Ayodhya : ಅಯೋಧ್ಯೆಯಲ್ಲಿ ರಾಮಮಂದಿರ ಕಾಮಗಾರಿ ಸಂಪೂರ್ಣಗೊಂಡ ಹಿನ್ನೆಲೆ ಧರ್ಮ ಧ್ವಜಾರೋಹಣ ಕಾರ್ಯ ನೆರವೇರಿದೆ.

ರಾಮಮಂದಿರದ ಕಾಮಗಾರಿಯ ಸಂಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಧರ್ಮಧ್ವಜಾರೋಹಣ ಪೂಜಾ ಕೈಂಕರ್ಯವನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ, ಅಭಿಜಿತ್ ಶುಭ ಮುಹೂರ್ತದಲ್ಲಿ ಕಾಶಿ ಅರ್ಚಕ ಗಣೇಶ್ವರ್ ಶಾಸ್ತ್ರಿಯ ನೇತೃತ್ವದಲ್ಲಿ ಈ ವಿಶೇಷ ಪೂಜಾ ಕಾರ್ಯ ನಡೆಯಿತು.

11 ಅಡಿ ಎತ್ತರದ ಧರ್ಮಧ್ವಜ
ಧರ್ಮಧ್ವಜ 11 ಅಡಿ ಎತ್ತರದಿದ್ದು, ರಾಮಮಂದಿರದ ಗೋಪುರದ ಮೇಲೆ ಸ್ಥಾಪನೆ ಮಾಡಲಾಗಿದೆ. ಧ್ವಜಾರೋಹಣ ಸಮಯವು ಶ್ರೀರಾಮರು ಸೀತಾಮಾತೆಯನ್ನ ವರಿಸಿದ ಮುಹೂರ್ತಕ್ಕೆ ಹೊಂದಿಕೆಯಾಗಿರುವುದು ವಿಶೇಷವಾಗಿದೆ.
ಇದನ್ನು ಓದಿ : Bengaluru|ಯುವಕನ ಮನೆಯಲ್ಲಿ ಸಿಕ್ಕ ವಿವಾಹಿತೆ – ಮಹಿಳೆ ಕುಟುಂಬಸ್ಥರಿಂದ ಥಳಿಸಿ ಹತ್ಯೆ

ಧ್ವಜದ ವಿಶೇಷತೆ
ಧ್ವಜವು ಕೇಸರಿ ಬಣ್ಣದ್ದಾಗಿದ್ದು, 22 ಅಡಿ ಉದ್ದ ಮತ್ತು 11 ಅಡಿ ಅಗಲವಾಗಿದೆ. ಧ್ವಜಸ್ತಂಭವು 42 ಅಡಿ ಎತ್ತರದಿದ್ದು, ಇದನ್ನು ಗೋಪುರದ 161 ಅಡಿ ಎತ್ತರದಲ್ಲಿ ಹಾರಿಸಲಾಗುವುದು. ಧ್ವಜದ ಮೇಲೆ ಸೂರ್ಯ, ಓಂ ಮತ್ತು ಕೋವಿದಾರ್ ಮರ ಎಂಬ ಮೂರು ಚಿಹ್ನೆಗಳು ಗುರುತಿಸಲಾಗಿದೆ. ಈ ಧ್ವಜ ಸೂರ್ಯ ದೇವರನ್ನು ಸಂಕೇತಿಸುತ್ತದೆ ಎಂದು ನಂಬಲಾಗುತ್ತದೆ.

ತ್ಯಾಗ, ಶೌರ್ಯ, ಭಕ್ತಿಯ ಸಂಕೇತ
ಸಂಪ್ರದಾಯದ ಪ್ರಕಾರ, ಕೇಸರಿ ಬಣ್ಣ ತ್ಯಾಗ, ಶೌರ್ಯ, ಭಕ್ತಿ ಮತ್ತು ಸಮರ್ಪಣೆಯ ಸಂಕೇತವಾಗಿದೆ. ರಘುವಂಶ ರಾಜವಂಶದಲ್ಲಿಯೂ ಈ ಬಣ್ಣವು ವಿಶೇಷ ಸ್ಥಾನ ಪಡೆದಿದ್ದು, ಜ್ಞಾನ, ಶೌರ್ಯ, ಸಮರ್ಪಣೆ ಮತ್ತು ಸತ್ಯದ ವಿಜಯವನ್ನು ಪ್ರತಿನಿಧಿಸುತ್ತದೆ.

ಇದನ್ನು ನೋಡಿ : ಸರ್ವ ದಾರ್ಶನಿಕರ ಜಯಂತಿಗೆ ಕೈ ವಿರೋಧ – ಎಂಎಲ್ ಎ ವಿರುದ್ಧ ಆಕ್ರೋಶದ ಜ್ವಾಲೆ




