Murder : ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಯುವಕನನ್ನು ಮಹಿಳೆಯ ಕುಟುಂಬಸ್ಥರು ಹತ್ಯೆ ಮಾಡಿದ ಘಟನೆ ಯಶವಂತಪುರದಲ್ಲಿ ನಡೆದಿದೆ.

Murder : ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಯುವಕನನ್ನು ಮಹಿಳೆಯ ಕುಟುಂಬಸ್ಥರು ಹತ್ಯೆ ಮಾಡಿದ ಘಟನೆ ಯಶವಂತಪುರದ (Yeswanthpur) ಮುತ್ಯಾಲಮ್ಮ ನಗರದಲ್ಲಿ ನಡೆದಿದೆ. ನರಸಿಂಹರಾಜು (32) ಕೊಲೆಯಾದ ಯುವಕ.
ನರಸಿಂಹರಾಜು ಕೊಲೆಯಾದ ಯುವಕ
ನರಸಿಂಹರಾಜು (32) ಕೊಲೆಯಾದ ಯುವಕ. ಈತ ಮದುವೆಯಾಗಿದ್ದ ಮಹಿಳೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಆ ಮಹಿಳೆಯೂ ಆಗಾಗ ಯುವಕನ ಮನೆಗೆ ಬರುತ್ತಿದ್ದಳು. ಶನಿವಾರ (ನ.22) ಆ ಮಹಿಳೆ ನರಸಿಂಹರಾಜು ಮನೆಯಲ್ಲಿ ಇದ್ದರು. ಇದನ್ನು ತಿಳಿದ ಮಹಿಳೆಯ ಮನೆಯವರು ಬಂದಿದ್ದಾರೆ.
ಇದನ್ನು ಓದಿ : Bengaluru|ಜಯನಗರದ GBA ಕಾಂಪ್ಲೆಕ್ಸ್’ನಲ್ಲಿ ಅಗ್ನಿ ಅವಘಡ
ನಾಲ್ಕೈದು ಜನ ಮನಸ್ಸೋ ಇಚ್ಚೆ ಹಲ್ಲೆ
ಮನೆಯೊಳಗೆ ಇದ್ದ ನರಸಿಂಹರಾಜುವನ್ನು ಆಕ್ರೋಶದಿಂದ ಹೊರಗೆ ಎಳೆದು ತಂದ ಆರೋಪಿಗಳು ರಸ್ತೆ ಮಧ್ಯದಲ್ಲಿ ನಾಲ್ಕು–ಐದು ಮಂದಿ ಸೇರಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬಿಡಿಸಲು ಯತ್ನಿಸಿದ ನರಸಿಂಹರಾಜುವಿನ ತಾಯಿಯ ಮೇಲೂ ಹಲ್ಲೆ ನಡೆದಿರುವುದು ತಿಳಿದು ಬಂದಿದೆ.
ಚಿಕಿತ್ಸೆ ಸಮಯದಲ್ಲಿ ಸಾವು
ಗಂಭೀರವಾಗಿ ಗಾಯಗೊಂಡ ನರಸಿಂಹರಾಜುವನ್ನು ತಕ್ಷಣ ಕೆ.ಸಿ. ಜನರಲ್ ಆಸ್ಪತ್ರೆಗೆ ಸೇರಿಸಲಾಗಿ, ಚಿಕಿತ್ಸೆಯ ಸಮಯದಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಯಶವಂತಪುರ ಠಾಣೆಯಲ್ಲಿ ದೂರು ದಾಖಲು
ಇನ್ನು ಈ ಘಟನೆಯ ಕುರಿತು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಆರೋಪಿಗಳು ಇನ್ನೂ ಬಂಧನಕ್ಕೊಳಗಾಗಿಲ್ಲವೆಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ತನಿಖೆ ಮುಂದುವರಿದಿದೆ.
ಇದನ್ನು ನೋಡಿ : ಚಿಕ್ಕನಾಯಕನಹಳ್ಳಿಯಲ್ಲಿ ನಿಲ್ಲದ ನಕಲಿ ಸಹಿ ಕಿಚ್ಚು – KŖS ವಿವಿಧ ಸಂಘಟನೆಗಳಿಂದ ಆಕ್ರೋಶ




