Gujarat : ಸೀರೆ ವಿಚಾರಕ್ಕೆ ಜಗಳವಾಗಿ ವಧುವನ್ನು ವರ ಹತ್ಯೆ ಮಾಡಿರುವ ಘಟನೆ ಗುಜರಾತ್ನ ಭಾವನಗರದಲ್ಲಿ ನಡೆದಿದೆ. ಜೋಡಿಯ ಮದುವೆಗೆ ಕೇವಲ ಒಂದು ಗಂಟೆ ಇದ್ದಾಗಲೇ ಕೊಲೆಯಾಗಿದೆ.

Gujarat : ಸೀರೆ ಮತ್ತು ಹಣದ ವಿಚಾರದಲ್ಲಿ ಜಗಳವಾಗಿ, ಮದುವೆಗೆ ಕೇವಲ ಒಂದು ಗಂಟೆ ಮೊದಲು ವರನಿಂದ ವಧುವಿನ ಹತ್ಯೆ ನಡೆದ ಘಟನೆ ಗುಜರಾತಿನ ಭಾವನಗರದಲ್ಲಿ ಬೆಳಕಿಗೆ ಬಂದಿದೆ. ಹತ್ಯೆಯಾದವರು ಸೋನಿ ಹಿಮ್ಮತ್ ರಾಥೋಡ್ ಎಂಬ ಮಹಿಳೆ ಮೃತ ದುರ್ದೈವಿಯಾಗಿದ್ದಾರೆ.
ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದ ಜೋಡಿಗಳು
ಸಜನ್ ಬರಯ್ಯ ಎಂಬಾತ ಈ ಕೃತ್ಯ ಎಸಗಿದ್ದಾನೆ. ಇನ್ನು ಮೃತ ಮಹಿಳೆ ಹಾಗೂ ಆರೋಪಿಯು ಕಳೆದ ಒಂದೂವರೆ ವರ್ಷದಿಂದ ಲಿವಿಂಗ್ ರಿಲೇಶನ್ಶಿಪ್ನಲ್ಲಿ ಇದ್ದರು ಎನ್ನಲಾಗಿದೆ. ನಂತರ ಇಬ್ಬರು ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಲು ನಿರ್ಧರಿಸಿದ್ದು, ನಿಶ್ಚಿತಾರ್ಥ ಕೂಡ ನೆರವೇರಲಾಗಿತ್ತು.
ಇದನ್ನೂ ಓದಿ : ಬಿಡದಿ ಬಳಿ ಸೆಕ್ಯುರಿಟಿ ಗಾರ್ಡ್ ಕೊಲೆ – ಹಳೆ ದ್ವೇಷಕ್ಕೆ ನಡೆದಿರುವ ಶಂಕೆ
ಸೀರೆ ಮತ್ತು ಹಣದ ವಿಚಾರವಾಗಿ ಹತ್ಯೆ
ಇನ್ನೇನು ಇಬ್ಬರೂ ಹಸೆಮಣೆ ಏರುವ ನಿರ್ಧಾರ ಮಾಡಿದ್ದರು. ಆದರೆ ವರ ಆಕೆಯನ್ನ ಕ್ಷುಲ್ಲಕ ವಿಚಾರಕ್ಕೆ ಹತ್ಯೆ ಮಾಡಿದ್ದಾನೆ. ಪ್ರಭುದಾಸ್ ಸರೋವರದ ಟೆಕ್ರಿ ಚೌಕ್ ಬಳಿ ಇಬ್ಬರ ನಡುವೆ ಸೀರೆ ಮತ್ತು ಹಣದ ವಿಚಾರದಲ್ಲಿ ಜಗಳ ನಡೆದಿದ್ದು, ಕೋಪದ ಭರದಲ್ಲಿ, ಸಜನ್ ವಧುವಿನ ಮೇಲೆ ಕಬ್ಬಿಣದ ಪೈಪ್ ಹೊಡೆದು ಬಳಿಕ ಅವಳ ತಲೆಯನ್ನು ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ.
ಆರೋಪಿ ಪರಾರಿ
ಕೊಲೆ ನಂತರ ಆರೋಪಿ ಮನೆಯನ್ನು ಧ್ವಂಸ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಮದುವೆಗೆ ಮುನ್ನ ಆರೋಪಿ ನೆರೆಹೊರೆಯವರೊಂದಿಗೆ ಜಗಳ ಮಾಡಿಕೊಂಡಿದ್ದ ಮತ್ತು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈಗ ಕೊಲೆ ಪ್ರಕರಣದಲ್ಲಿ ಆತನ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
MUST WATCH: ಕೊರಟಗೆರೆಯಲ್ಲಿ ಅತ್ಯಂತ ಭಯಾನಕ ಕೊಲೆ-ಕೋಳಿ ಕತ್ತರಿಸೋ ಹಾಗೆ ಕತ್ತರಿಸಿ ಕಸ ಎಸೆಯೋ ಹಾಗೆ ಎಸೆದ್ರು




