Haveri Suicide : ಯುವಕನೋರ್ವ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಕ್ಕೆ ನೊಂದು ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿಯಲ್ಲಿ ನಡೆದಿದೆ.

ಯುವಕನೋರ್ವ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಕ್ಕೆ ನೊಂದು ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಶಂಕ್ರಿಪುರದಲ್ಲಿ ನಡೆದಿದೆ. ಮೃತ ಯುವತಿಯನ್ನು 25 ವರ್ಷದ ಸಿಂಧು ಪರಣ್ಣನವರ್ ಎಂದು ಗುರುತಿಸಲಾಗಿದೆ.
ಯುವಕನ ವಿರುದ್ಧ ಆರೋಪ
ಸಿಂಧು ಮತ್ತು ಶರತ್ ನೀಲಪ್ಪನವರ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿಯನ್ನು ಮದುವೆಯಾಗುವುದಾಗಿ ಶರತ್ ಭರವಸೆ ನೀಡಿದ್ದು, ಆದರೆ ಈಗ ಮದುವೆಯಾಗಲು ನಿರಾಕರಿಸಿದ್ದ. ಮದುವೆಗೆ ನಿರಾಕರಿಸಿದ ಕಾರಣದಿಂದ ಯುವತಿ ನಿರಾಶೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಎಂದು ಯುವತಿಯ ಪೋಷಕರು ತಿಳಿಸಿದ್ದಾರೆ.
ಇದನ್ನು ಓದಿ : Kantara 1 : ‘ಕಾಂತಾರ ಚಾಪ್ಟರ್ 1’ ತಂಡದಿಂದ ಸಕ್ಸಸ್ ಸೆಲೆಬ್ರೇಷನ್

ಅದಕ್ಕಾಗಿ ನ್ಯಾಯಕ್ಕಾಗಿ ಕಳೆದ ಕೆಲ ದಿನಗಳ ಹಿಂದೆ ಪೊಲೀಸ್ ಠಾಣೆಗೆ ತೆರಳಿದ್ದೆವು. ಆಗ ರಾಜಿ ಪಂಚಾಯತಿ ಆಗಿತ್ತು. ಅದರಂತೆ ಯುವಕ ಮತ್ತು ಆತನ ಮನೆಯವರು ನಡೆದುಕೊಳ್ಳದೆ ವಂಚಿಸಿದ್ದಾರೆ. ಇದರಿಂದ ನೊಂದು ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವತಿಯ ಪೋಷಕರು ಕುಟುಂಬಸ್ಥರು ಆರೋಪಿಸಿದ್ದಾರೆ.
ಯುವಕನ ಮನೆ ಮುಂದೆ ಯುವತಿಯ ಶವವಿಟ್ಟು ಪ್ರತಿಭಟನೆ
ನಮ್ಮ ಮಗಳ ಸಾವಿಗೆ ನ್ಯಾಯ ಬೇಕು ಎಂದು ಯುವಕನ ಮನೆ ಮುಂದೆ ಯುವತಿಯ ಶವ ಇಟ್ಟು ಕುಟುಂಬಸ್ಥರು ಪ್ರತಿಭಟಿಸಿದರು. ಈ ವೇಳೆ ಮನೆಗೆ ಬೀಗ ಹಾಕಿ ಯುವಕನ ಮನೆಯವರು ಪರಾರಿಯಾಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದರು.

ಇದನ್ನು ನೋಡಿ : ಬಿಜೆಪಿಗರು ಮತಗಳ್ಳತನದಲ್ಲಿ ನಿಸ್ಸೀಮರು, ಇದರ ವಿರುದ್ಧ 1 ಕೋಟಿಗೂ ಅಧಿಕ ಸಹಿ ಸಂಗ್ರಹ: ಸಿಎಂ ಸಿದ್ದರಾಮಯ್ಯ




