Sri Lanka Flood : ಶ್ರೀಲಂಕಾದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

Sri Lanka Flood : ಶ್ರೀಲಂಕದಾದ್ಯಂತ ಭರ್ಜರಿ ಮಳೆಯಾಗುತ್ತಿದ್ದು, ಪ್ರವಾಹ ಹಾಗೂ ಭೂಕುಸಿತದಿಂದ ಇಲ್ಲಿಯವರೆಗೆ 50ಕ್ಕೂ ಅಧಿಕ ಮಂದಿ ಪ್ರಾಣ ಸಾವನ್ನಪ್ಪಿದ್ದಾರೆ. 600 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿರುವುದರಿಂದ ಶ್ರೀಲಂಕಾ ಶುಕ್ರವಾರ ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳನ್ನು ಕ್ಲೋಸ್ ಮಾಡಿಸಲಾಗಿದೆ ಎನ್ನಲಾಗುತ್ತಿದೆ.
ಇದನ್ನು ಓದಿ : ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಕಸ ಸುಡುತ್ತೀರಾ? ಕಸಕ್ಕೆ ಬೆಂಕಿ ಹಚ್ಚಿದರೆ ಕ್ರಿಮಿನಲ್ ಕೇಸ್, 1 ವರ್ಷ ಜೈಲು ಫಿಕ್ಸ್!
ಭೂ ಕುಸಿತ ಸಂಭವ
ಶ್ರೀಲಂಕಾದಲ್ಲಿ ಕಳೆದ ವಾರವೇ ಹವಾಮಾನ ಸ್ಥಿತಿ ತೀರಾ ಹಾಳಾಗಿತ್ತು, ಗುರುವಾರದಿಂದ ತೀರಾ ಹದಗೆಟ್ಟಿದೆ. ಭಾರಿ ಮಳೆಯಿಂದಾಗಿ ಮನೆಗಳು, ಹೊಲಗಳು, ರಸ್ತೆಗಳು ಜಲಾವೃತವಾಗಿವೆ. ಹಾಗೆಯೇ ಭೂಕುಸಿತಗಳು ಕೂಡ ಸಂಭವಿಸಿವೆ.
25 ಕ್ಕೂ ಹೆಚ್ಚು ಜನ ಸಾವು
ರಾಜಧಾನಿ ಕೊಲಂಬೊದಿಂದ ಪೂರ್ವಕ್ಕೆ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ಬದುಲ್ಲಾ ಮತ್ತು ನುವಾರ ಎಲಿಯಾಗಳ ಮಧ್ಯ ಪರ್ವತ ಚಹಾ ಬೆಳೆಯುವ ಪ್ರದೇಶಗಳಲ್ಲಿ ಗುರುವಾರ ಸಂಭವಿಸಿದ ಭೂಕುಸಿತಗಳಲ್ಲಿ 25 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ರೈಲುಗಳ ಸಂಚಾರವನ್ನು ಸ್ಥಗಿತಗೊಂಡಿದ್ದು, ಜನರು ನಿರಂತರ ಮಳಗೆ ತತ್ತರಗೊಂಡಿದ್ದಾರೆ.
ಇದನ್ನು ನೋಡಿ : ಗುಬ್ಬಿಯಲ್ಲಿ ಬಾಲಕಾರ್ಮಿಕ ಪದ್ಧತಿ ಜೀವಂತ..ಕೋಳಿ ಅಂಡಗಿಯಲ್ಲಿ ಕೆಲಸಕ್ಕಿದ್ದ ಮಕ್ಕಳ ರಕ್ಷಣೆ




