Rohan Bopanna Retirement : 22 ವರ್ಷಗಳ ಕಾಲ ಟೆನಿಸ್ ಲೋಕದಲ್ಲಿ ಮಿಂಚಿದ್ದ ಕನ್ನಡಿಗ ರೋಹನ್ ಬೋಪಣ್ಣ ತಮ್ಮ ಅದ್ಭುತ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.

ಕನ್ನಡಿಗ ಟೆನಿಸ್ ತಾರೆ ರೋಹನ್ ಬೋಪಣ್ಣ ತಮ್ಮ 22 ವರ್ಷಗಳ ಯಶಸ್ವಿ ವೃತ್ತಿಜೀವನಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಪ್ಯಾರಿಸ್ ಮಾಸ್ಟರ್ಸ್ 1000 ಟೂರ್ನಿಯಲ್ಲಿ ಅಲೆಕ್ಸಾಂಡರ್ ಬುಬ್ಲಿಕ್ ಅವರೊಂದಿಗೆ ತಮ್ಮ ಕೊನೆಯ ಪಂದ್ಯವನ್ನು ಆಡಿದ ಬೋಪಣ್ಣ, ಬಳಿಕ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ.
ಇತಿಹಾಸ ನಿರ್ಮಿಸಿದ ಭಾರತೀಯ ತಾರೆ
ಈ ವರ್ಷದ ಆರಂಭದಲ್ಲೇ ಬೋಪಣ್ಣ ಅತ್ಯಂತ ಹಿರಿಯ ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ವಿಜೇತರಾಗಿದ್ದು, ವಿಶ್ವದ ಅತ್ಯಂತ ಹಿರಿಯ ನಂಬರ್ 1 ಡಬಲ್ಸ್ ಆಟಗಾರ ಎಂಬ ಗೌರವವನ್ನು ಪಡೆದಿದ್ದರು. ತಮ್ಮ ಸ್ಥೈರ್ಯ, ಶ್ರಮ ಮತ್ತು ಅಚ್ಚಳಿಯ ಕ್ರೀಡಾ ಮನೋಭಾವದಿಂದ ಅವರು ಯುವ ಆಟಗಾರರಿಗೆ ಪ್ರೇರಣೆಯಾದರು.
ಭಾವನಾತ್ಮಕವಾಗಿ ಹಂಚಿಕೊಂಡ ನಿವೃತ್ತಿ ಸಂದೇಶ
ಸೋಶಿಯಲ್ ಮೀಡಿಯಾದಲ್ಲಿ ನಿವೃತ್ತಿ ಘೋಷಿಸಿದ ಬೋಪಣ್ಣ ತಮ್ಮ ಮನದಾಳದ ಭಾವನೆಗಳನ್ನು ಹೀಗೆ ಹಂಚಿಕೊಂಡಿದ್ದಾರೆ. ನಿಮ್ಮ ಜೀವನಕ್ಕೆ ಅರ್ಥ ನೀಡಿದ ವಿಷಯಕ್ಕೆ ನೀವು ಹೇಗೆ ವಿದಾಯ ಹೇಳುತ್ತೀರಿ? 20 ಮರೆಯಲಾಗದ ವರ್ಷಗಳ ಪ್ರವಾಸದ ನಂತರ, ಈಗ ಸಮಯ ಬಂದಿದೆ… ನಾನು ಅಧಿಕೃತವಾಗಿ ನನ್ನ ಟೆನಿಸ್ ರಾಕೆಟ್ ಅನ್ನು ನೇತುಹಾಕುತ್ತಿದ್ದೇನೆ.
ಭಾರತವನ್ನು ಪ್ರತಿನಿಧಿಸುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿದೆ ಮತ್ತು ನಾನು ಪ್ರತಿ ಬಾರಿ ಕೋರ್ಟ್ಗೆ ಕಾಲಿಟ್ಟಾಗಲೂ ಆ ಧ್ವಜಕ್ಕಾಗಿ, ಆ ಭಾವನೆಗಾಗಿ ಮತ್ತು ಆ ಹೆಮ್ಮೆಗಾಗಿ ಆಡಿದ್ದೇನೆ. ಟೆನಿಸ್ ನನಗೆ ಕೇವಲ ಕ್ರೀಡೆಗಿಂತ ಹೆಚ್ಚಿನದಾಗಿದೆ.
ಇದನ್ನು ಓದಿ : ಬಿಗ್ ಬಾಸ್ನಲ್ಲಿ ಕನ್ನಡದ ಕಂಪು | ವಿಶ್ ತಿಳಿಸಿದ ಸುದೀಪ್

ನಾನು ಸೋತಾಗ ಅದು ನನಗೆ ಉದ್ದೇಶವನ್ನು ಹಾಗೂ ಶಕ್ತಿ ನೀಡಿತು ಮತ್ತು ಜಗತ್ತು ನನ್ನನ್ನು ಅನುಮಾನಿಸಿ ದಾಗ ಆತ್ಮವಿಶ್ವಾಸವನ್ನು ನೀಡಿತು.
ಪ್ರತಿ ಬಾರಿ ನಾನು ಕೋರ್ಟ್ಗೆ ಕಾಲಿಟ್ಟಾಗ ಪರಿಶ್ರಮ, ಮತ್ತೆ ಮೇಲೇರಲು ಸ್ಥಿತಿಸ್ಥಾಪಕತ್ವ ಮತ್ತು ಮತ್ತೆ ಹೋರಾಡಲು ಧೈರ್ಯವನ್ನು ಕಲಿಸಿತು ಎಂದಿದ್ದಾರೆ.
ದೇಶಕ್ಕಾಗಿ ಆಡಿದ ಹೆಮ್ಮೆಯ ಕ್ಷಣಗಳು
ಬೋಪಣ್ಣ ಅವರು ಹಲವು ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಅನೇಕ ಸಾಧನೆಗಳನ್ನು ಮಾಡಿದರು. ಡೇವಿಸ್ ಕಪ್ನಿಂದ ಹಿಡಿದು ಒಲಿಂಪಿಕ್ಸ್ ತನಕ, ಅವರು ತಮ್ಮ ಸರ್ವೋತ್ತಮ ಪ್ರದರ್ಶನ ನೀಡಿ ದೇಶದ ಗೌರವವನ್ನು ಹೆಚ್ಚಿಸಿದರು.
ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ
ಬೋಪಣ್ಣ ಅವರ ನಿವೃತ್ತಿ ಘೋಷಣೆಯ ನಂತರ ಟೆನಿಸ್ ಅಭಿಮಾನಿಗಳು ಮತ್ತು ಸಹ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಹಾಗೂ ಧನ್ಯವಾದ ಸಂದೇಶಗಳನ್ನು ಹಂಚಿಕೊಂಡಿದ್ದಾರೆ.
ಇನ್ನು “ಭಾರತದ ಟೆನಿಸ್ಗೆ ಬೋಪಣ್ಣ ಮಾಡಿದ ಕೊಡುಗೆ ಸದಾಕಾಲ ಸ್ಮರಣೀಯ” ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ನೋಡಿ : 22 ವರ್ಷಗಳ ಟೆನಿಸ್ ಬದುಕಿಗೆ ವಿದಾಯ ಹೇಳಿದ ರೋಹನ್ ಬೋಪಣ್ಣ




