Kitchen recipe : ಮಶ್ರೂಮ್ ಫ್ರೈ ಒಂದು ಸರಳ, ರುಚಿಕರ ಹಾಗೂ ಪೌಷ್ಟಿಕ ಅಡುಗೆ. ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೆ ಪರಿಪೂರ್ಣವಾದ ಈ ಸೈಡ್ ಡಿಶ್ ಅನ್ನು ರೊಟ್ಟಿ, ಚಪಾತಿ ಅಥವಾ ಅನ್ನದ ಜೊತೆ ಸವಿಯಬಹುದು.

ಬೇಕಾಗುವ ಪದಾರ್ಥಗಳು (Ingredients for Mushroom Fry)
- ಮಶ್ರೂಮ್ – 1 ಬಟ್ಟಲು
- ಶುಂಠಿ – ಸ್ವಲ್ಪ
- ಹಸಿ ಮೆಣಸಿನಕಾಯಿ – 6
- ಬೆಳ್ಳುಳ್ಳಿ – 7 ಎಸಳು
- ಖಾರದ ಪುಡಿ – 1 ಚಮಚ
- ಅರಿಶಿನ ಪುಡಿ – ½ ಚಮಚ
- ಗರಂ ಮಸಾಲಾ – 1 ಚಮಚ
- ಕಾಳುಮೆಣಸಿನ ಪುಡಿ – ½ ಚಮಚ
- ಈರುಳ್ಳಿ – 1 (ಚಿಕ್ಕದಾಗಿ ಕತ್ತರಿಸಿ)
- ಟೊಮೇಟೊ – 2 (ಚಿಕ್ಕದಾಗಿ ಕತ್ತರಿಸಿ)
- ಉಪ್ಪು – ರುಚಿಗೆ ತಕ್ಕಷ್ಟು
- ಎಣ್ಣೆ – ಸ್ವಲ್ಪ
- ಕರಿಬೇವು – ಸ್ವಲ್ಪ
MUST READ : Kitchen recipe : ಹಾಗಲಕಾಯಿ ಟೊಮೆಟೊ ಪಲ್ಯ
ಮಾಡುವ ವಿಧಾನ (How to Make Mushroom Fry)
- ಪೇಸ್ಟ್ ತಯಾರಿಸಿ: ಶುಂಠಿ, ಹಸಿ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ.
- ಮಸಾಲೆ ಹುರಿಯಿರಿ: ಪ್ಯಾನ್ನಲ್ಲಿ ಎಣ್ಣೆ ಹಾಕಿ ಕಾದ ನಂತರ ರುಬ್ಬಿದ ಪೇಸ್ಟ್ ಸೇರಿಸಿ. 2 ನಿಮಿಷ ಕೈಯಾಡಿಸಿ ಹುರಿಯಿರಿ.
- ಮಸಾಲೆ ಪುಡಿಗಳನ್ನು ಸೇರಿಸಿ: ಖಾರದ ಪುಡಿ, ಅರಿಶಿನ ಪುಡಿ, ಗರಂ ಮಸಾಲಾ, ಕಾಳುಮೆಣಸಿನ ಪುಡಿ, ಈರುಳ್ಳಿ ಮತ್ತು ಟೊಮೇಟೊ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಕೆಂಪಾಗುವವರೆಗೆ ಹುರಿಯಿರಿ.
- ನೀರು ಮತ್ತು ಉಪ್ಪು ಸೇರಿಸಿ: ಸ್ವಲ್ಪ ನೀರು ಹಾಕಿ ಕುದಿಸಿ, ನಂತರ ಉಪ್ಪು ಸೇರಿಸಿ.
- ಮಶ್ರೂಮ್ ಸೇರಿಸಿ: ಚೆನ್ನಾಗಿ ತೊಳೆದು ಕತ್ತರಿಸಿದ ಮಶ್ರೂಮ್ಗಳನ್ನು ಸೇರಿಸಿ. ಸಣ್ಣ ಉರಿಯಲ್ಲಿ ಬೇಯಿಸಿ ನೀರು ಇಂಗಿದ ಮೇಲೆ ಗ್ರೇವಿ ಗಟ್ಟಿಯಾಗುವವರೆಗೂ ಕಾಯಿರಿ.
ಗ್ರೇವಿ ಗಟ್ಟಿಯಾದ ಮೇಲೆ ಗ್ಯಾಸ್ ಇಳಿಸಿ. ರುಚಿಕರವಾದ ಮಶ್ರೂಮ್ ಫ್ರೈ ಸವಿಯಲು ಸಿದ್ಧವಾಗಿದೆ! ಈ ಡಿಶ್ನ್ನು ಚಪಾತಿ, ಫುಲ್ಕಾ ಅಥವಾ ಅನ್ನದ ಜೊತೆ ಬಿಸಿಬಿಸಿ ತಿನ್ನಿ.
ಸಲಹೆಗಳು (Tips)
- ಪ್ಯಾನ್ನಲ್ಲಿ ಎಣ್ಣೆ ಬಿಸಿ ಆಗಿದ ನಂತರ ಮಾತ್ರ ಪೇಸ್ಟ್ ಹಾಕಿ.
- ಮಶ್ರೂಮ್ಗಳನ್ನು ಬೇಯಿಸುವಾಗ ಹೆಚ್ಚು ನೀರು ಸೇರಿಸಬೇಡಿ.
- ಕೊನೆಯಲ್ಲಿ ಸ್ವಲ್ಪ ಕರಿಬೇವು ಸೇರಿಸಿ.
WATCH NOW : ವಿಗ್ರಹದ ಮೇಲೆ ಕಾಲಿಟ್ಟು ಹುಚ್ಚಾಟ – ದೇವರಿಗೆ ಇದೆಂಥಾ ಅವಮಾನ | CHIKKABALLAPURA NEWS |




