SANDALWOOD NEWS: ಕಿಸ್ ಕನ್ನಡ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ (Sandalwood) ನಾಯಕಿಯಾಗಿ ಎಂಟ್ರಿ ಕೊಟ್ಟ ಶ್ರೀಲೀಲಾ (Sreeleela) ಇದೀಗ ಕನ್ನಡದಲ್ಲಿ ಮರೀಚಿಕೆಯಾಗಿದ್ದಾರೆ. ಒಂದೇ ಒಂದು ಕನ್ನಡ ಚಿತ್ರವನ್ನ ಶ್ರೀಲೀಲಾ ಒಪ್ಪಿಕೊಳ್ತಿಲ್ಲ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.

SANDALWOOD NEWS: ‘ಕಿಸ್’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ನಾಯಕಿಯಾಗಿ ಭರ್ಜರಿ ಎಂಟ್ರಿ ಕೊಟ್ಟ ಶ್ರೀಲೀಲಾ ಇದೀಗ ಕನ್ನಡ ಚಿತ್ರರಂಗದಿಂದ ದೂರವಾಗುತ್ತಿದ್ದಾರಾ ಎಂಬ ಚರ್ಚೆ ಗಾಂಧಿನಗರದಲ್ಲಿ ಶುರುವಾಗಿದೆ. ಇತ್ತೀಚೆಗೆ ಅವರು ಯಾವುದೇ ಕನ್ನಡ ಚಿತ್ರವನ್ನೂ ಒಪ್ಪಿಕೊಂಡಿಲ್ಲ ಎಂಬ ಸುದ್ದಿ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.
ಕುಟುಂಬ ಸಮೇತ ಹೈದರಾಬಾದ್ಗೆ ಶಿಫ್ಟ್ ಆದ ಶ್ರೀಲೀಲಾ, ಈಗ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅವರು ‘ಆಶಿಕಿ 3’ ಸಿನಿಮಾದಲ್ಲಿ ಅಭಿನಯಿಸಿದ್ದು, ಜೊತೆಗೆ ಪವನ್ ಕಲ್ಯಾಣ್ ಜೊತೆ ‘ಉಸ್ತಾದ್ ಭಗತ್ ಸಿಂಗ್’ ಹಾಗೂ ರವಿತೇಜ ಜೊತೆ ‘ಮಾಸ್ ಜಾತ್ರಾ’ ಚಿತ್ರಗಳೂ ಬಿಡುಗಡೆಯ ನಿರೀಕ್ಷೆಯಲ್ಲಿವೆ.
ಇದನ್ನೂ ಓದಿ :BENGALURU : ಬೆಂಗಳೂರು ಅಭಿವೃದ್ಧಿಗೆ 2,296 ಕೋಟಿ ರೂ. ಅನುದಾನ-ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ..!
ಇನ್ನು ಶ್ರೀಲೀಲಾ ಕನ್ನಡ ಚಿತ್ರಗಳಿಗಿಂತ ಬಹುಭಾಷಾ ಅಥವಾ ಹೈಬಜೆಟ್ ಪ್ರಾಜೆಕ್ಟ್ಗಳನ್ನೇ ಆಯ್ಕೆ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಚಿಕ್ಕಪುಟ್ಟ ನಿರ್ಮಾಪಕರು ನೀಡುವ ಸಂಭಾವನೆಗೆ ಶ್ರೀಲೀಲಾರನ್ನು ಅಫರ್ಡ್ ಮಾಡುವುದು ಕಷ್ಟವಾಗಿದ್ದು, ಬಿ-ಗ್ರೇಡ್ ಹೀರೋಗಳ ಜೊತೆ ನಟಿಸಲು ಅವರು ಆಸಕ್ತಿ ತೋರದಿರುವುದಾಗಿ ಮೂಲಗಳು ತಿಳಿಸಿವೆ.

ಕನ್ನಡ ಚಿತ್ರರಂಗದ ಅಭಿಮಾನಿಗಳು, “ಶ್ರೀಲೀಲಾ ರಶ್ಮಿಕಾ ಹಾದಿಯಲ್ಲೇ ನಡೆಯುತ್ತಿದ್ದಾರೆ. ಕನ್ನಡ ಚಿತ್ರಗಳಲ್ಲಿ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
MUST WATCH: ಜಿಲ್ಲಾಡಳಿತದ ವಿರುದ್ಧ V SOMANNA ಗರಂ – PEN AND PAPER ಇದೆ ಬುದ್ದಿ ಕಲಿಸುತ್ತೇನೆ | DC TUMAKURU




