POLITICAL NEWS: ದೇಶದಿಂದ RSS ನಿಷೇಧಿಸಬೇಕು, ಪ್ರಿಯಾಂಕ್ಗಿಂತ ಒಂದು ಹೆಜ್ಜೆ ಮುಂದಹೋದ ಮಲ್ಲಿಕಾರ್ಜುನ ಖರ್ಗೆ, ದೇಶದಲ್ಲಿನ ಕಾನೂನು ಸುವ್ಯವಸ್ಥೆ ಹದೆಗೆಡಲು ಆರ್ಎಸ್ಎಸ್ ಕಾರಣವಾಗಿದೆ. ನನ್ನ ಪ್ರಕಾರ ಆರ್ಎಸ್ಎಸ್ ನಿಷೇಧಿಸಬೇಕು ಎಂದಿದ್ದಾರೆ.

POLITICAL NEWS: ಕರ್ನಾಟಕದಲ್ಲಿ ಆರ್ಎಸ್ಎಸ್ ಚಟುವಟಿಕೆಗಳ ಕುರಿತು ಪ್ರಿಯಾಂಕ್ ಖರ್ಗೆಯ ಪತ್ರದಿಂದ ಆರಂಭವಾದ ವಿವಾದ ಈಗ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರಿ ಮೈದಾನಗಳಲ್ಲಿ ಆರ್ಎಸ್ಎಸ್ ಸೇರಿದಂತೆ ಯಾವುದೇ ಖಾಸಗಿ ಸಂಘಟನೆಗಳಿಗೆ ಚಟುವಟಿಕೆ ನಡೆಸಲು ಅವಕಾಶ ನೀಡಬಾರದು ಎಂಬ ಸಲಹೆ ಪತ್ರ ಬರೆದಿದ್ದರು.
ಈ ಪತ್ರದ ಬೆನ್ನಲ್ಲೇ ಕರ್ನಾಟಕ ಸರ್ಕಾರ, ಸರ್ಕಾರಿ ಸ್ಥಳಗಳು ಮತ್ತು ಮೈದಾನಗಳಲ್ಲಿ ಎಲ್ಲ ಖಾಸಗಿ ಸಂಘ ಸಂಸ್ಥೆಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಆದೇಶ ಹೊರಡಿಸಿತ್ತು. ಆದರೆ ಧಾರವಾಡದ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ, ಈ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ.
ಈ ವಾದ–ವಿವಾದದ ನಡುವೆ ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೊಸ ಹೇಳಿಕೆ ಮತ್ತಷ್ಟು ರಾಜಕೀಯ ಕಾವು ತಂದಿದೆ. ಸರ್ದಾರ್ ಪಟೇಲ್ 150ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಆರ್ಎಸ್ಎಸ್ ಹಾಗೂ ಬಿಜೆಪಿ ದೇಶದ ಕಾನೂನು ಸುವ್ಯವಸ್ಥೆ ಹಾಳುಮಾಡಿವೆ. ಹೀಗಾಗಿ ಆರ್ಎಸ್ಎಸ್ ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು,” ಎಂದು ಹೇಳಿದ್ದಾರೆ.
ಇದನ್ನೂ ಓದಿ: Sandalwood News: ಹೈದರಾಬಾದ್ ಶಿಫ್ಟ್ ಆದ ಶ್ರೀಲೀಲಾ, ಕನ್ನಡ ಚಿತ್ರಗಳಿಂದ ದೂರವಾಗ್ತಾರಾ?
ಅಲ್ದೇ “ಪ್ರಧಾನಿ ನರೇಂದ್ರ ಮೋದಿ ಸರ್ದಾರ್ ಪಟೇಲ್ರನ್ನು ನಿಜಕ್ಕೂ ಗೌರವಿಸುತ್ತಿದ್ದರೆ, ಮೊದಲು ಆರ್ಎಸ್ಎಸ್ನ್ನು ನಿಷೇಧಿಸಲಿ” ಎಂದು ಸವಾಲು ಹಾಕಿದ್ದಾರೆ. ಈ ಹೇಳಿಕೆಗೆ ಕಾಂಗ್ರೆಸ್ ಬೆಂಬಲಿಗರಿಂದ ಮೆಚ್ಚುಗೆ ವ್ಯಕ್ತವಾದರೆ, ಬಿಜೆಪಿ ಹಾಗೂ ಆರ್ಎಸ್ಎಸ್ ಪರ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕರ್ನಾಟಕದಲ್ಲಿ ಪ್ರಾರಂಭವಾದ ಈ ಆರ್ಎಸ್ಎಸ್ ವಿವಾದ ಈಗ ದೇಶದ ಮಟ್ಟದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.
MUST WATCH: ಗಬ್ಬೆದ್ದು ನಾರುತ್ತಿದೆ BH ROAD ಕೈಗಾರಿಕಾ ಪ್ರದೇಶ – ಸುತ್ತಮುತ್ತಲಿನ ಜನ ಕಂಗೆಟ್ಟಿದ್ದಾರೆ! | TUMKUR NEWS




