Kalaburagi: ಒಂದು ತಿಂಗಳಿನಿಂದ ದೇಶದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಚಿತ್ತಾಪುರ (Chittapur) ಆರ್ಎಸ್ಎಸ್ ಪಥಸಂಚಲನ (RSS Route March) ಕೊನೆಗೂ ಇಂದು ಯಶಸ್ವಿಯಾಗಿ ನಡೆದಿದೆ.

Kalaburagi : ಒಂದು ತಿಂಗಳಿನಿಂದ ದೇಶಾದ್ಯಾಂತ ಚರ್ಚೆಗೆ ಕಾರಣವಾಗಿದ್ದ ಚಿತ್ತಾಪುರ (Chittapur) ಆರ್ಎಸ್ಎಸ್ ಪಥಸಂಚಲನ (RSS Route March) ಕೊನೆಗೂ ಇಂದು ಯಶಸ್ವಿಯಾಗಿ ನಡೆದಿದ್ದು, ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತವರಿನಲ್ಲಿ ಭಗವಾ ಧ್ವಜ ಹಾರಿಸಿ ಆರ್ಎಸ್ಎಸ್ ಕಾರ್ಯಕರ್ತರು ಹೆಜ್ಜೆ ಹಾಕಿದರು.
ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನ ಯಶಸ್ವಿ
ಪಥಸಂಚಲನವು ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಿಂದ ಪ್ರಾರಂಭವಾಗಿ, ಅಂಬೇಡ್ಕರ್ ಸರ್ಕಲ್, ಬಸವ ಆಸ್ಪತ್ರೆ, ಎಚ್ಡಿಎಫ್ಸಿ ಬ್ಯಾಂಕ್ ರಸ್ತೆ, ಬಸವೇಶ್ವರ ಸರ್ಕಲ್ ಮೂಲಕ ಬಜಾಜ್ ಕಲ್ಯಾಣ ಮಂಟಪದಲ್ಲಿ ಮುಕ್ತಾಯವಾಯಿತು.
ಇದನ್ನೂ ಓದಿ : ಆರ್ಎಸ್ಎಸ್ ನಿಷೇಧಕ್ಕೆ ಖರ್ಗೆ ಆಗ್ರಹ – ರಾಜಕೀಯ ವಲಯದಲ್ಲಿ ಸಂಚಲನ..!
ಹೈಕೋರ್ಟ್ ಆದೇಶದಂತೆ ಪಥಸಂಚಲನದಲ್ಲಿ ಭಾಗವಹಿಸಿದ ಗಣವೇಶಧಾರಿಗಳು
ಹೈಕೋರ್ಟ್ ಆದೇಶದಂತೆ 300 ಗಣವೇಶಧಾರಿಗಳು ಮತ್ತು 50 ಬ್ಯಾಂಡ್ ವಾದಕರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
100ನೇ ವರ್ಷದ ಸಂಭ್ರಮದಲ್ಲಿ ಭರ್ಜರಿ ಸ್ವಾಗತ
ಆರ್ಎಸ್ಎಸ್ ನ 100ನೇ ವರ್ಷದ ಸಂಭ್ರಮಾಚರಣೆಯ ಭಾಗವಾಗಿ ನಡೆದ ಈ ಪಥಸಂಚಲನದಲ್ಲಿ ಮಹಿಳೆಯರು, ಮಕ್ಕಳು, ಮತ್ತು ಸಾರ್ವಜನಿಕರು ಪುಷ್ಪಾರ್ಚನೆ ಮಾಡಿ ಗಣವೇಶಧಾರಿಗಳನ್ನು ಸ್ವಾಗತಿಸಿದರು.
ಹೂವಿನ ಮಳೆ ಸುರಿಸಿ ಸ್ಮರಣೀಯ
ರಸ್ತೆಯ ಎರಡೂ ಬದಿಯಲ್ಲಿ ನಿಂತಿದ್ದ ಜನರು ಹೂವಿನ ಮಳೆ ಸುರಿಸಿ, ಕಾರ್ಯಕ್ರಮವನ್ನು ಸ್ಮರಣೀಯವನ್ನಾಗಿಸಿಕೊಂಡರು.
MUST WATCH: ರಾಜ್ಯದಲ್ಲಿRSS ಬ್ಯಾನ್ ಆಗುತ್ತಾ? – ಸರ್ಕಾರದ ಆದೇಶ ಯಾರಿಗೆ ಅನ್ವಯ |




