Chikkaballapura Death : ಕೆರೆಯಲ್ಲಿ ಮೀನು ಹಿಡಿಯುವ ವೇಳೆ ವಿದ್ಯುತ್ ಸ್ಪರ್ಶಿಸಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಕೆರೆಯಲ್ಲಿ ಮೀನು ಹಿಡಿಯುವ ವೇಳೆ ವಿದ್ಯುತ್ ಸ್ಪರ್ಶಿಸಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ದಿಗುವನೆಟ್ಟಕುಂಟಪಲ್ಲಿಯಲ್ಲಿ ನಡೆದಿದೆ. ಇನ್ನು ಮೃತ ದುರ್ದೈವಿಯನ್ನು 54 ವರ್ಷದ ಅಶಾಭಿ ಎನ್ನಲಾಗಿದೆ.
ಇದನ್ನು ಓದಿ : Actress Rajini : ಅರುಣ್ ಜೊತೆ ಸದ್ದಿಲ್ಲದೆ ಹಸಮಣೆ ಏರಿದ ‘ಅಮೃತವರ್ಷಿಣಿ’ ರಜಿನಿ
ವಿದ್ಯುತ್ ತಂತಿ ತಗುಲಿ ಸಾವು
ಮೃತ ಅಶಾಭಿ ಮತ್ತು ಆಕೆಯ ಪತಿ ಮಾಬುಸಾಬ್ ಕೆರೆಯಲ್ಲಿ ಮೀನು ಹಿಡಿಯುವ ಕೆಲಸ ಮಾಡುತ್ತಿದ್ದರು. ಹಗಲಿನಲ್ಲಿ ಕೆರೆಗೆ ಬಲೆ ಹಾಖಿ ರಾತ್ರಿಯ ವೇಳೆ ಮೀನು ಹಿಡಿಯುತ್ತಿದ್ದರು. ಎಂದಿನಂತೆ ಪತಿ ಮಾಬುಸಾಬ್ ನೊಂದಿದೆ ಅಶಾಬಿ ಹಗಲಿನಲ್ಲಿ ಕೆರೆಗೆ ಬಲೆಯನ್ನು ಬಿಟ್ಟಿದ್ದು. ರಾತ್ರಿ ತೆಪ್ಪದಲ್ಲಿ ಮೀನು ಹಿಡಿಯಲು ಹೋಗಿದ್ದ ವೇಳೆ ಕಟ್ ಆಗಿದ್ದ ವಿದ್ಯುತ್ ತಂತಿ ತಗುಲಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದರು. ಇತ್ತ ಪತಿ ಮಾಬುಸಾಬ್ ಕೂಡ ವಿದ್ಯುತ್ ತಂತಿ ತಗುಲಿ ಗಾಯವಾಗಿದೆ.
ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ನಿರಂತರ ಕಾರ್ಯಾಚರಣೆ ನಡೆಸಿ ಶವವನ್ನು ಹೊರ ತೆಗೆದಿದ್ದಾರೆ. ಘಟನೆ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ನೋಡಿ : Tirupati: ತಿರುಪತಿ ದೇವಸ್ಥಾನಕ್ಕೆ 65 ಲಕ್ಷ ಕೆಜಿ ತುಪ್ಪ ಪೂರೈಸಿದ್ದ ಡೈರಿ ನಾಪತ್ತೆ; ಸಿಬಿಐ ತನಿಖೆಯಲ್ಲಿ ಬಯಲಾಯ್ತು ಶಾಕಿಂಗ್ ಸೀಕ್ರೆಟ್!




