Ramanagara Rave Party : ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹೋಮ್ ಸ್ಟೇ ಒಂದರಲ್ಲಿ ರೇವ್ ಪಾರ್ಟಿ ನಡೆದ ಆರೋಪ ಕೇಳಿಬಂದಿದೆ.

ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಒಂದು ಹೋಮ್ ಸ್ಟೇಯಲ್ಲಿ ರೇವ್ ಪಾರ್ಟಿ ನಡೆದಿರುವ ಆರೋಪ ಕೇಳಿಬಂದಿದೆ. ಪಾರ್ಟಿ ನಡೆಯುತ್ತಿದ್ದಾಗಲೇ ಕಗ್ಗಲೀಪುರ ಪೊಲೀಸರು ಮಧ್ಯರಾತ್ರಿ 3 ಗಂಟೆ ಸುಮಾರಿಗೆ ದಾಳಿ ನಡೆಸಿದ್ದಾರೆ.
130ಕ್ಕೂ ಹೆಚ್ಚುಬಂಧಿತರು
ದಾಳಿಯ ವೇಳೆ ಸ್ಥಳದಲ್ಲಿದ್ದ 130ಕ್ಕೂ ಹೆಚ್ಚು ಯುವಕರು ಮತ್ತು ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಬೆಂಗಳೂರಿನ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ : ಮೈಸೂರಿನಲ್ಲಿ ಮತ್ತೆ ಹುಲಿ ದಾಳಿಗೆ ಮತ್ತೊಬ್ಬ ರೈತ ಬಲಿ..!

ಮಾದಕ ವಸ್ತುಗಳ ಬಳಕೆ ಆರೋಪ
ಇನ್ನು ಈ ರೇವ್ ಪಾರ್ಟಿಯ ವೇಳೆ ಮಾದಕ ವಸ್ತುಗಳ (Drugs) ಬಳಕೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಬಂಧಿತರ ಮೆಡಿಕಲ್ ಪರೀಕ್ಷೆಯನ್ನು ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ರೇವ್ ಪಾರ್ಟಿ ನಡೆದ ಹೋಮ್ ಸ್ಟೇ ಸುಹಾಸ್ ಗೌಡ ಎಂಬುವವರ ಸ್ವತ್ತಾಗಿದ್ದು, ಅವರ ವಿರುದ್ಧವೂ ತನಿಖೆ ಪ್ರಾರಂಭವಾಗಿದೆ.
ಮುಂದಿನ ಕ್ರಮ
ಪೊಲೀಸರು ಪಾರ್ಟಿಯಲ್ಲಿ ಬಳಸಲಾದ ಮಾದಕ ವಸ್ತುಗಳು, ಡಿಜೆ ಉಪಕರಣಗಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಈ ಕುರಿತು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಇದನ್ನು ನೋಡಿ : ಹೋಮ್ ಸ್ಟೇಯಲ್ಲಿ ರೇವ್ ಪಾರ್ಟಿ ಆರೋಪ




