BBK : ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮನೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗಿದೆ.

BBK : ‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ನವೆಂಬರ್ 1ರ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಇನ್ನುಈ ವಿಶೇಷ ಕ್ಷಣಗಳ ಪ್ರೋಮೋ ವಿಡಿಯೊವನ್ನು ಕಲರ್ಸ್ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಇದನ್ನು ಓದಿ : ನಿಮ್ಹಾನ್ಸ್ ನಲ್ಲಿ ಉದ್ಯೋಗವಕಾಶ
“ಕನ್ನಡ ರಾಜ್ಯೋತ್ಸವದ ವಿಶ್ ಮಾಡಿದ ಸುದೀಪ್
ಇನ್ನು ಈ ಪ್ರೋಮೋದಲ್ಲಿ ವೇದಿಕೆ ಏರುತ್ತಿರುವ ಸುದೀಪ್ ಅವರು ತಮ್ಮ ವಿಶಿಷ್ಟ ಶೈಲಿಯಲ್ಲಿ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ. ಮನೆಯ ಸ್ಪರ್ಧಿಗಳು ಕೂಡ ಕನ್ನಡದ ಪರಂಪರೆ, ಸಂಸ್ಕೃತಿ ಮತ್ತು ಭಾಷೆಯ ಮಹಿಮೆ ಕುರಿತಾಗಿ ಸಂಭ್ರಮ ವ್ಯಕ್ತಪಡಿಸಿರುವುದು ಗಮನಾರ್ಹ.
ಇಂದು ಸಂಜೆ ಪ್ರಸಾರವಾಗಲಿರುವ ಬಿಗ್ ಬಾಸ್ ಎಪಿಸೋಡಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮನೆಯೊಳಗೆ ಯಾವ ರೀತಿಯ ಚರ್ಚೆಗಳು, ಟಾಸ್ಕ್ಗಳು ಮತ್ತು ಉತ್ಸವಗಳು ನಡೆಯುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನು ನೋಡಿ : ಬಿಗ್ ಬಾಸ್ನಲ್ಲಿ ಕನ್ನಡದ ಕಂಪು




