Bagalkot ಯಲ್ಲಿ 18 ತಿಂಗಳ ಮಗಳು ಸಂಪ್ಗೆ ಬಿದ್ದು ಮೃತಪಟ್ಟ ಬಳಿಕ, ಮಗು ಬದುಕಿಬರಲಿದೆ ಎಂಬ ನಂಬಿಕೆಯಿಂದ ಪೋಷಕರು ಮೃತದೇಹವನ್ನು ಉಪ್ಪಿನ ರಾಶಿಯಲ್ಲಿ ಇಟ್ಟು ಪ್ರಾರ್ಥಿಸಿದ ಮನಕಲಕುವ ಘಟನೆ ನಡೆದಿದೆ.

Bagalkot ನಗರದ ಸೆಕ್ಟರ್ ನಂಬರ್ 38ರಲ್ಲಿ ಮನಕಲಕುವ ಘಟನೆ ನಡೆದಿದೆ. ಆಟವಾಡುತ್ತಿದ್ದ 18 ತಿಂಗಳ ಮಗು ಅಮೀನಾ ಪಕ್ಕದ ಮನೆಯ ಸಂಪ್ಗೆ ಬಿದ್ದು ಮೃತಪಟ್ಟಿದ್ದು, ಮಗಳ ಸಾವಿನ ಆಘಾತದಿಂದ ಕಂಗಾಲಾದ ಪೋಷಕರು ಆಕೆ ಮತ್ತೆ ಬದುಕಿ ಬರಬಹುದು ಎಂಬ ನಂಬಿಕೆಯಲ್ಲಿ ಮೃತದೇಹವನ್ನು ಉಪ್ಪಿನ ರಾಶಿಯ ಮಧ್ಯೆ ಸುಮಾರು ಎರಡು ಗಂಟೆಗಳ ಕಾಲ ಇರಿಸಿದ್ದರು.
MUST READ : ಜಿಯೋಹಾಟ್ಸ್ಟಾರ್ನಲ್ಲಿ ‘ Dhurandhar 2 ’ ಹೊಸ ದಾಖಲೆ..!!
ಮಗುವಿನ ಕಿವಿಯ ಬಳಿ ಮೊಬೈಲ್ನಲ್ಲಿ ಕುರಾನ್ ಪಠಣವನ್ನು ಕೇಳಿಸುತ್ತಾ ಪ್ರಾರ್ಥನೆಯನ್ನೂ ಸಲ್ಲಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ವೈದ್ಯರು ಈ ರೀತಿಯ ಕ್ರಮಗಳಿಂದ ಮಗು ಬದುಕುವುದಿಲ್ಲ ಎಂದು ಕುಟುಂಬದವರಿಗೆ ಮನವರಿಕೆ ಮಾಡಿಕೊಟ್ಟ ಬಳಿಕ, ಪೋಷಕರು ನೋವಿನಲ್ಲೇ ತಮ್ಮ ಕಂದಮ್ಮನ ಅಂತ್ಯಸಂಸ್ಕಾರ ನೆರವೇರಿಸಿದರು. ಈ ಹೃದಯ ವಿದ್ರಾವಕ ಘಟನೆ ಸ್ಥಳೀಯರ ಮನಕಲಕಿದ್ದು, ಕುಟುಂಬದ ದುಃಖ ಎಲ್ಲರ ಕಣ್ಣನ್ನೂ ತೇವಗೊಳಿಸಿದೆ.
MUST WATCH : ತುಮಕೂರಿಗರೇ ಹುಷಾರ್.. ಹುಷಾರ್ – WORK FROM HOME JOBಗೆ ಜಾಯಿನ್ ಆಗೋ ಮುನ್ನ ಈ ಸ್ಟೋರಿ ನೋಡಿ? | TUMAKURU |




