Mysuru : ಮೈಸೂರಿನಲ್ಲಿ ಫ್ಲೈ ಓವರ್ ನಿರ್ಮಾಣವನ್ನು ವಿರೋಧಿಸಿ ಸಂಸದ ಯದುವೀರ್, ಸಿಎಂ ಸಿದ್ದರಾಮಯ್ಯನವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.

ಮೈಸೂರು ನಗರದಲ್ಲಿ ಪ್ರಸ್ತಾವಿತ ಫ್ಲೈಓವರ್ (Flyover) ನಿರ್ಮಾಣ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುದೀರ್ಘ ಪತ್ರ ಬರೆದು ತಮ್ಮ ಕಳವಳವನ್ನು ತಿಳಿಸಿದ್ದಾರೆ.
ಯದುವೀರ್ ತಮ್ಮ ಪತ್ರದಲ್ಲಿ, ಮೈಸೂರು ನಗರ ಬೆಳೆಯುತ್ತಿದ್ದರೂ ಅಭಿವೃದ್ಧಿಯು ಪಾರದರ್ಶಕವಾಗಿರಬೇಕು, ದತ್ತಾಂಶ ಆಧಾರಿತವಾಗಿರಬೇಕು ಮತ್ತು ನಗರ ಪರಂಪರೆಯಲ್ಲಿ ಬೇರೂರಿರಬೇಕು ಎಂದು ತಿಳಿಸಿದ್ದಾರೆ.
“ಮೈಸೂರಿನ ಪರಂಪರೆ ಕಾಪಾಡಬೇಕು”
ವಿನೋಬಾ ರಸ್ತೆ ಮತ್ತು ಝಾನ್ಸಿ ರಾಣಿ ಲಕ್ಷ್ಮಿಬಾಯಿ ರಸ್ತೆಯಲ್ಲಿ ಪ್ರಸ್ತಾವಿತ ಮೇಲ್ಸೇತುವೆಗಳ (Flyover) ಬಗ್ಗೆ ಕಳವಳ ವ್ಯಕ್ತಪಡಿಸಿದ ಯದುವೀರ್, “ಯೋಜಿತವಲ್ಲದ ನಗರ ವಿಸ್ತರಣೆ ಮೈಸೂರಿನ ಪರಂಪರೆಯ ಗುರುತನ್ನು ಅಳಿಸಬಾರದು. ತನ್ನ ಸೊಬಗು, ಹಸಿರು ಮತ್ತು ಸಾಂಸ್ಕೃತಿಕತೆಯನ್ನು ಕಳೆದುಕೊಳ್ಳದೆ ಪರಿಣಾಮಕಾರಿಯಾಗಿ ಚಲಿಸುವ ಆಧುನಿಕ ಮೈಸೂರನ್ನು ನಿರ್ಮಿಸಬೇಕು” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನು ಓದಿ : ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾದಲ್ಲಿ ಗಿಲ್ಲಿ ನಟ – ಪೋಸ್ಟರ್ ರಿಲೀಸ್

ಪತ್ರದ ಪ್ರಮುಖ ಅಂಶಗಳು
- ಪ್ರಸ್ತಾವಿತ ಯೋಜನೆಗೆ ಸಾರ್ವಜನಿಕವಾಗಿ ಲಭ್ಯವಿರುವ ಸಂಚಾರ ಅಧ್ಯಯನ (Traffic Study) ಅಥವಾ ನಾಗರಿಕ ಸಮಾಲೋಚನೆ (Public Consultation) ಇಲ್ಲ.
- ಇಂತಹ ದೊಡ್ಡ ಪ್ರಮಾಣದ ಯೋಜನೆಗಳು ಮೈಸೂರಿನ ಪರಂಪರೆಯ ಭೂದೃಶ್ಯಕ್ಕೆ (Heritage Landscape) ಬದಲಾಯಿಸಲಾಗದ ಹಾನಿ ಉಂಟುಮಾಡಬಹುದು.
- ನೂರಾರು ಹೆಮ್ಮರಗಳನ್ನು ಕಡಿಯುವ ಸಾಧ್ಯತೆ – ಪರಿಸರ ಮತ್ತು ನಗರದ ಸೌಂದರ್ಯಕ್ಕೆ ಧಕ್ಕೆ.
- ನಗರದ ಸೌಂದರ್ಯ ಮತ್ತು ಸಾಂಸ್ಕೃತಿಕ ಸಾಮರಸ್ಯವನ್ನು ಶಾಶ್ವತವಾಗಿ ಬದಲಾಯಿಸಬಹುದು.
ಫ್ಲೈಓವರ್ಗಳ ಬದಲಿಗೆ ಯದುವೀರ್ ನೀಡಿದ ಸಲಹೆಗಳು
ಸ್ಮಾರ್ಟ್ ಮತ್ತು ಸಸ್ಟೇನಬಲ್ ಅಭಿವೃದ್ಧಿಗಾಗಿ ಯದುವೀರ್ ಈ ಕೆಳಗಿನ ಕ್ರಮಗಳನ್ನು ಮುಂದಿಟ್ಟಿದ್ದಾರೆ –
- ಸ್ಮಾರ್ಟ್ ಸಂಚಾರ ನಿರ್ವಹಣೆ (Smart Traffic Management) ಮತ್ತು ಸಿಂಕ್ರೊನೈಸ್ ಮಾಡಿದ ಟ್ರಾಫಿಕ್ ಸಿಗ್ನಲ್ಗಳು.
- ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸುಧಾರಣೆ ಮತ್ತು ಎಲ್ಲರಿಗೂ ಸುಲಭ ಪ್ರವೇಶ (Accessibility).
- ಅಕ್ರಮ ಪಾರ್ಕಿಂಗ್ ಮತ್ತು ಅತಿಕ್ರಮಣಗಳ ವಿರುದ್ಧ ಕಠಿಣ ಕ್ರಮ.
- ಎಕ್ಸ್ನಲ್ಲಿ ಯದುವೀರ್ ಹಂಚಿಕೊಂಡ ಪೋಸ್ಟ್
ಎಕ್ಸ್ನಲ್ಲಿ ಯದುವೀರ್ ಹಂಚಿಕೊಂಡ ಪೋಸ್ಟ್

ಯದುವೀರ್ ತಮ್ಮ ಪತ್ರದ ವಿಷಯವನ್ನು ಎಕ್ಸ್ (X) ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದು, ನಾಗರಿಕರು ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳು ಜವಾಬ್ದಾರಿಯುತ ರೀತಿಯಲ್ಲಿ ಮುಂದಿನ ಹೆಜ್ಜೆ ಇಡುವಂತೆ ಕೋರಿದ್ದಾರೆ.
ಇದನ್ನು ನೋಡಿ : ಮೈಸೂರಿನಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ಯದುವೀರ್ ವಿರೋಧ; ಬದಲಿ ಕ್ರಮಕ್ಕಾಗಿ ಸಿಎಂಗೆ ಪತ್ರ




