದ ಕೃಷ್ಣ ರೆಸ್ಟೋರೆಂಟ್ ಬಳಿ ಇಂದು ಬೆಳಗ್ಗೆ ಈ ಘಟನೆ ಪತ್ತೆಯಾಗಿದೆ. ಸ್ಥಳೀಯರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಮೃತದೇಹಗಳನ್ನು ಗಮನಿಸಿ ತಕ್ಷಣವೇ ಯಲಹಂಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರನ್ನು ಸಿರ್ಜನಾ (22) ಮತ್ತು ರಿತಾ (23) ಎಂದು ಗುರುತಿಸಿದ್ದಾರೆ. ಇಬ್ಬರೂ ನೇಪಾಳ ಮೂಲದ ಯುವತಿಯರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನು ಓದಿ : ಮಣ್ಣಿನಡಿ ಮುಚ್ಚಿಟ್ಟಿದ್ದ ನವಜಾತ ಶಿಶು ಶವ ಪತ್ತೆ.!

Bengaluru – ಇದು ಆತ್ಮಹತ್ಯೆಯೋ?
ಪೊಲೀಸರು ಸ್ಥಳ ಮಹಜರು ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯ ಹಿಂದಿನ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಬೇರೆ ಯಾವುದೇ ಕಾರಣದಿಂದ ಸಂಭವಿಸಿರುವ ಘಟನೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನು ನೋಡಿ : JDSಗೆ ವಾಪಸ್ ಹೋಗ್ತಾರಾ ವಾಸಣ್ಣ..?! – ಗುಟ್ಟು ಬಿಟ್ಟು ಕೊಡದೇ ಸೈಲೆಂಟ್ ಆದ ಶಾಸಕ




