Ramanagara : ಮಾರಕಾಸ್ತ್ರದಿಂದ ಕೊಚ್ಚಿ ಯುವಕನ (Youth) ಬರ್ಬರ ಹತ್ಯೆ ಮಾಡಿರುವ ಘಟನೆ ಬಿಡದಿ (Bidadi) ಬಳಿಯ ಕದಂಬ ಹೋಟೆಲ್ನಲ್ಲಿ (Kadamba Hotel) ತಡರಾತ್ರಿ ನಡೆದಿದೆ.

Ramanagara: ಬಿಡದಿ ಸಮೀಪದ ಕದಂಬ ಹೋಟೆಲ್ನಲ್ಲಿ ತಡರಾತ್ರಿ ನಡೆದ ಘಟನೆದಲ್ಲಿ ಯುವಕನೊಬ್ಬನನ್ನು ಮಾರಕಾಸ್ತ್ರದಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ. ಚನ್ನಪಟ್ಟಣ ತಾಲೂಕಿನ ಕೊಂಡಾಪುರ ಗ್ರಾಮದ 25 ವರ್ಷದ ನಿಶಾಂತ್ ಮೃತಪಟ್ಟಿದ್ದಾರೆ.
ಕದಂಬ ಹೋಟೆಲ್ನಲ್ಲಿ ಯುವಕನ ಕೊಲೆ
ನಿಶಾಂತ್ ಕಳೆದ ಎರಡೂವರೆ ತಿಂಗಳಿನಿಂದ ಕದಂಬ ಹೋಟೆಲ್ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ತಡರಾತ್ರಿ ಹೋಟೆಲ್ನಲ್ಲಿ ಮಲಗಿದ್ದ ವೇಳೆ, ದುಷ್ಕರ್ಮಿಗಳು ಅವರ ಕಿವಿ ಭಾಗಕ್ಕೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: Ramanagara |ಹೋಮ್ ಸ್ಟೇಯಲ್ಲಿ ರೇವ್ ಪಾರ್ಟಿ ಆರೋಪ – 130ಕ್ಕೂ ಹೆಚ್ಚು ಜನರ ಬಂಧನ
ದುಷ್ಕರ್ಮಿಗಳಿಂದ ಸಿಸಿಟಿವಿ ಡಿವಿಆರ್ ಕಳವು
ನಂತರ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಅನ್ನು ಕೂಡ ಕಳವು ಮಾಡಲಾಗಿದೆ. ಇದರಿಂದ ಇದು ಪೂರ್ವನಿಯೋಜಿತ ದಾಳಿ ಎನ್ನುವ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ.
ಬೆರಳಚ್ಚು ತಜ್ಞ–ಶ್ವಾನ ದಳದಿಂದ ಪರಿಶೀಲನೆ
ಘಟನಾ ಸ್ಥಳಕ್ಕೆ ಬಿಡದಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಸಹ ಸಹಾಯ ಪಡೆದಿದ್ದಾರೆ. ನಿಶಾಂತ್ ವಿರುದ್ಧ ಈ ಹಿಂದೆ ಬೆಂಗಳೂರು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದುದೂ ಬೆಳಕಿಗೆ ಬಂದಿದೆ.
ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸರು
ಪ್ರಕರಣದ ತನಿಖೆ ಕೈಗೊಂಡಿರುವ ಬಿಡದಿ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
MUST WATCH: ದಲಿತ ವ್ಯಕ್ತಿಯನ್ನ ಅಟ್ಟಾಡಿಸಿ ಕೊಂದ್ರಾ..? ಕೊಲೆ ಮಾಡಿ ಕಥೆ ಕಟ್ಟಿದ್ದು ಯಾಕೆ..?




