Fire Incident : ಮೂವತ್ತರಿಂದ ನಲವತ್ತು ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ದೆಹಲಿ-ವಾರಾಣಸಿ ಸ್ಲೀಪರ್ ಬಸ್ ಬೆಂಕಿಗಾಹುತಿಯಾಗಿರುವ ಘಟನೆ ವರದಿಯಾಗಿದೆ.

Fire Incident : ಮೂವತ್ತರಿಂದ ನಲವತ್ತು ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ದೆಹಲಿ-ವಾರಾಣಸಿ ಸ್ಲೀಪರ್ ಬಸ್ (Sleeper Bus) ಬೆಂಕಿಗಾಹುತಿಯಾಗಿರುವ ಘಟನೆ ವರದಿಯಾಗಿದೆ. ಕಾನ್ಪುರದ ಎನ್ಎಚ್ 19ರ ರಾಮದೇವಿ ಅಡ್ಡರಸ್ತೆಯಲ್ಲಿ ಪ್ರಯಾಣಿಕರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಅಡ್ಡಾದಿಡ್ಡಿಯಾಗಿ ಓಡಿದ್ದಾರೆ. ಕೂಡಲೇ ಬೆಂಕಿ ಇಡೀ ಬಸ್ಸನ್ನು ಆವರಿಸಿತ್ತು. ಕೆಲವು ಪ್ರಯಾಣಿಕರು ಗಾಯಗೊಂಡಿದ್ದರೂ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.
ಇದನ್ನು ಓದಿ : ಶ್ರೀಲಂಕದಲ್ಲಿ ಭರ್ಜರಿ ಮಳೆ – 50ಕ್ಕೂ ಹೆಚ್ಚು ಮಂದಿ ಸಾವು
ಬಸ್ ವಾರಾಣಸಿಗೆ ಹೋಗುತ್ತಿತ್ತು, ಮೇಲಿನ ಡೆಕ್ನಲ್ಲಿ ಇರಿಸಿಲಾಗಿದ್ದ ಸಾಮಾನುಗಳಿಂದ ಹಠಾತ್ ಹೊಗೆ ಬೆಂಕಿಗೆ ಕಾರಣವಾಗಿತ್ತು. ಬಸ್ ಚಾಲಕ ಮತ್ತು ನಿರ್ವಾಹಕ ಕೂಡಲೇ ಎಚ್ಚರಿಕೆ ನೀಡಿದ್ದರು. ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಲು ಪ್ರಯತ್ನಿಸಿದರು ಅಷ್ಟರಲ್ಲಾಗಲೇ ಬೆಂಕಿ ಹೊತ್ತಿಕೊಳ್ಳಲು ಶುರುವಾಗಿತ್ತು.
ಬಸ್ಸಿನ ಮೇಲ್ಛಾವಣಿಯ ಮೇಲೆ ತುಂಬಿದ್ದ ಭಾರವಾದ ಲಗೇಜಿನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದಾಗಿ ಪ್ರಯಾಣಿಕರು ಕೂಡಲೇ ಹೊರ ನಡೆದರು. ಕೆಲವರು ಕಿಟಕಿಗಳಿಂದ ಕೆಳಗೆ ಹಾರಿದ್ದಾರೆ. ಕೆಲವರು ಸಿಕ್ಕಿಹಾಕಿಕೊಂಡಿದ್ದರು. ಬೆಂಕಿಯನ್ನು ಕಡಿಮೆ ಮಾಡಲು ನೀರಿನ ಬಾಟಲಿಗಳನ್ನು ಎಸೆದಿದ್ದರು. ಬಸ್ಸಿನಲ್ಲಿ ಅನುಮತಿಸಲಾದ ಪ್ರಮಾಣಕ್ಕಿಂತ ಹೆಚ್ಚಿನ ಸಾಮಾನುಗಳನ್ನು ತುಂಬಿಸಲಾಗಿತ್ತು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ. ಪ್ಲಾಸ್ಟಿಕ್ ಚೀಲಗಳು, ಕಬ್ಬಿಣದ ಪೆಟ್ಟಿಗೆಗಳು ಮತ್ತು ಟ್ರಂಕ್ಗಳು ಸೇರಿದಂತೆ ಹಲವು ವಸ್ತುಗಳಿದ್ದವು ಎನ್ನಲಾಗಿದೆ.
ಇದನ್ನು ನೋಡಿ : ಡಿಸೆಂಬರ್ಗೂ ಮುನ್ನವೇ ಭೀಕರ ಚಳಿ ಶುರು- ವೆದರ್ ಚೇಂಜ್ನಿಂದ ಜನರು ಹೈರಾಣು




