Actor Dharmendra : ಬಾಲಿವುಡ್ ನಟ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ

ಬಾಲಿವುಡ್ ಖ್ಯಾತ ಹಿರಿಯ ನಟ ಧರ್ಮೇಂದ್ರ (Dharmendra) ಅವರ ಆರೋಗ್ಯದಲ್ಲಿ ಏರುಪೇರೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳಿಂದತಿಳಿದುಬಂದಿದೆ.
ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲು
89 ವರ್ಷದ ಧರ್ಮೇಂದ್ರ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಟುಂಬದ ಮೂಲಗಳು ಶನಿವಾರ ತಿಳಿಸಿವೆ. ಈ ವಾರದ ಆರಂಭದಲ್ಲಿ ಅವರು ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಒಂದೇ ವಾರದ ಅಂತರದಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ : ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಆರೋಗ್ಯದಲ್ಲಿ ಏರುಪೇರು?, ಆಸ್ಪತ್ರೆಗೆ ದಾಖಲು
ಕುಟುಂಬದ ಸ್ಪಷ್ಟನೆ
ಹಿಂದಿನ ವೈದ್ಯಕೀಯ ಪರೀಕ್ಷಾ ವರದಿಗಳು ತಡವಾದ್ದರಿಂದ ದಿನನಿತ್ಯದ ತಪಾಸಣೆಗಳು ಸರಿಯಾಗಿ ನಡೆಯುವವರೆಗೆ ಅವರು ಆಸ್ಪತ್ರೆಯಲ್ಲೇ ಇರಲು ನಿರ್ಧರಿಸಲಾಗಿದೆ. “ಅವರಿಗೆ ವಯಸ್ಸಾಗಿದ್ದು, ವೈದ್ಯರಿಂದ ನಿರಂತರ ಗಮನ ಅಗತ್ಯವಿದೆ. ಚಿಂತಿಸಲು ಏನೂ ಇಲ್ಲ,” ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಭಿಮಾನಿಗಳ ಪ್ರಾರ್ಥನೆಗಳು
ಇನ್ನು ಧರ್ಮೇಂದ್ರ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಹಿರಿಯ ನಟರು ಶೀಘ್ರ ಗುಣಮುಖರಾಗಲಿ ಎಂಬ ಹಾರೈಕೆಗಳು ಹರಿದಾಡುತ್ತಿವೆ.
ಇದನ್ನು ನೋಡಿ : ಟೆನಿಸ್ ಬದುಕಿಗೆ ವಿದಾಯ ಹೇಳಿದ ರೋಹನ್ ಬೋಪಣ್ಣ




