Kantara 1 Success Celebration : ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಯಶಸ್ಸಿನ ಸೆಲೆಬ್ರೇಷನ್ನ ತಂಡ ಮಾಡಿದೆ. ಈ ಸಂದರ್ಭದ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ‘ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿದೆ.

Kantara 1 Success Celebration : ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಯಿತು. ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡು, ಒಟ್ಟಾರೆ ಕಲೆಕ್ಷನ್ 900 ಕೋಟಿ ರೂಪಾಯಿಗೂ ಹೆಚ್ಚು ಸಂಪಾದಿಸಿದೆ.
ಸಕ್ಸಸ್ ಸೆಲೆಬ್ರೇಷನ್
ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ನಿರ್ಮಾಪಕರು ಮತ್ತು ತಂಡ ಸಕ್ಸಸ್ ಸೆಲೆಬ್ರೇಷನ್ ನಡೆಸಿದೆ. ಹೊಂಬಾಳೆ ಫಿಲ್ಮ್ಸ್ ಈ ಕಾರ್ಯಕ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ. ಕೇಕ್ ಕತ್ತರಿಸಿ ತಂಡ ಸಂಭ್ರಮವನ್ನು ಹಂಚಿಕೊಂಡಿದೆ.
ಇದನ್ನು ಓದಿ : Weather Report : ರಾಜ್ಯದಲ್ಲಿ ಇಂದು ಮಳೆ ಬರುತ್ತಾ?

ಕೇಕ್ ಕತ್ತರಿಸುವ ವಿಶೇಷ ಕ್ಷಣ
‘ಕಾಂತಾರ’ ಎಂದು ಬರೆದಿರುವ ಕೇಕ್ ತಂಡದವರು ಕತ್ತರಿಸಿದರು. ಹೊಂಬಾಳೆ ಫಿಲ್ಮ್ಸ್ ತಮ್ಮ ಪೋಸ್ಟ್ನಲ್ಲಿ “ಈ ಗೆಲುವು ಕೇವಲ ನಮ್ಮದಲ್ಲ, ಎಲ್ಲರದ್ದು. ನಿಮ್ಮ ಪ್ರೀತಿಗೆ ಎಂದೆಂದಿಗೂ ಋಣಿ” ಎಂದು ಕ್ಯಾಪ್ಶನ್ ಹಾಕಿ, ಗೆಲುವನ್ನು ಪ್ರೇಕ್ಷಕರಿಗೆ ಅರ್ಪಿಸಿದೆ
ತಂಡದಿಂದ ಸಂಭ್ರಮಾಚರಣೆ
ನಾಯಕ ರಿಷಬ್ ಶೆಟ್ಟಿ, ಅವರ ಪತ್ನಿ ಪ್ರಗತಿ ಶೆಟ್ಟಿ, ನಟಿ ರುಕ್ಮಿಣಿ ವಸಂತ್, ನಿರ್ಮಾಪಕ ವಿಜಯ್ ಕಿರಗಂದೂರು ಸೇರಿದಂತೆ ಇಡೀ ತಂಡ ಸೆಲೆಬ್ರೇಷನ್ನಲ್ಲಿ ಭಾಗಿಯಾಗಿ ಖುಷಿಯ ಕ್ಷಣಗಳನ್ನು ಹಂಚಿಕೊಂಡರು.

OTT ರಿಲೀಸ್
ಇನ್ನು ‘ಕಾಂತಾರ ಚಾಪ್ಟರ್ 1’ ಸಿನಿಮಾ ರಿಲೀಸ್ ಆದ 30 ದಿನದ ಒಳಗೆ OTT ವೇದಿಕೆಗಳಿಗೆ ಕಾಲಿಟ್ಟಿದ್ದು, ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರೇಕ್ಷಕರು ಸಿನಿಮಾ ನೋಡಬಹುದಾಗಿದೆ. ಒಟಿಟಿಯಲ್ಲಿಯೂ ಈ ಚಿತ್ರ ಭರ್ಜರಿ ಮೆಚ್ಚುಗೆ ಪಡೆಯುತ್ತಿದೆ.

ಇದನ್ನು ನೋಡಿ : ಡಿಸೆಂಬರ್ 1ರಿಂದ 19ರವರೆಗೆ ಸಂಸತ್ ಚಳಿಗಾಲದ ಅಧಿವೇಶನ




