KARNATAKA POLITICS: ಒಂದ್ಕಡೆ ನವೆಂಬರ್ ಕ್ರಾಂತಿಯ ಚರ್ಚೆಯಾಗ್ತಿದ್ರೆ, ಈ ನಡುವೆಯೇ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸಕ್ಕೆ ಮುಹೂರ್ತ ಫಿಕ್ಸಾಗಿದೆ. ಆದ್ರೆ ಹೈಕಮಾಂಡ್ ನಾಯಕರ ಮುಂದೆ ಸಿಎಂ ಬದಲಾವಣೆ ಚರ್ಚೆಯಾಗುತ್ತಾ ಅನ್ನೋ ಪ್ರಶ್ನೆಗಳೂ ಮೂಡಿದೆ. ಆದ್ರೆ ಈ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆಯ ಬಾಣ ಬಿಟ್ಟಿದ್ದಾರೆ.

KARNATAKA POLITICS: ರಾಜ್ಯ ರಾಜಕೀಯದಲ್ಲಿ ಒಂದ್ಕಡೆ “ನವೆಂಬರ್ ಕ್ರಾಂತಿ” ಎಂಬ ಚರ್ಚೆ ನಡೆಯುತ್ತಿದ್ರೆ, ಇನ್ನೊಂದು ಕಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಪ್ರವಾಸಕ್ಕೂ ಮುಹೂರ್ತ ನಿಗದಿಯಾಗಿದೆ. ಇದೇ ವೇಳೆ ಕಾಂಗ್ರೆಸ್ ಹೈಕಮಾಂಡ್ ಮುಂದೆ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿದೆಯಾ? ಎಂಬ ಪ್ರಶ್ನೆಯೂ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದೀಗ ಸಿಎಂ ಸಿದ್ದರಾಮಯ್ಯ ಅವರು ನೇರವಾಗಿ ಸಂಪುಟ ವಿಸ್ತರಣೆಯ ಬಾಣ ಬಿಟ್ಟಿದ್ದಾರೆ. ನಾಯಕತ್ವ ಬದಲಾವಣೆನಾ? ಸಂಪುಟ ವಿಸ್ತರಣೆನಾ? — ಎನ್ನುವ ಗೊಂದಲದಲ್ಲಿ ರಾಜ್ಯ ಕಾಂಗ್ರೆಸ್ ಅಂಗಳದಲ್ಲಿ ಇನ್ನಷ್ಟು ಗದ್ದಲಗೊಂಡಿದೆ. ಬಿಹಾರ ಚುನಾವಣೆಯ ನಂತರ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡೋದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ನವೆಂಬರ್ 15ರಂದು ದೆಹಲಿ ಯಾತ್ರೆ ಕೈಗೊಳ್ಳುವ ವಿಷಯವನ್ನೂ ಅವರು ಮಾಧ್ಯಮಗಳ ಎದುರೇ ಘೋಷಿಸಿದ್ದಾರೆ.
ಇದನ್ನೂ ಓದಿ: POLITICAL NEWS: ಬೆಂಗಳೂರಿನ ಟನಲ್ ರಸ್ತೆ ಯೋಜನೆಗೆ ವಿರೋಧ – ಡಿಸಿಎಂನಿಂದ ತಿರುಗೇಟು!
ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಬಿಹಾರ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿರುವ ಹಿನ್ನೆಲೆಯಲ್ಲಿ, ಆ ಚುನಾವಣೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆಗಳ ಚಕ್ರ ಸುತ್ತಲಿದೆ ಎಂಬ ಊಹಾಪೋಹಗಳಿಗೆ ಈಗ ಹೊಸ ಬಲ ಸಿಕ್ಕಂತಾಗಿದೆ. ಇದೇ ವೇಳೆ ನಿನ್ನೆ ಬೆಂಗಳೂರಿನಲ್ಲಿ ನಡೆದ ಬಿಹಾರ ಸಮಾಜದ ಕಾರ್ಯಕ್ರಮದಲ್ಲಿ, “ಡಿ.ಕೆ.ಶಿವಕುಮಾರ್ ಸಿಎಂ ಆಗಲಿ” ಎಂಬ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಪಕ್ಷದ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಕಾವುಗೊಂಡಿವೆ.
MUST WATCH: CM SEAT FIGHT IN KARNATAKA | ರಾಜ್ಯದಲ್ಲಿ CM ಕುರ್ಚಿಗಾಗಿ ಫೈಟ್




