Singer Ananya Bhat Marriage : ಸೂಜಿ ಮಲ್ಲಿಗೆ ಮತ್ತು ಹಲವು ಗೀತೆಗಳಿಗೆ ಧ್ವನಿಯಾದ ಗಾಯಕಿ ಅನನ್ಯ ಭಟ್ ಹಸೆಮಣೆ ಏರಿದ್ದಾರೆ.

ಕೆಜಿಎಫ್, ಕಾಂತಾರ, ಸೋಜುಗದ ಸೂಜಿ, ಮಲ್ಲಿಗೆ ಸೇರಿದಂತೆ ಹಲವಾರು ಚಲನಚಿತ್ರ ಗೀತೆಗಳಿಗೆ ಧ್ವನಿಯಾದ ಗಾಯಕಿ ಅನನ್ಯ ಭಟ್ (Ananya Bhat) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನೆನ್ನೆ ತಿರುಪತಿನಲ್ಲಿ, ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ವಿವಾಹ ನಡೆಯಿತು.
ಪತಿ ಪರಿಚಯ
ಅನನ್ಯ ಭಟ್ ತಮ್ಮ ವೈಯಕ್ತಿಕ ಜೀವನದ ಸಂಗಾತಿಯಾಗಿ ಇಂಟರ್ನ್ಯಾಷನಲ್ ಮ್ಯೂಜಿಷಿಯನ್ ಹಾಗೂ ಡ್ರಮ್ಮರ್ ಮಂಜು ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಂಜು ತಮ್ಮ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದಾರೆ.
ಇದನ್ನು ಓದಿ : Chikkaballapura : ಕೆರೆಯಲ್ಲಿ ಮೀನು ಹಿಡಿಯುವ ವೇಳೆ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು

ಇನ್ನು ಅನನ್ಯ ಅವರ ವಿವಾಹವು ಖ್ಯಾತ ಜ್ಯೋತಿಷ್ಯ ಶಾಸ್ತ್ರದ ಲೇಖಕರು ಪಂಡಿತರು ಡಾ. ಅರುಣ್ ಗುರುಜಿ ಅವರ ನೇತೃತ್ವದಲ್ಲಿ ಧಾರ್ಮಿಕ ಶಾಸ್ತ್ರೀಯ ರೀತಿಯಲ್ಲಿ ನೆರವೇರಿತು.
ಮುವೆಯ ಫೋಟೋಗಳು ವೈರಲ್
ಇನ್ನು ಅನನ್ಯ ಭಟ್ ಅವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ದಂಪತಿಗೆ ಶುಭ ಹಾರೈಸುತ್ತಿದ್ದಾರೆ,

ಇದನ್ನು ನೋಡಿ : Terrorism: ಟೆರರ್ ಡಾಕ್ಟರ್ ಅರೆಸ್ಟ್! ದೇಶಾದ್ಯಂತ ಭೀಕರ ದಾಳಿಗೆ ನಡೆಸಿದ ಸಂಚು ವಿಫಲ; 350 ಕೆಜಿ RDX ಸ್ಫೋಟಕ ಸೀಜ್




